Karnataka Times
Trending Stories, Viral News, Gossips & Everything in Kannada

Govt vs Private Bank: ಸರ್ಕಾರಿ ಮತ್ತು ಖಾಸಗಿ ಬ್ಯಾಂಕುಗಳ ನಡುವಿನ ವ್ಯತ್ಯಾಸ ಏನು? ಹಣ ಎಲ್ಲಿ ಸುರಕ್ಷಿತ ಇರುತ್ತೆ ತಿಳಿದುಕೊಳ್ಳಿ!

advertisement

ಇವತ್ತಿನ ದಿನದಲ್ಲಿ ಬ್ಯಾಂಕಿಂಗ್ ಸೌಲಭ್ಯ ಬಹಳ ಮುಖ್ಯವಾಗಿರುವ ವಿಷಯವಾಗಿದೆ. ಹಾಗೂ ಸಾಮಾನ್ಯರು ಕೂಡ ಬ್ಯಾಂಕಿಂಗ್ ಮೂಲಕ ಹಣಕಾಸಿನ ವ್ಯವಹಾರವನ್ನು ನಡೆಸುತ್ತಾರೆ. ಬ್ಯಾಂಕ್ ಇಲ್ಲದೆ ಪೂರ್ಣಗೊಳ್ಳುವುದಿಲ್ಲ. ಒಬ್ಬರಿಗೆ ಹಣ ಕೊಡುವುದಿರಬಹುದು ಅಥವಾ ತೆಗೆದುಕೊಳ್ಳುವುದಿರಬಹುದು, ನಮಗೆ ಅಗತ್ಯ ಇದ್ದಾಗ ಸಾಲ ಪಡೆದುಕೊಳ್ಳುವುದಕ್ಕಿರಬಹುದು ಎಲ್ಲದಕ್ಕೂ ಬ್ಯಾಂಕಿನ ಮೂಲಕ ನಮ್ಮ ಅನುಕೂಲತೆಗಳನ್ನು ಪಡೆದುಕೊಳ್ಳಬಹುದು.

ನಮ್ಮ ಅಗತ್ಯಗಳಿಗೆ ತಕ್ಕ ಹಾಗೆ ಬ್ಯಾಂಕುಗಳಲ್ಲಿಯೂ ಕೂಡ ಬೇರೆ ಬೇರೆ ರೀತಿಯ ವ್ಯವಸ್ಥೆ ಇರುತ್ತದೆ. ಉದಾಹರಣೆಗೆ ಸರ್ಕಾರಿ ಬ್ಯಾಂಕುಗಳು (Govt Banks) ಖಾಸಗಿ ಬ್ಯಾಂಕುಗಳು (Private Banks) ಅಥವಾ ನಾನ್ ಬ್ಯಾಂಕಿಂಗ್ ಸೆಕ್ಟರ್ ಹೀಗೆ ಹಣಕಾಸು ವ್ಯವಸ್ಥೆ ಹೊಂದಿರುವ ಬೇರೆ ಬೇರೆ ರೀತಿಯ ಸಂಸ್ಥೆಗಳನ್ನು ನಾವು ನೋಡಬಹುದು. ಆದರೆ ನಮ್ಮ ಬ್ಯಾಂಕಿಂಗ್ ವ್ಯವಹಾರವನ್ನು ಎಲ್ಲಿ ಮಾಡಿದರೆ ಹೆಚ್ಚು ಸೇಫ್ ಎನ್ನುವ ಬಗ್ಗೆ ಹಲವರಲ್ಲಿ ಗೊಂದಲ ಇದ್ದೇ ಇರುತ್ತದೆ. ಈ ನಿಮ್ಮ ಸಮಸ್ಯೆಯನ್ನು ನಾವು ಇಂದು ಪರಿಹರಿಸಲಿದ್ದೇವೆ. ಬ್ಯಾಂಕುಗಳ ನಡುವಿನ ವ್ಯತ್ಯಾಸವನ್ನು ನಾವು ಇಂದು ತಿಳಿಸಿಕೊಡುತ್ತೇವೆ.

ಬ್ಯಾಂಕುಗಳಿಗೆ ಆರ್‌ಬಿಐ ಕೇಂದ್ರ ಆಗಿರುತ್ತೆ:

 

 

advertisement

ಖಾಸಗಿ ಬ್ಯಾಂಕ್ ಆಗಿರಲಿ ಅಥವಾ ಸರ್ಕಾರಿ ಬ್ಯಾಂಕ್ (Govt vs Private Bank) ಆಗಿರಲಿ ಈ ಬ್ಯಾಂಕುಗಳ ಮೇಲೆ ಹಿಡಿತ ಹೊಂದಿರುವುದು ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India). ಇದನ್ನ ಬ್ಯಾಂಕುಗಳ ಮುಖ್ಯಸ್ಥ ಎಂದು ಕರೆಯಬಹುದು ಯಾಕೆಂದರೆ ಬ್ಯಾಂಕ್ನ ಎಲ್ಲಾ ಚಲನವಲನಗಳ ಮೇಲೆ RBI ಕಣ್ಣಿಟ್ಟಿರುತ್ತೆ. ಬ್ಯಾಂಕುಗಳ ವಿವಾರದಲ್ಲಿ ಯಾವುದೇ ರೀತಿಯ ಲೋಪ ದೋಷಗಳು ಆದರೂ ಕೂಡ ಆರ್‌ಬಿಐ ಅಂತಹ ಬ್ಯಾಂಕ್ ಅನ್ನು ತರಾಟೆಗೆ ತೆಗೆದುಕೊಳ್ಳುವ ಹಕ್ಕು ಹೊಂದಿರುತ್ತದೆ.

ಬ್ಯಾಂಕುಗಳ ನಡುವಿನ ವ್ಯತ್ಯಾಸ:

ಸಾರ್ವಜನಿಕ ವಲಯದ ಬ್ಯಾಂಕ್ಗಳಲ್ಲಿ ಸರ್ಕಾರ 50% ನಷ್ಟು ಪಾಲುದಾರಿಕೆಯನ್ನು ಹೊಂದಿರುತ್ತೆ. ಅದೇ ರೀತಿ ಖಾಸಗಿ ಬ್ಯಾಂಕುಗಳಲ್ಲಿ ಷೇರುದಾರರು ಶೇಕಡ 50% ನಷ್ಟು ಪಾಲನ್ನು ಹೊಂದಿರುತ್ತಾರೆ. ಎಲ್ಲಿ ಸರ್ಕಾರದ ಪಾಲುದಾರಿಕೆ ಹೆಚ್ಚಿದೆಯೋ ಅಂತಹ ಬ್ಯಾಂಕ್ ಸರ್ಕಾರದಿಂದ ನಿಯಂತ್ರಿಸಲ್ಪಡುತ್ತದೆ. ಹಾಗೂ ಎಲ್ಲಿ ಷೇರುದಾರರ ನಿಯಂತ್ರಣ ಹೆಚ್ಚಿರುತ್ತದೆಯೋ ಅದನ್ನು ಖಾಸಗಿ ಬ್ಯಾಂಕ್ (Private Bank) ಎಂದು ಹೇಳಲಾಗುತ್ತದೆ.

ಇನ್ನು ಸುರಕ್ಷತೆಯ ವಿಚಾರಕ್ಕೆ ಬಂದರೆ ಸರ್ಕಾರಿ ಬ್ಯಾಂಕ್ ಗಳು ಹೆಚ್ಚು ಸೇಫ್ ಎಂದು ಹೇಳಲಾಗುತ್ತದೆ. ಹಾಗಂದ ಮಾತ್ರಕ್ಕೆ ಖಾಸಗಿ ಬ್ಯಾಂಕ್ ಗಳೆಲ್ಲವೂ ದೋಖ ನೀಡುವ ಬ್ಯಾಂಕ್ ಗಳಾಗಿರುವುದಿಲ್ಲ. ಸರ್ಕಾರಿ ಬ್ಯಾಂಕುಗಳಿಗಿಂತಲೂ ಉತ್ತಮ ಹಣಕಾಸಿನ ವಹಿವಾಟು ನಡೆಸುವ ಖಾಸಗಿ ಬ್ಯಾಂಕ್ ಗಳು ಇವೆ. ಇಲ್ಲಿ ನೀವು ಬ್ಯಾಂಕ್ ಗಳು ಎಷ್ಟು ಉತ್ತಮ ಸ್ಥಿತಿಯಲ್ಲಿ ಇವೆ ಎಂಬುದನ್ನ ಗಮನಿಸಿ, ನಂತರ ಹಣಕಾಸಿನ ವ್ಯವಹಾರ ಮಾಡಿದ್ರೆ ನಿಮಗೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ.

advertisement

Leave A Reply

Your email address will not be published.