Karnataka Times
Trending Stories, Viral News, Gossips & Everything in Kannada

Bank Holiday: ಫೆಬ್ರುವರಿ ತಿಂಗಳಿನಲ್ಲಿ 11 ದಿನ ಬ್ಯಾಂಕ್ ರಜೆ; ನಿಮ್ಮ ಬ್ಯಾಂಕ್ ಕೆಲಸವನ್ನು ಮೊದಲೇ ಮಾಡಿಕೊಳ್ಳಿ!

advertisement

2024 ಹೊಸ ವರ್ಷ ಆರಂಭವಾಗಿ ಮೊದಲ ತಿಂಗಳು ಕೂಡ ಮುಗಿಯುತ್ತಿದೆ. ಜನವರಿ ತಿಂಗಳು ಕಳೆದು ಫೆಬ್ರುವರಿ ತಿಂಗಳು ಆರಂಭವಾಗುತ್ತಿದ್ದ ಹಾಗೆ ಸರ್ಕಾರ ಕೆಲವು ಕ್ಷೇತ್ರಗಳಲ್ಲಿ ನೀತಿ ನಿಯಮಗಳನ್ನು ಬದಲಾಯಿಸುತ್ತದೆ. ಅಥವಾ ಪರಿಷ್ಕರಿಸುತ್ತದೆ.

ಇನ್ನು ಇದರ ಜೊತೆಗೆ ಬ್ಯಾಂಕ್ ವ್ಯವಹಾರ ಮಾಡಿಕೊಳ್ಳುವವರು ಕೂಡ ಕೆಲವು ಪ್ರಮುಖ ವಿಚಾರಗಳನ್ನು ಗಮನಿಸಬೇಕು. ಯಾಕೆಂದರೆ ಪ್ರತಿ ತಿಂಗಳು ಬ್ಯಾಂಕುಗಳಿಗೆ ಒಂದಷ್ಟು ರಜೆ ಇರುವುದು ಸಹಜ. ಇದೀಗ ಫೆಬ್ರವರಿ ತಿಂಗಳಿನಲ್ಲಿ ಬ್ಯಾಂಕುಗಳಿಗೆ ಯಾವ ದಿನ ರಜೆ (Bank Holiday) ಇರಲಿದೆ ಎನ್ನುವುದನ್ನು Reserve Bank of India ನಿರ್ಧರಿಸಿದೆ. ಶನಿವಾರ ಹಾಗೂ ಭಾನುವಾರಗಳನ್ನು ಹೊರತುಪಡಿಸಿ ಇದರ ದಿನಗಳು ಕೂಡ ರಜೆ ಇರುವುದರಿಂದ ನಿಮ್ಮ ಬ್ಯಾಂಕಿಂಗ್ ವ್ಯವಹಾರಕ್ಕೆ ತೊಂದರೆ ಆಗಬಹುದು. ಹಾಗಾಗಿ ರಜಾ ದಿನವನ್ನು ತಿಳಿದುಕೊಂಡು ಆದಷ್ಟು ಬೇಗ ನಿಮ್ಮ ಕೆಲಸ ಪೂರ್ಣಗೊಳಿಸಿಕೊಳ್ಳಿ.

ಫೆಬ್ರವರಿ ತಿಂಗಳಿನಲ್ಲಿ ಈ ದಿನಾಂಕದಂದು ರಜೆ:

 

advertisement

 

ಫೆಬ್ರವರಿ ತಿಂಗಳಿನಲ್ಲಿ ಬ್ಯಾಂಕ್ ಗಳಿಗೆ ಯಾವಾಗ ರಜೆ ಇರಲಿದೆ ಎಂಬುದನ್ನು ನಾವು ಈ ಲೇಖನದಲ್ಲಿ ತಿಳಿಸಿದ್ದೇವೆ ಇದನ್ನು ನೀವು ನೋಡಿ ತಿಳಿದುಕೊಂಡು ಮುಂಚಿತವಾಗಿಯೇ ನಿಮ್ಮ ಬ್ಯಾಂಕಿಗೆ ಸಂಬಂಧಿಸಿದ ಕೆಲಸವನ್ನು ಮುಗಿಸಿಕೊಳ್ಳಬಹುದು. ಹೆಚ್ಚು ಚಿಂತೆ ಮಾಡದೆ ಬೇಗ ಕೆಲಸ ಮುಗಿಸಿಕೊಳ್ಳಲು ಈ ರಜಾ ದಿನದ ಪಟ್ಟಿ ನಿಮಗೆ ಸಹಾಯಕವಾಗಬಹುದು.

  • ಫೆಬ್ರುವರಿ ತಿಂಗಳಿನಲ್ಲಿ 11 ದಿನಗಳವರೆಗೆ ಬ್ಯಾಂಕ್ ಮುಚ್ಚಲ್ಪಟ್ಟಿರುತ್ತದೆ ಆ ದಿನಗಳು ಯಾವವು ಎಂಬುದನ್ನು ನೋಡುವುದಾದರೆ,
  • ಫೆಬ್ರವರಿ 4 ಭಾನುವಾರ
  • ಫೆಬ್ರವರಿ 10 ಶನಿವಾರ
  • ಫೆಬ್ರವರಿ 11 ಭಾನುವಾರ
  • ಫೆಬ್ರವರಿ 14 ತ್ರಿಪುರ, ಪಶ್ಚಿಮ ಬಂಗಾಳ, ಒರಿಸ್ಸಾ ಗಳಲ್ಲಿ ಬಸಂತ್ ಪಂಚಮಿ ಹಾಗೂ ಸರಸ್ವತಿ ಪೂಜೆ
  • ಫೆಬ್ರುವರಿ 15 ಮಣಿಪುರದಲ್ಲಿ ಲೂಯಿ ನಾಗೈ ನಿ ನಿಮಿತ್ತ ಬ್ಯಾಂಕ್ ರಜಾ
  • ಫೆಬ್ರವರಿ 18 ಭಾನುವಾರ
  • ಫೆಬ್ರವರಿ 19 – ಮಿಜೋರಾಂನಲ್ಲಿ ಹಾಗೂ ಛತ್ರಪತಿ ಶಿವಾಜಿ ಜಯಂತಿ
  • ಫೆಬ್ರವರಿ 20 – ಮಹಾರಾಷ್ಟ್ರದಲ್ಲಿ ಸ್ಟೇಟ್ ಡೆ
  • ಫೆಬ್ರವರಿ 24 -ನಾಲ್ಕನೇ ಶನಿವಾರ
  • ಫೆಬ್ರವರಿ 25 ಭಾನುವಾರ
  • ಫೆಬ್ರವರಿ 26 ಅರುಣಾಚಲ ಪ್ರದೇಶದಲ್ಲಿ ನ್ಯೋಕಮ್ ಹಬ್ಬದ ಪ್ರಯುಕ್ತ ಬ್ಯಾಂಕ್ ಗೆ ರಜೆ ಇರುತ್ತದೆ.

ಸರ್ಕಾರಿ ಹೊರತುಪಡಿಸಿ ಸ್ಥಳೀಯ ರಾಜ್ಯಗಳು ಕೂಡ ಸೇರಿಕೊಳ್ಳುತ್ತವೆ ಆಯಾ ಪ್ರದೇಶಕ್ಕೆ ತಕ್ಕಹಾಗೆ ಹಬ್ಬ ಹರಿದಿನಗಳಿಗೆ ಸಂಬಂಧಪಟ್ಟಂತೆ ರಜಾ ದಿನ ಬದಲಾಗಬಹುದು. ಈ ದಿನಾಂಕಗಳನ್ನು ನೋಟ್ ಮಾಡಿ ಇಟ್ಟುಕೊಂಡು ಅವುಗಳನ್ನು ಹೊರತುಪಡಿಸಿ ಮಿಕ್ಕ ದಿನಗಳಲ್ಲಿ ನಿಮ್ಮ ಬ್ಯಾಂಕಿಂಗ್ ವ್ಯವಹಾರವನ್ನು ಮುಗಿಸಿಕೊಳ್ಳಿ.

advertisement

Leave A Reply

Your email address will not be published.