Karnataka Times
Trending Stories, Viral News, Gossips & Everything in Kannada

Virupaksha Temple: ಹಂಪಿ ವಿರೂಪಾಕ್ಷ ದೇವಾಲಯದಲ್ಲಿ ಇಂತಹವರಿಗೆ ಎಂಟ್ರಿ ಇಲ್ಲ, ಸರ್ಕಾರದ ಆದೇಶ!

advertisement

ಇಂದು ದೇವಾಲಯಗಳಿಗೆ ಭೇಟಿ ನೀಡುವ ಸಂಖ್ಯೆ ಬಹಳಷ್ಟು ಹೆಚ್ಚಾಗಿದೆ.‌ಅದರಲ್ಲೂ ಇಂದು ದೇವಾಲಯಗಳ ಜಾತ್ರೆ ಸಮಾರಂಭಗಳು ಹೆಚ್ಚಾಗಿರುವುದರಿಂದ ದೂರದ ಊರಿನ ಪ್ರಯಾಣಿಕರು ಆಗಮಿಸುತ್ತಾರೆ.ಕಳೆದ ವರ್ಷ ಕ್ಕೆ ಹೋಲಿಸಿದರೆ ಸುಮಾರು ಎರಡು ಪಟ್ಟು ಹೆಚ್ಚು ಭಕ್ತರು ದೇವಾಲಯಕ್ಕೆ ಈ ಭಾರೀ ಭೇಟಿ ನೀಡಿದ್ದಾರೆ. ಇದೀಗ ದೇವಾಲಯಗಳಲ್ಲಿ ಕಟ್ಟುನಿಟ್ಟಿನ ಕ್ರಮ ಜಾರಿಗೆ ತಂದಿದ್ದು ಹೆಚ್ಚಿನ ದೇವಾಲಯದಲ್ಲಿ ವಸ್ತ್ರ ಸಂಹಿತೆ ನಿಯಮ ಜಾರಿಗೆ ತರಲಾಗಿದೆ.

ವಿದೇಶಿ ಪ್ರವಾಸಿಗರ ಹೆಚ್ಚಳ:

ವಿದೇಶಿ ಪ್ರವಾಸಿಗರಿನ ಆಗಮನ ಹೆಚ್ಚಾಗುತ್ತಿದ್ದು ಹೆಚ್ಚಾಗಿ ಜೀನ್ಸ್ (Jeans), ಟೀಶರ್ಟ್ (T-Shirts) ಮೂಲಕ ಬರುವುದು ಹೆಚ್ಚಾಗಿದ್ದು ಈ ಬಗ್ಗೆ ಹಿಂದೂ ಪರ ಸಂಘಟನೆಗಳು ಎಚ್ಚರಿಕೆ ನೀಡಿದೆ. ಧಾರ್ಮಿಕ ಭಾವನೆಗೆ ಧಕ್ಕೆ ತರಬಾರದು ಎಂಬ ಉದ್ದೇಶ ದಿಂದ ಈ ವಸ್ತ್ರ ಸಂಹಿತೆ ಜಾರಿ ಮಾಡಲಾಗಿದೆ.

ಈ ನಿಯಮ ಜಾರಿ:

 

 

advertisement

ಅದೇ ರೀತಿ ಇದೀಗ ವಿಶ್ವ ವಿಖ್ಯಾತ ಹಂಪಿ ವಿರೂಪಾಕ್ಷ ದೇವಾಲಯ (Virupaksha Temple) ದಲ್ಲಿಯೂ ವಸ್ತ್ರ ಸಂಹಿತೆ ಜಾರಿ ಮಾಡಲಾಗಿದ್ದು ಕಟ್ಟುನಿಟ್ಟಿನ ಕ್ರಮ ಜಾರಿಗೆ ಮಾಡಲಾಗಿದೆ. ಈ ದೇವಾಲಯಕ್ಕೆ ಬರುವ ಭಕ್ತರು ಸಾಂಪ್ರದಾಯಿಕ ಉಡುಗೆಯಲ್ಲೆ ಭೇಟಿ ಕೊಡಬೇಕು. ದೇವಸ್ಥಾನದೊಳಗೆ ಗುಟ್ಕಾ ಅಥವಾ ಯಾವುದೇ ತಂಬಾಕು ಉತ್ಪನ್ನಗಳನ್ನು ತಿನ್ನುವುದನ್ನು ನಿಷೇಧಿಸಲಾಗಿದೆ.

ಈ ಬಟ್ಟೆ ಹಾಕುವಂತಿಲ್ಲ:

ಹೌದು ಈ ದೇವಾಲಯಕ್ಕೆ ಬರುವ ಭಕ್ತರು ಬರ್ಮುಡ, ಜೀನ್ಸ್, ಚಡ್ಡಿ ಧರಿಸಿ ಎಂಟ್ರಿ ನೀಡುವಂತಿಲ. ಪಂಚೆ, ದೋತಿ, ಸೀರೆ, ಚೂಡಿದಾರ್ ಧರಿಸ ದೇವಾಲಯ ಪ್ರವೇಶ ಮಾಡಬಹುದು. ದೇವಸ್ಥಾನದಲ್ಲಿ ನಮ್ಮ ಸಂಸ್ಕೃತಿಯಂತೆ ವಸ್ತ್ರ ಧರಿಸುವುದು ಅವಶ್ಯಕವಾಗಿ ಬೇಕಾಗಿರುತ್ತದೆ. ಹಾಗಾಗಿ ಈ ನಿಯಮ ತರಲಾಗಿದೆ.

ಧಾರ್ಮಿಕ ದತ್ತಿ ಇಲಾಖೆ ಸೂಚನೆ:

ಧಾರ್ಮಿಕ ದತ್ತಿ ಇಲಾಖೆ ಅಧೀನದಲ್ಲಿರುವ ದೇವಸ್ಥಾನಗಳಲ್ಲೂ ವಸ್ತ್ರ ಸಂಹಿತೆ ಜಾರಿಗೊಳಿಸುವಂತೆ ರಾಜ್ಯ ಹಿಂದೂ ಧಾರ್ಮಿಕ ದತ್ತಿ ಇಲಾಖೆ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ. ದೇವಾಲಯ ದಲ್ಲಿ ಹಿಂದೆಯೂ ವಸ್ತ್ರ ಸಂಹಿತೆ ಜಾರಿಗೆ ತರುವ ಪ್ರಯತ್ನ ನಡೆದಿತ್ತು. ಆರು ವರ್ಷಗಳ ಹಿಂದೆ ವಸ್ತ್ರ ಸಂಹಿತೆ ಜಾರಿಗೆ ತರಲಾಗಿತ್ತು. ಆದರೆ, ಕೆಲವೇ ದಿನಗಳಲ್ಲಿ ಅದು ಸ್ಥಗಿತ ಮಾಡಲಾಗಿತ್ತು.ಆದರೆ ಇದೀಗ ಹೆಚ್ಚಿನ ದೇವಾಲಯದಲ್ಲಿ ಈ ನಿಯಮ ಜಾರಿಗೆ ತರಲಾಗಿದೆ.

advertisement

Leave A Reply

Your email address will not be published.