Karnataka Times
Trending Stories, Viral News, Gossips & Everything in Kannada

RBI: ಬ್ಯಾಂಕ್ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ನಿರ್ವಹಣೆ ಬಗ್ಗೆ ಅರ್ ಬಿ ಐ ಹೊಸ ನಿಯಮ!

advertisement

ಇಂದು ಹೆಚ್ಚಿನವರಲ್ಲಿ ಮೂರು ನಾಲ್ಕು ಬ್ಯಾಂಕ್ ಗಳನ್ನು ತೆರೆದಿರುತ್ತಾರೆ. ಯಾಕಂದ್ರೆ ವಿವಿಧ ಸರಕಾರದ ಇಲಾಖೆಗಳಲ್ಲಿ ಸೌಲಭ್ಯಕ್ಕಾಗಿ ಒಂದೊಂದು ಖಾತೆ ತೆರೆಯಬೇಕಾಗುತ್ತದೆ. ವಿದ್ಯಾರ್ಥಿಗಳಿಗಾದ್ರೆ ಸ್ಕಾಲರ್ಶಿಪ್ ಗಾಗಿ ಬ್ಯಾಂಕ್ ಖಾತೆ ತೆರೆಯಬೇಕು. ಪಿಂಚಣಿ ಹಣ (Pension Money) ಕ್ಕಾಗಿ ಪೋಸ್ಟ್ ಆಫೀಸ್ ಖಾತೆ (Post Office Account) ತೆರೆಯಬೇಕು.‌ಹೀಗಾಗಿ ಹೆಚ್ಚು ಖಾತೆಯನ್ನು ತೆರೆಯುದು ತಪ್ಪಲ್ಲ. ಯಾವುದೇ ಬ್ಯಾಂಕ್‌ನಲ್ಲಿ ಖಾತೆ ಇದ್ದರೂ ಮಿನಿಮಮ್‌ ಬ್ಯಾಲೆನ್ಸ್‌ ಖಾತೆಯಲ್ಲಿ ಇರಬೇಕು.‌ ಇಲ್ಲದಿದ್ರೆ ತಿಂಗಳಿಗೊಮ್ಮೆ ದಂಡವನ್ನು ಬ್ಯಾಂಕ್‌ ವಿಧಿಸುತ್ತದೆ. ಈ ಭಯದಿಂದಲೇ ಹೆಚ್ಚಿನವರು ಒಂದು ಖಾತೆಯಲ್ಲಿ ಕನಿಷ್ಠ ‌ಮೊತ್ತವಾದರೂ ಹೂಡಿಕೆ ಮಾಡುತ್ತಾರೆ.

ಹೊಸ ಬದಲಾವಣೆ:

 

 

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್‌ ಇರುವ ಕುರಿತಂತೆ ದೊಡ್ಡ ಬದಲಾವಣೆಯ ನಿಯಮ ಜಾರಿಗೆ ತಂದಿದೆ. ಹೌದು ಇನ್ಮುಂದೆ ನೀವು ನೀವು ಬ್ಯಾಂಕ್ ಖಾತೆಗೆ ಕನಿಷ್ಟ ಬ್ಯಾಲೆನ್ಸ್ (Minimum Balance) ಶುಲ್ಕವನ್ನು ಪಾವತಿಸಬೇಕಾಗಿಲ್ಲ ಎಂದು ಅರ್ ಬಿ ಐ (RBI) ಸ್ಪಷ್ಟ ಪಡಿಸಿದೆ.

advertisement

ಮಾರ್ಗಸೂಚಿ ಪ್ರಕಟ:

ಆರ್‌ಬಿಐ (RBI) ನೀಡಿರುವ ಮಾರ್ಗಸೂಚನೆ ಯಂತೆ ನೀವು ಬ್ಯಾಂಕ್ ಖಾತೆಯನ್ನು ಬಳಸದಿದ್ದರೆ ಕನಿಷ್ಟ ಬ್ಯಾಲೆನ್ಸ್ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಒಂದುವೇಳೆ ಖಾತೆಗಳ ಮೇಲೆ ಕನಿಷ್ಠ ಬ್ಯಾಲೆನ್ಸ್ ಇಲ್ಲದಿದ್ದರೆ ಬ್ಯಾಂಕ್‌ಗಳು ದಂಡ ವಿಧಿಸುವಂತಿಲ್ಲ ಎಂದು ಆರ್‌ಬಿಐ ಮಾರ್ಗಸೂಚಿಯಲ್ಲಿ ತಿಳಿಸಿದೆ. ಅದೇ ರೀತಿ ಸ್ಕಾಲರ್‌ಶಿಪ್ ಅಥವಾ ನೇರ ಲಾಭ ವರ್ಗಾವಣೆಯನ್ನು ಪಡೆಯಲು ತೆರೆದಿರುವ ಖಾತೆಗಳನ್ನು ನಿಷ್ಕ್ರಿಯ ಎಂದು ಬ್ಯಾಂಕ್‌ಗಳು ಹೇಳಲು ಸಾಧ್ಯವಿಲ್ಲ ಎಂದು ಆರ್‌ಬಿಐ ಹೇಳಿದೆ.

ಸೂಚನೆ ನೀಡಿತ್ತು:

ಠೇವಣಿ ಕನಿಷ್ಠ ನಿಗದಿತ ಮಟ್ಟಕ್ಕಿಂತ ಕಡಿಮೆ ಇರುವ ಖಾತೆಗಳಿಗೆ ಯಾವುದೇ ದಂಡವನ್ನು ನೀಡಬಾರದು ಎಂದು ಬ್ಯಾಂಕ್‌ಗಳಿಗೆ ಸೂಚನೆಗಳನ್ನು ನೀಡಲು ಕೇಂದ್ರವು ನಿರ್ಧಾರ ಮಾಡಿತ್ತು.ಅದೇ ರೀತಿ ಇದೀಗ ಖಾತೆಯನ್ನು ಸಕ್ರಿಯ ಗೊಳಿಸಲು ಯಾವುದೇ ರೀತಿಯ ಶುಲ್ಕ ‌ಇಲ್ಲ ಎಂದು RBI ತಿಳಿಸಿದೆ.

ಒಟ್ಟಿನಲ್ಲಿ ಇನ್ಮುಂದೆ‌ ಬ್ಯಾಂಕ್ ಖಾತೆಯನ್ನು ತೆರೆಯುದಾದರೆ ನಿಗದಿತ ಶುಲ್ಕ ಇರಬೇಕೆಂಬುದು ಏನಿಲ್ಲ. ಕನಿಷ್ಠ ಬ್ಯಾಲೆನ್ಸ್ ಇಲ್ಲದೆಯು ಖಾತೆ ಸಕ್ರಿಯವಾಗಿ ಇರುತ್ತದೆ.

advertisement

Leave A Reply

Your email address will not be published.