Karnataka Times
Trending Stories, Viral News, Gossips & Everything in Kannada

Electricity Price: ಗೃಹಜ್ಯೋತಿ ಯೋಜನೆ ನಡುವೆ ವಿದ್ಯುತ ದರದಲ್ಲಿ ಹೆಚ್ಚಳ ಮಾಡುವಲ್ಲಿ ಮುಂದಾದ ಸರ್ಕಾರ!

advertisement

ಈ ಆಧುನಿಕ‌ ಕಾಲ ಘಟ್ಟದಲ್ಲಿ ಜನರು ಬದುಕು ಸಾಗಿಸುವುದು ಕಷ್ಟವಾಗಿ ಬಿಟ್ಟಿದೆ. ಬೆಲೆ ಏರಿಕೆ ಅನ್ನೋದು ಬಡಜನತೆಗೆ ದೊಡ್ಡ ತಲೆನೋವಾಗಿ ಬಿಟ್ಟಿದೆ. ಇದರಿಂದ ಸಾಮಾನ್ಯ ಜನರು ಬದುಕು ಸಾಗಿಸೋದು ಕಷ್ಟ. ಇಂದು ತರಕಾರಿ (Vegetable), ಹಾಲು (Milk), ಪೆಟ್ರೋಲ್ (Petrol), ಡಿಸೇಲ್ ಬೆಲೆ (Diesel Price) ನಿರಂತರವಾಗಿ ಹೆಚ್ಚಳವಾಗುತ್ತಿದೆ. ಈ ನಡುವೆ‌ ವಿದ್ಯುತ್ ದರ (Electricity Price) ಪರಿಷ್ಕರಣೆ ಬಗ್ಗೆ ಮಾತುಗಳು ಕೇಳಿಬರುತ್ತಿದೆ. ಈಗಾಗಲೇ ರಾಜ್ಯ ಸರಕಾರ ಗೃಹಜ್ಯೋತಿ ಯೋಜನೆ (Gruha Jyoti Yojana) ಮೂಲಕ ಉಚಿತ ವಿದ್ಯುತ್ ಏನೋ ನೀಡಿದೆ. ಆದ್ರೆ ಇದೀಗ ಇಂಧನ ವೆಚ್ಚ ನಿರ್ವಹಣೆ ಕುರಿತಂತೆ ಹಲವು ಕಾರಣಗಳನ್ನ ಮುಂದಿಟ್ಟುಕೊಂಡು ವಿದ್ಯುತ್ ದರ ಪರಿಷ್ಕರಣೆಗೆ ಯೋಜನೆ ಹಾಕಿಕೊಂಡಿದೆ.

ವಿದ್ಯುತ್ ಪರಿಷ್ಕರಣೆ:

ರಾಜ್ಯದ ವಿದ್ಯುತ್ ಸರಬರಾಜು ಕಂಪನಿಗಳು ಇದೀಗ ವಿದ್ಯುತ್ ಪರಿಷ್ಕರಣೆಗೆ ಮುಂದಾಗಿದ್ದು ಬೆಸ್ಕಾಂ (BESCOM), ಮೆಕ್ಕಾಂ (MESCOM), ಚೆಕ್ಕಾಂ ಸೇರಿದಂತೆ ಇತರೆ ಕಂಪನಿಗಳು ಕೂಡ ಪ್ರತಿ ಸಲದಂತೆ ಈ ವರ್ಷವೂ ದರ ಪರಿಷ್ಕರಣೆಗೆ ಸಿದ್ದತೆ ನಡೆದಿವೆ. ಪ್ರತಿ ಯೂನಿಟ್ ಗೆ ಇಂತಿಷ್ಟು ದರ ಹೆಚ್ಚಳ‌ ಮಾಡಬೇಕು ಅನ್ನೋದು ಎಸ್ಕಾಂಗಳ ಬೇಡಿಕೆಯಾಗಿದೆ.

ಎಷ್ಟು ‌ಹೆಚ್ಚಳ?

 

advertisement

 

ಈಗಾಗಲೇ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಮಂಡಳಿ ಆಯೋಗಕ್ಕೆ (KERC) ಪ್ರಸ್ತಾವನೆ ಮಾಡಿದ್ದು ಈ ಮೂಲಕ ಫೆಬ್ರವರಿ 12 ರಿಂದ ಗ್ರಾಹಕರ ಅಹವಾಲು ಸ್ವೀಕರಿಸಲಿದೆ. ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳ ಜೊತೆ KERC ವಿದ್ಯುತ್ ದರ ಪರಿಷ್ಕರಣೆ ಪರಿಶೀಲನೆ ಮಾಡಲಿದೆ. 40 ಪೈಸೆಯಿಂದ, 60 ಪೈಸೆಯವರಿಗೆ ವಿದ್ಯುತ್ ದರ ಹೆಚ್ಚಳಕ್ಕೆ ಮನವಿ ಮಾಡಿವೆ. ಈ ಬಾರಿ ಸಾಧಕ ಬಾದಕಗಳನ್ನ ಪರಿಶೀಲನೆ ಮಾಡಿ 35 ರಿಂದ 45 ಪೈಸೆ ಹೆಚ್ಚಳ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಇಷ್ಟು ಹೆಚ್ಚಳ ಮಾಡಿತ್ತು:

ಈಗಾಗಲೇ ವಿದ್ಯುತ್ ದರ (Electricity Price) ಪರಿಷ್ಕರಣೆ ‌ಮಾಡಿದ್ದು 2009 ರಲ್ಲಿ ಪ್ರತಿ ಯೂನಿಟ್ ಗೆ 34 ಪೈಸೆ, 2010 ರಲ್ಲಿ 30 ಪೈಸೆ, 2011ರಲ್ಲಿ 28 ಪೈಸೆ ಮತ್ತು 2012ರಲ್ಲಿ 13 ಪೈಸೆ, 2013 ರಲ್ಲಿ 13 ಪೈಸೆ, 2017 ರಲ್ಲಿ 48 ಪೈಸೆ 2019 ರಲ್ಲಿ ಪ್ರತಿ ಯೂನಿಟ್ ಗೆ 35 ಪೈಸೆ ಹೆಚ್ಚಳ, 2020 ರಲ್ಲಿ ಪ್ರತಿ ಯೂನಿಟ್ ಗೆ 30 ಪೈಸೆ ಹೆಚ್ಚಳ, 2022 ರಲ್ಲಿ‌ ಪ್ರತಿ ಯೂನಿಟ್ ಗೆ 35 ಪೈಸೆ, 2023 ರಲ್ಲಿ‌ ಪ್ರತಿ ಯೂನಿಟ್ ಗೆ, 35 ಪೈಸೆ ಹೆಚ್ಚಳ ಮಾಡಿತ್ತು. ಈ ಬಾರಿ ಎಷ್ಟು ಪರಿಷ್ಕರಣೆ ಮಾಡಲಿದೆ ಎಂದು ಕಾದು ನೋಡ್ಬೆಕು.

advertisement

Leave A Reply

Your email address will not be published.