Saving Account: ಬ್ಯಾಂಕ್ ವಹಿವಾಟುಗಳಿಗೆ ಹೊಸ ನಿಯಮ, ಇನ್ಮುಂದೆ ಉಳಿತಾಯ ಖಾತೆಯಿಂದ ಹಣವನ್ನು ಹಿಂಪಡೆಯಲು ತೆರಿಗೆ ಪಾವತಿ ಕಡ್ಡಾಯ!
![](https://karnatakatimes.com/wp-content/uploads/2024/01/From-now-payment-of-tax-is-mandatory-for-withdrawing-money-from-savings-account.jpg)
advertisement
ಇಂದು ಸ್ವಲ್ಪ ವಾದರೂ ಹಣವನ್ನು ಹಣವನ್ನು ಜನರು ಮುಂದಿನ ದಿನದ ಭವಿಷ್ಯಕ್ಕಾಗಿ ಹೂಡಿಕೆ ಮಾಡುತ್ತಾರೆ. ಅದೇ ರೀತಿ ಹಣದ ವಹಿವಾಟುಗಳು (Money Transaction) ಹೆಚ್ಚಾಗುತ್ತಿದ್ದಂತೆ ಮೋಸ ವಂಚನೆ ಪ್ರಕರಣಗಳು ಸಹ ಹೆಚ್ಚಾಗಿದೆ. ಇದಕ್ಕಾಗಿ ಕಾಲಕ್ಕೆ ತಕ್ಕಂತೆ ಅರ್ ಬಿ ಐ (RBI) ಕೂಡ ನಿಯಮ ಬದಲಾವಣೆ ಮಾಡುತ್ತದೆ. ಈಗಾಗಲೇ ನಗದು ರೂಪದಲ್ಲಿ ಹೆಚ್ಚು ವಹಿವಾಟು ನಡೆಸುವ ಜನರ ಮೇಲೆ ಆದಾಯ ತೆರಿಗೆ (Income Tax) ಇಲಾಖೆ ನಿಗಾ ಇರಿಸಿದ್ದು ಆದಾಯಕ್ಕೆ ಸರಿಯಾದ ದಾಖಲೆ ಮೂಲ ಇಲ್ಲದಿದ್ದರೆ ಆದಾಯ ಇಲಾಖೆಯು ನಿಮ್ಮ ಹೆಸರಿನಲ್ಲಿ ನೋಟಿಸ್ ನೀಡುತ್ತದೆ.
Transaction Fee:
ಇದೀಗ ನೀವು ಯಾವುದೇ ಸಂದರ್ಭದಲ್ಲಿ ಬ್ಯಾಂಕ್ನೊಂದಿಗೆ ವಹಿವಾಟು ನಡೆಸುವ ಪ್ರಕ್ರಿಯೆ ಯಲ್ಲಿದ್ದರೆ ಕೇವಲ ATM ನಲ್ಲಿ ಮಾತ್ರವಲ್ಲದೆ ಬ್ಯಾಂಕ್ ಖಾತೆಯಿಂದ ಸಹ ಹಣವನ್ನು ಹಿಂಪಡೆಯಲು ಬಯಸಿದ್ರೆ ವಹಿವಾಟು ಶುಲ್ಕವನ್ನು ಪಾವತಿಸಬೇಕಾಗಬಹುದು. ವಹಿವಾಟಿನ ಮಿತಿಯು ಕೇವಲ ಎಟಿಎಂನಲ್ಲಿ ಮಾತ್ರ ಅನ್ವಯವಾಗುವುದಿಲ್ಲ. ಆದರೆ ನಿಮ್ಮ ಖಾತೆಯಿಂದ ಹಣವನ್ನು ಹಿಂಪಡೆಯುವಾಗ ಸಹ ಅನ್ವಯ ವಾಗುತ್ತದೆ.
advertisement
ನಗದು ಹಿಂಪಡೆಯುವ ನಿಯಮ:
- ಒಂದು ಬಾರಿಗೆ 20 ಲಕ್ಷ ರೂ.ಗಿಂತ ಹೆಚ್ಚಿನ ನಗದು ಹಿಂಪಡೆಯಲು, ಗ್ರಾಹಕರು ಆಧಾರ್ ಅಥವಾ ಪ್ಯಾನ್ ಕಾರ್ಡ್ (PAN Card) ಮಾಹಿತಿಯನ್ನು ನೀಡಬೇಕು.
- ಒಂದು ತಿಂಗಳಲ್ಲಿ 10 ಲಕ್ಷ ರೂ.ಗಿಂತ ಹೆಚ್ಚಿನ ಹಣವನ್ನು ಹಿಂಪಡೆಯಲು 2% ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ.
- ಒಂದು ದಿನದಲ್ಲಿ ಬ್ಯಾಂಕ್ ಖಾತೆಯಿಂದ 2 ಲಕ್ಷ ರೂ.ಗಿಂತ ಹೆಚ್ಚಿನ ಹಣವನ್ನು ಹಿಂಪಡೆಯುದಾದ್ರೆ 1% ಶುಲ್ಕವನ್ನು ವಿಧಿಸಲಾಗುತ್ತದೆ. ಒಂದು ತಿಂಗಳಲ್ಲಿ 10 ಲಕ್ಷಕ್ಕಿಂತ ಹೆಚ್ಚಿನ ನಗದು ಹಿಂಪಡೆಯುವಿಕೆಗೆ 2% ಶುಲ್ಕವನ್ನು ವಿಧಿಸಲಾಗುತ್ತದೆ.
- ಇಪ್ಪತ್ತು ಲಕ್ಷ ಗಿಂತ ಹೆಚ್ಚಿನ ಮೊತ್ತವನ್ನು ನಗದು ರೂಪದಲ್ಲಿ ಪಾವತಿ ಮಾಡುದಾದ್ರೆ ಅವರಿಗೆ ತೆರಿಗೆ ನಿಯಮ ಅನ್ವಯವಾಗುತ್ತದೆ.ಆಸ್ತಿಗಳ ಖರೀದಿ ಅಥವಾ ಮಾರಾಟಕ್ಕಾಗಿ 30 ಲಕ್ಷ ರೂ.ಗಿಂತ ಹೆಚ್ಚಿನ ನಗದು ವಹಿವಾಟುಗೆ ಆದಾಯ ತೆರಿಗೆ ಇಲಾಖೆ ಈ ಬಗ್ಗೆ ಪರಿಶೀಲನೆ ನಡೆಸುತ್ತದೆ.
- ಆದಾಯ ತೆರಿಗೆ ನಿಯಮಗಳ ಪ್ರಕಾರ, ಒಂದು ವರ್ಷದಲ್ಲಿ 20 ಲಕ್ಷ ರೂ.ಗಿಂತ ಹೆಚ್ಚಿನ ನಗದು ವಹಿವಾಟುಗಳಿಗೆ ದಂಡ ವಿಧಿಸಬಹುದು.
advertisement