Karnataka Times
Trending Stories, Viral News, Gossips & Everything in Kannada

Pan Card: ಪ್ಯಾನ್ ಕಾರ್ಡ್ ನಲ್ಲಿ ತಪ್ಪಾಗಿ ಹೆಸರು ಪ್ರಿಂಟ್ ಆಗಿದ್ದರೆ ಮನೆಯಲ್ಲಿಯೇ ಕುಳಿತು ಸರಿಪಡಿಸಿಕೊಳ್ಳಬಹುದು ಕ್ಷಣಮಾತ್ರದಲ್ಲಿ!

advertisement

ಹಣಕಾಸಿನ ವ್ಯವಹಾರಕ್ಕೆ ಪಾನ್ ಕಾರ್ಡ್ ಎನ್ನುವುದು ಬಹಳ ಮುಖ್ಯವಾಗಿರುವ ದಾಖಲೆ ಆಗಿರುತ್ತದೆ. ನೀವು ಬ್ಯಾಂಕ ಖಾತೆಯನ್ನು ತೆರೆಯುವುದೇ ಇರಬಹುದು ಅಥವಾ ಸಾಲ ತೆಗೆದುಕೊಳ್ಳುವುದಕ್ಕೆ ಇರಬಹುದು ಅಥವಾ ಆದಾಯ ತೆರಿಗೆ ಸಲ್ಲಿಸಲು ಕೂಡ ಪಾನ್ ಕಾರ್ಡ್ ಬಹಳ ಮುಖ್ಯವಾಗಿರುವ ದಾಖಲೆ ಆಗಿರುತ್ತದೆ.

ಒಬ್ಬ ವ್ಯಕ್ತಿಯ ವೈಯಕ್ತಿಕ ದಾಖಲೆಗಳಲ್ಲಿ ಪ್ಯಾನ್ ಕಾರ್ಡ್ ಕೂಡ ಬಹಳ ಮುಖ್ಯವಾಗಿದ್ದು, ಇದರಲ್ಲಿ ಯಾವುದೇ ರೀತಿಯ ತಪ್ಪುಗಳು ಆಗದಂತೆ ನೀವು ಮಾಹಿತಿಯನ್ನು ನೀಡಿ ಪ್ಯಾನ್ ಕಾರ್ಡ್ ಪಡೆದುಕೊಳ್ಳಬೇಕಾಗುತ್ತದೆ. ಆದ್ರೂ ಕೆಲವೊಮ್ಮೆ ಪ್ಯಾನ್ ಕಾರ್ಡ್ (Pan Card)ನಲ್ಲಿ ತಪ್ಪಾಗಿ ಅಕ್ಷರಗಳು ಪ್ರಿಂಟ್ ಆಗಿರಬಹುದು. ಈ ರೀತಿ ಆದರೆ ನೀವು ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ನಲ್ಲಿ ಕೆಲವೇ ಕ್ಷಣಗಳಲ್ಲಿ ಆನ್ಲೈನ್ ಮೂಲಕ ತಿದ್ದುಪಡಿ ಮಾಡಿಕೊಳ್ಳಬಹುದಾಗಿದೆ. ಹಾಗಾದ್ರೆ ಬನ್ನಿ, ಪ್ಯಾನ್ ಕಾರ್ಡ್ ನಲ್ಲಿ ಹೆಸರು ತಿದ್ದುಪಡಿಯನ್ನ ಹೇಗೆ ಮಾಡುವುದು ಎಂಬುದನ್ನು ನೋಡೋಣ.

advertisement

  • ಮೊದಲಿಗೆ ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್ಸೈಟ್, https://www.incometaxindia.gov.in/ ಮೇಲೆ ಕ್ಲಿಕ್ ಮಾಡಿ. ಈಗ ಪ್ಯಾನ್ ಕಾರ್ಡ್ ಸೇವೆಗಳ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
  • ಈಗ ಪ್ಯಾನ್ ಕಾರ್ಡು ತಿದ್ದುಪಡಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ನೀವು ಅಪ್ಲಿಕೇಶನ್ ನಲ್ಲಿ ಅಗತ್ಯ ಇರುವ ತಿದ್ದುಪಡಿಗಳನ್ನು ಮಾಡಿಕೊಳ್ಳಲು ಇಲ್ಲಿ ಅವಕಾಶವಿದೆ.
  • ಪ್ಯಾನ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ ಸಲ್ಲಿಸು ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಈಗ ಹೊಸ ಪುಟ ತೆರೆದುಕೊಳ್ಳುತ್ತಿದೆ.
  • ಈಗ ತಿದ್ದುಪಡಿ ಮಾಡಿಕೊಳ್ಳಲು ಅಗತ್ಯ ಇರುವ ಮಾಹಿತಿಗಳನ್ನು ಭರ್ತಿ ಮಾಡಬೇಕು. ಈಗ ಯಾವುದೇ ತಪ್ಪಾಗದಂತೆ ಸರಿಯಾದ ರೀತಿಯಲ್ಲಿ ಅಕ್ಷರಗಳನ್ನು ನಮೂದಿಸಿ. ಎರಡು ಬಾರಿ ಕ್ರಾಸ್ ಚೆಕ್ ಮಾಡಿಕೊಳ್ಳುವುದನ್ನು ಮರೆಯಬೇಡಿ.
  • ಈಗ ಆಧಾರ್ ಕಾರ್ಡ್ ಹಾಗೂ ಮತ್ತಿತರ ಡಾಕ್ಯೂಮೆಂಟ್ ಗಳ ಸ್ಕ್ಯಾನ್ ಕಾಪಿ ಅಪ್ಲೋಡ್ ಮಾಡಬೇಕು.
  • ಕೊನೆಯ ಹಂತದಲ್ಲಿ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಆನ್ಲೈನ್ ಮೂಲಕವೇ ಪೇಮೆಂಟ್ ಮಾಡಿಕೊಂಡ ನಂತರ, ತಿದ್ದುಪಡಿಗೆ ನಿಮ್ಮ ಅರ್ಜಿ ಸಲ್ಲಿಕೆಯಾಗುತ್ತದೆ. ಕೆಲವೇ ದಿನಗಳಲ್ಲಿ ತಿದ್ದುಪಡಿಯಾಗಿರುವ ಪಾನ್ ಕಾರ್ಡ್ ನಿಮ್ಮ ಕೈ ಸೇರುತ್ತದೆ.

ಆನ್ಲೈನಲ್ಲಿ ಪ್ಯಾನ್ ಕಾರ್ಡ್ ತಿದ್ದುಪಡಿಗೆ ಬೇಕಾಗಿರುವ ದಾಖಲೆಗಳು!

ಆಧಾರ್ ಕಾರ್ಡ್, ಪಾಸ್ ಪೋರ್ಟ್, ಡ್ರೈವಿಂಗ್ ಲೈಸೆನ್ಸ್ ಇತರ ಯಾವುದೇ ಗುರುತಿನ ಚೀಟಿ ನೀಡಬಹುದು. ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು 85 ರೂಪಾಯಿಗಳು ಹಾಗೂ ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸಲು 110ಗಳನ್ನು ಕೊಡಬೇಕು. ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಹತ್ತಿರದ ಆದಾಯ ತೆರಿಗೆ ಇಲಾಖೆಗೆ ಹೋಗಿ ಅಲ್ಲಿ ಅರ್ಜಿ ನಮೂನೆ ಭರ್ತಿ ಮಾಡಿ ಅಗತ್ಯ ಇರುವ ದಾಖಲೆಗಳ ಸ್ಕ್ಯಾನ್ ಕಾಪಿ ನೀಡಿ ಅರ್ಜಿ ಸಲ್ಲಿಸಿ. ಇದಕ್ಕೆ 110ಗಳ ಶುಲ್ಕವನ್ನು ಪಾವತಿಸಿದರೆ, ಕೇವಲ 15 ರಿಂದ 30 ದಿನಗಳ ಒಳಗೆ ನಿಮಗೆ ಹೊಸ ಪ್ಯಾನ್ ಕಾರ್ಡ್ ಸಿಗುತ್ತದೆ. ಇಲ್ಲಿ ಪ್ಯಾನ್ ಕಾರ್ಡ್ ಸಂಖ್ಯೆ ಬದ್ಲಾಗುವುದಿಲ್ಲ ನಿಮ್ಮ ಹಳೆಯ ಪ್ಯಾನ್ ಕಾರ್ಡ್ ನಲ್ಲಿ ಹೆಸರುಗಳ ತಿದ್ದುಪಡಿ ಮಾತ್ರ ಮಾಡಿರಲಾಗುತ್ತದೆ.

advertisement

Leave A Reply

Your email address will not be published.