Karnataka Times
Trending Stories, Viral News, Gossips & Everything in Kannada

Hero Mavrick 440: ರಾಯಲ್ ಎನ್‌ಫೀಲ್ಡ್ ಬುಲೆಟ್ ಅನ್ನು ಮೀರಿಸಲು ಬರುತ್ತಿದೆ Hero Mavrick 440, ಕಡಿಮೆ ಬೆಲೆ ಹಾಗೂ ಅದ್ಭುತ ಫೀಚರ್ಸ್!

advertisement

ಇಂದು ದ್ವಿಚಕ್ರ ವಾಹನಗಳ ಬೇಡಿಕೆ ಬಹಳಷ್ಟು ಹೆಚ್ಚಾಗಿದೆ. ಮಧ್ಯಮ ವರ್ಗದ ಜನರಂತೂ ಹೆಚ್ಚಾಗಿ ಖರೀದಿ ಮಾಡುವುದೇ ಬೈಕ್, ಸ್ಕೂಟರ್ ‌ಇತ್ಯಾದಿ.ಅದರಲ್ಲೂ ಈ ಹೊಸ ವರ್ಷದಲ್ಲಿ ಹಲವು ಕಾರು ಬೈಕ್, ಸ್ಕೂಟರ್ ಬಿಡುಗಡೆಗೆ ಸಜ್ಜಾಗಿದ್ದು ಖರೀದಿ ಮಾಡಲು ಹೆಚ್ಚಿನ ಜನರು ಆಸಕ್ತಿ ವಹಿಸಿದ್ದಾರೆ. ಮಾರುಕಟ್ಟೆ ಗೂ ವಿವಿಧ ರೀತಿಯ ಹೊಸ ಮಾಡೆಲ್ ನ ವಾಹನಗಳು ಎಂಟ್ರಿ ನೀಡಿದ್ದು ಕ್ಯುರಾಸಿಟಿ ಮತ್ತಷ್ಟು ಹೆಚ್ಚಾಗಿದೆ.

Hero MotoCorp ‌ ಬೈಕ್, Hero Mavrick 440 ಅನ್ನು ಇದೇ ತಿಂಗಳು ಬಿಡುಗಡೆ ಮಾಡಲು ತಯಾರಗಿದ್ದು ಯುವಕರಲ್ಲಿ ಇದರ ಕ್ರೇಜ್ ಬಹಳಷ್ಟು ಹೆಚ್ಚಾಗಿದೆ. ಇದರ ಜೊತೆ ಇತರ ಬೈಕ್ ಗಳಿಗೂ ಪ್ರತಿಸ್ಪರ್ಧಿ ಯಾಗಿ ನಿಂತಿದೆ. ಸುಧಾರಿತ ನೂತನ ಫೀಚರ್ಸ್ ‌ನೊಂದಿಗೆ ಈ ಬೈಕ್‌ ಬೇಡಿಕೆ ಹೆಚ್ಚಿಸಿದೆ.

advertisement

ಫೀಚರ್ಸ್ ಹೇಗಿದೆ?

  • ಹೀರೋ ಮಾವ್ರಿಕ್ 440 ಸಿಂಗಲ್ ಪೀಸ್ ಸೀಟ್ ಮತ್ತು ಮಸ್ಕ್ಯುಲರ್ ಫ್ಯುಯಲ್ ಟ್ಯಾಂಕ್ ಅನ್ನು ಹೊಂದಿದು ಗುಣಮಟ್ಟವು ಉತ್ತಮವಾಗಿದೆ.
  • ಈ ಬೈಕ್ ಎಚ್‌ ಆಕಾರದ ಎಲ್‌ಇಡಿ ಡಿಆರ್‌ಎಲ್‌ಗಳು ಹಾಗೂ ಹಾರ್ಲೆ ಡೇವಿಡ್ಸನ್‌ನಲ್ಲಿ ಇರುವಂತೆ ಎಲ್‌ಇಡಿ ಟರ್ನ್ ಸಿಗ್ನಲ್‌ ಹೆಡ್‌ಲ್ಯಾಂಪ್ ಅನ್ನು ಸಹ ಹೊಂದಿದೆ
  • ಅಷ್ಟೆ ಅಲ್ಲದೆ ಈ ಬೈಕ್ 440 ಸಿಸಿ ಎಂಜಿನ್‌ನಿಂದ ಬರಲಿದ್ದು 27 ಬಿಎಚ್‌ಪಿ ಪವರ್ ಮತ್ತು 38 ನ್ಯೂಟನ್ ಮೀಟರ್ ಟಾರ್ಕ್ ನೀಡಲಿದೆ.
  • ಅದೇ ರೀತಿ ಈ ಹೊಸ ಹೀರೋ ಮಾವ್ರಿಕ್ 440 ಲೋ ಸೆಟ್ ಹ್ಯಾಂಡಲ್‌ಬಾರ್ ಅನ್ನು ಸಹ ಹೊಂದಿದೆ
  • ಇದರ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‌ ಇರಲಿದ್ದು ಇನ್ನೊಂದೆಡೆ ಹಾರ್ಲೆ X440 ಹೆಚ್ಚು ಪ್ರೀಮಿಯಂ ಅಪ್ ಸೈಡ್ ಡೌನ್ ಫೋರ್ಕ್‌ಗಳನ್ನು ಸಹ ಪಡೆದು ಕೊಂಡಿದೆ
  •  ಈ ಹೀರೋ ಮಾವ್ರಿಕ್ 440 ಬೈಕಿನಲ್ಲಿ ಅದೇ 440cc, ಸಿಂಗಲ್-ಸಿಲಿಂಡರ್, ಆಯಿಲ್/ಏರ್-ಕೂಲ್ಡ್ ಎಂಜಿನ್‌ ಅನ್ನು ಸಹ ಪಡೆದು ‌ಕೊಂಡಿದೆ.

ಬೆಲೆ‌ ಹೇಗಿದೆ?

ಹೊಸ ಹೀರೋ ಮಾವ್ರಿಕ್ 440 ನೂತನ‌ ವೈಶಿಷ್ಟ್ಯ ಹೊಂದಿದ್ದು ಯುವಕರಲ್ಲಿ ಕ್ರೇಜ್ ಅಂತು ಹೆಚ್ಚಾಗಿದೆ.‌ಅದೇ ರೀತಿ ಬೈಕ್ 2024ರ ಜನವರಿ 23 ರಂದು ಬಿಡುಗಡೆಯಾಗಲಿದ್ದು ಕೈಗೆಟುಕುವ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ. ಈ ಬೈಕಿನ ಬೆಲೆಯು ರೂ.2 ಲಕ್ಷ ಇರಬಹುದು ಎನ್ನಲಾಗಿದೆ.

advertisement

Leave A Reply

Your email address will not be published.