Karnataka Times
Trending Stories, Viral News, Gossips & Everything in Kannada

Cheque Bounce: ಚೆಕ್ ಬೌನ್ಸ್ ಆದ್ರೆ ಜೈಲಿಗೆ ಹೋಗಬೇಕಾಗಬಹುದು; ಈ ವಿಚಾರಗಳನ್ನು ನೆನಪಿಟ್ಟುಕೊಳ್ಳಿ!

advertisement

ಇತ್ತೀಚಿನ ದಿನಗಳಲ್ಲಿ ನಗದು ಬಳಕೆ ಸಾಕಷ್ಟು ಕಡಿಮೆ ಆಗುತ್ತದೆ. ಕ್ಯಾಶ್ ಲೆಸ್ ವ್ಯವಹಾರ (Cashless Transaction) ಜನರು ಹೆಚ್ಚಾಗಿ ಮಾಡುತ್ತಿದ್ದಾರೆ. ನೆಟ್ ಬ್ಯಾಂಕಿಂಗ್ (Net Banking) ಮೂಲಕ ಹಣಕಾಸಿನ ವ್ಯವಹಾರ ಸುಲಭವಾಗಿ ಮಾಡಿಕೊಳ್ಳಬಹುದು. ಇನ್ನು ಸ್ವಲ್ಪ ಸಾಂಪ್ರದಾಯಿಕ ಹಣಕಾಸಿನ ವ್ಯವಹಾರ ಇನ್ನು ಉಳಿದಿದೆ ಎಂದರೆ ಅದು ಚೆಕ್ (Cheque) ಮೂಲಕ ನಡೆಯುವ ವ್ಯವಹಾರವಾಗಿದೆ.

ಹೌದು, ದೊಡ್ಡ ದೊಡ್ಡ ವ್ಯಾಪಾರ ಮಾಡುವವರು ಹಾಗೂ ಉದ್ಯಮ ಮಾಡುವವರು ಚೆಕ್ ಮೂಲಕ ಹಣಕಾಸಿನ ವ್ಯವಹಾರ ಮಾಡುತ್ತಾರೆ. ಆದರೆ ಈ ರೀತಿ ಬ್ಯಾಂಕ್ ಚೆಕ್ ಬಳಸಿ ಹಣಕಾಸಿನ ವ್ಯವಹಾರ ಮಾಡುವುದಕ್ಕೂ ಮೊದಲು ಕೆಲವು ವಿಚಾರಗಳನ್ನು ನೆನಪಿಟ್ಟುಕೊಳ್ಳಬೇಕು. ಇಲ್ಲವಾದರೆ ಚೆಕ್ ಬೌನ್ಸ್ (Cheque Bounce) ಪ್ರಕರಣದಲ್ಲಿ ಸಿಲುಕಿಕೊಳ್ಳಬೇಕಾಗುತ್ತದೆ. ಹಾಗೂ ಇದಕ್ಕೆ ಬಾರಿ ಪ್ರಮಾಣದಲ್ಲಿ ದಂಡ ಜೊತೆಗೆ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ.

What is Cheque Bounce?

 

 

ಯಾವಾಗ ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಗೆ ಚೆಕ್ ಅನ್ನು ನೀಡಿ, ಆತನ ಖಾತೆಯಲ್ಲಿ ಅಷ್ಟು ಮೊತ್ತದ ಹಣ ಇಲ್ಲದೆ ಇದ್ದರೆ ಆ ಸಮಯದಲ್ಲಿ ಪಡೆದುಕೊಂಡ ವ್ಯಕ್ತಿ ಹಣ ವಿತ್ ಡ್ರಾ ಮಾಡಲು ಹೋದರೆ ಚೆಕ್ ಬೌನ್ಸ್ (Cheque Bounce) ಆಗುತ್ತದೆ. ಸಾರಾಂಶ ಹೇಳುವುದಾದರೆ ಬ್ಯಾಂಕ್ ಖಾತೆಯಲ್ಲಿ ಎಷ್ಟು ಹಣ ಇದೆಯೋ ಅಷ್ಟಕ್ಕೇ ಮಾತ್ರ ಚೆಕ್ ವಿತರಣೆ ಮಾಡಬೇಕು ಅದಕ್ಕಿಂತ ಹೆಚ್ಚು ಮೊತ್ತದ ಹಣಕ್ಕೆ ಚೆಕ್ ನೀಡಿದರೆ ಅದು ಬೌನ್ಸ್ ಆಗುತ್ತದೆ.

advertisement

ಚೆಕ್ ಬೌನ್ಸ್ ಆದರೆ ಅದು ಅಪರಾಧ ಎಂದು ಪರಿಗಣಿಸಲ್ಪಡುತ್ತದೆ ಇದಕ್ಕೆ ಜೈಲು ಶಿಕ್ಷೆ ಅನುಭವಿಸಬೇಕು. ಚೆಕ್ ಬೌನ್ಸ್ ಪ್ರಕರಣದಲ್ಲಿ ಚೆಕ್ ನೀಡಿದ ವ್ಯಕ್ತಿ ಅಪರಾಧಿ ಆಗುತ್ತಾನೆ ಹಾಗೂ ಆತನಿಗೆ ದಂಡ ವಿಧಿಸಲಾಗುತ್ತದೆ.

ಚೆಕ್ ಬೌನ್ಸ್ ಆದರೆ ಮುಂದಿನ ಪ್ರಕ್ರಿಯೆ ಏನು?

ಚೆಕ್ ಬೌನ್ಸ್ ಪ್ರಕರಣದಲ್ಲಿ ಯಾರು ಚೆಕ್ ನೀಡಿರುತ್ತಾನೋ ಆತನಿಗೆ ಲೀಗಲ್ ನೋಟಿಸ್ (Legal Notice) ಕಳುಹಿಸಲಾಗುತ್ತದೆ. 15 ದಿನಗಳ ಒಳಗೆ ನೋಟಿಸ್ ಗೆ ಉತ್ತರಿಸಬೇಕು. ಒಂದು ವೇಳೆ ಆತ 15 ದಿನಗಳ ಒಳಗೆ ಯಾವುದೇ ಪ್ರತಿಕ್ರಿಯೆ ಕೊಡದೆ ಇದ್ದಲ್ಲಿ, ನೆಗೋಷಿಯೇಬಲ್ ಇನ್‌ಸ್ಟ್ರುಮೆಂಟ್ ಆಕ್ಟ್ 1881ರ ಅಡಿಯಲ್ಲಿ ಪ್ರಕರಣ ದಾಖಲಿಸಬಹುದು. ಈ ಕಾಯಿದೆಯ ಸೆಕ್ಷನ್ 148 ರ ಅಡಿಯಲ್ಲಿ ಚೆಕ್ ನೀಡಿದ ವ್ಯಕ್ತಿಯನ್ನು ಅಪರಾಧಿ ಎಂದು ಘೋಷಿಸಿ ಆತನಿಗೆ ದಂಡ ಹಾಗೂ ಶಿಕ್ಷೆ ವಿಧಿಸಬಹುದು.

ಚೆಕ್ ಬೌನ್ಸ್ ಆದರೆ ಎರಡರಿಂದ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಆಗಬಹುದು. 800 ರೂಪಾಯಿಗಳ ದಂಡ ವಿಧಿಸಲಾಗುತ್ತದೆ ಹಾಗೂ ಚೆಕ್ ನಲ್ಲಿ ನಮೂದಿಸಲಾಗಿರುವ ಹಣವನ್ನು ಕಟ್ಟಿಕೊಡಬೇಕು.

ಚೆಕ್ ಬೌನ್ಸ್ ಪ್ರಕರಣ ಉಂಟಾದಾಗ ಚೆಕ್ ನೀಡಿದವರಿಗೆ ಕೆಲವು ಹಕ್ಕುಗಳು ಕೂಡ ಇರುತ್ತವೆ. ಉದಾಹರಣೆಗೆ ಚೆಕ್ ಬೌನ್ಸ್ ಪ್ರಕರಣ ಏಳು ವರ್ಷಗಳಿಗಿಂತ ಕಡಿಮೆ ಶಿಕ್ಷೆಯದಾಗಿದ್ದರೆ, ಜಾಮೀನು ಪಡೆಯಬಹುದಾದ ಅಪರಾಧವಾಗಿರುತ್ತದೆ. ಅಂತಿಮ ತೀರ್ಪು ಬರುವವರೆಗೂ ವ್ಯಕ್ತಿಯನ್ನು ಜೈಲಿಗೆ ಕಳುಹಿಸಲು ಸಾಧ್ಯವಿಲ್ಲ. ಈ ಪ್ರಕರಣದಲ್ಲಿ ಕ್ರಿಮಿನಲ್ ಪ್ರೊಸೀಜರ್ ಕೋಡ್ 389 (3) ಅಡಿಯಲ್ಲಿ ವಿಚಾರಣಾ ನ್ಯಾಯಾಲಯಕ್ಕೆ ವ್ಯಕ್ತಿ ಅರ್ಜಿ ಸಲ್ಲಿಸಬಹುದು.

ಚೆಕ್ ಬೌನ್ಸ್ ಪ್ರಕರಣಗಳಿಂದ ತಪ್ಪಿಸಿಕೊಳ್ಳಬೇಕು ಅಂದ್ರೆ ಯಾರಿಗೆ ಚೆಕ್ ನೀಡಬೇಕಾದರೆ ಬಹಳ ಜಾಗರೂಕತೆಯಿಂದ ಇರುವುದು ಒಳ್ಳೆಯದು. ನಿಮ್ಮ ಖಾತೆಯಲ್ಲಿ ಹಣ ಇದ್ದಷ್ಟಕ್ಕೆ ಮಾತ್ರ ಚೆಕ್ ವಿತರಣೆ ಮಾಡಿ

advertisement

Leave A Reply

Your email address will not be published.