Karnataka Times
Trending Stories, Viral News, Gossips & Everything in Kannada

Traffic Rules: ಇನ್ಮುಂದೆ ಟ್ರಾಫಿಕ್ ಪೊಲೀಸರು ನಿಮ್ಮ ಬೈಕ್ ಕೀ ಕಸಿದುಕೊಳ್ಳುವಂತಿಲ್ಲ, ಹೊಸ ನಿಯಮ ಜಾರಿಗೆ

advertisement

ನಮ್ಮ ಹಕ್ಕುಗಳು ಯಾವುದೆಂದು ನಮಗೆ ತಿಳಿಯದೆ ಇದ್ದಾಗ ಅಧಿಕಾರಿಗಳಿಗೆ ನಾವು ಕೆಲವೊಮ್ಮೆ ಹೆದರಿ ಬಿಡುತ್ತೇವೆ. ಅವರ ಬಳಿ ಯಾವ ಅಧಿಕಾರ ಇದೆ ಹಾಗೂ ನಮ್ಮ ಬಳಿ ಯಾವ ಹಕ್ಕಿದೆ ಎಂದು ಸರಿಯಾಗಿ ತಿಳಿದಿದ್ದರೆ ಇಂತಹ ಹೆದರಿಕೆಗಳು ನಮ್ಮಿಂದ ದೂರ ಇರುತ್ತವೆ. ಇದಕ್ಕಾಗಿ ನಮ್ಮ ಹಕ್ಕುಗಳು ಯಾವುದು ಎಂದು ತಿಳಿದುಕೊಳ್ಳುವುದು ಬಹಳ ಅಗತ್ಯಆಗಿರುತ್ತದೆ.

ಈ ಮಾತು ಟ್ರಾಫಿಕ್ ನಿಯಮಗಳ (Traffic Rules) ವಿಷಯದಲ್ಲೂ ಬಹಳಷ್ಟು ಬಾರಿ ನಿಜ ಆಗಿರುತ್ತದೆ. ರಸ್ತೆಯ ಮೇಲೆ ವಾಹನ ಚಲಾಯಿಸುವಾಗ ನಮ್ಮ ಹಕ್ಕುಗಳು ಏನು ಹಾಗೂ ಟ್ರಾಫಿಕ್ ಪೊಲೀಸ್ ನಮ್ಮಿಂದ ಯಾವ ತರಹದ ಮಾಹಿತಿಗಳನ್ನು ಪಡೆಯಬಹುದು ಎನ್ನುವುದನ್ನು ತಿಳಿದಿದ್ದರೆ ನಾವು ಧೈರ್ಯವಾಗಿ ರಸ್ತೆ ಮೇಲೆ ವಾಹನವನ್ನು ಚಲಾಯಿಸಬಹುದು. ಹಾಗೂ ಮಾಹಿತಿ ಕೇಳಿದಾಗಲೂ ಯಾವೆಲ್ಲಾ ಮಾಹಿತಿ ನೀಡಬೇಕೋ ಅಷ್ಟೇ ಮಾಹಿತಿ ನೀಡಿ ಮುಂದೆ ಸಾಗಬಹುದು.

ವಾಹನದಿಂದ ಅದರ ಕೀ ತೆಗೆದುಕೊಳ್ಳುವ ಸಂದರ್ಭಗಳು ಯಾವುದು:

 

advertisement

 

ಹಲವಾರು ಬಾರಿ ಟ್ರಾಫಿಕ್ ಅಧಿಕಾರಿಗಳು (Traffic Officers) ವಿಚಾರಣೆಯ ಸಲುವಾಗಿ ನಮ್ಮ ಗಾಡಿಯ ಚಾವಿ ಅಥವಾ ಕೀ ಯನ್ನು ತೆಗೆದು ಇಟ್ಟುಕೊಂಡಿರುತ್ತಾರೆ. ಎಲ್ಲ ದಾಖಲೆಗಳನ್ನು ನೀಡಿದ ಬಳಿಕವಷ್ಟೇ ಈ ಚಾವಿ ಯನ್ನು ನಮ್ಮ ಕೈಗೆ ಹಿಂದಿರುಗಿಸುತ್ತಾರೆ. ಆದರೆ ಇದು ಸರಿಯೇ ? ಹೀಗೆ ಮಾಡಬಹುದೇ ? ಎಂದು ನಮಗೆ ತಿಳಿದಿರುವುದಿಲ್ಲ. ಅವರ ಬಳಿ ಇಂತಹ ಅಧಿಕಾರ ಇದೆಯೇ ಎಂದು ನಮಗೆ ಗೊತ್ತಿರುವುದಿಲ್ಲ ಇದಕ್ಕಾಗಿ ನಾವು ಅವರು ನಮ್ಮ ವಾಹನದಿಂದ ಕೀಯನ್ನು ತೆಗೆದುಕೊಂಡಾಗಲು ಸುಮ್ಮನಿರುತ್ತವೆ.

ನಾವು ಯಾವುದೇ ತಪ್ಪನ್ನು ಮಾಡದೆ ಅಥವಾ ಟ್ರಾಫಿಕ್ ರೂಲ್ ಅನ್ನು ಮುರಿಯದೆ ಇದ್ದಾಗ ಟ್ರಾಫಿಕ್ ಪೊಲೀಸ್ (Traffic Police) ನಮ್ಮ ಗಾಡಿಯ ಕೀ ಯನ್ನು ತೆಗೆದುಕೊಳ್ಳುವಂತಿಲ್ಲ. ಒಂದುವೇಳೆ ನಾವು ಯಾವುದಾದರೂ ಟ್ರಾಫಿಕ್ ನಿಯಮವನ್ನು (Traffic Rules) ಅನುಸರಿಸರದೆ ಇದ್ದಾಗ ಅಥವಾ ಆಕ್ಸಿಡೆಂಟ್ ಮಾಡಿದಾಗ ಹಾಗೂ ಟ್ರಾಫಿಕ್ ಪೋಲೀಸ್ ನಿಲ್ಲಿಸಲು ಹೇಳಿದಾಗ ನಿಲ್ಲಿಸದೇ ಇದ್ದಾಗ ಮಾತ್ರ ಟ್ರಾಫಿಕ್ ಪೊಲೀಸ್ ನಮ್ಮ ವಾಹನದ ಬಳಿ ಬಂದು ಅದರಿಂದ ನಮ್ಮ ಕೀ ಯನ್ನು ತೆಗೆದುಕೊಂಡು ತಮ್ಮ ಬಳಿ ಇರಿಸಿಕೊಳ್ಳಬಹುದು. ಹಾಗೂ ಈ ಕಾರಣಕ್ಕಾಗಿ ನಮ್ಮನ್ನು ಅರೆಸ್ಟ್ ಕೂಡ ಮಾಡುವಂತಿಲ್ಲ.

ಈ ನಿಯಮ ನಮಗೆ ತಿಳಿಯದೆ ಇದ್ದು ನಾವು ಡಾಕ್ಯುಮೆಂಟ್ ವೆರಿಫಿಕೇಶನ್ ಹೆಸರಿನಲ್ಲಿ ಕೀ ಯನ್ನು ತೆಗೆದುಕೊಂಡಾಗ ಸುಮ್ಮನಿರುತ್ತವೆ. ವಾಹನ ಚಲಾಯಿಸುವಾಗ ನಮ್ಮ ಬಳಿ ಗಾಡಿಗೆ ಸಂಬಂಧಿಸಿದ ಮಾಹಿತಿಗಳು ಇರಬೇಕು ಎನ್ನುವುದಕ್ಕೂ ಮೂಲ ಕಾರಣ, ಒಂದುವೇಳೆ ಯಾವುದಾದರು ಅಪಘಾತವಾದಾಗ ಇದರ ಮಾಲೀಕರು ಯಾರು ಎಂದು ತಿಳಿಯಬೇಕು ಹಾಗೂ ನಮ್ಮ ವಾಹನವನ್ನು ಯಾರಾದರೂ ಕಳ್ಳತನ ಮಾಡಿದಾಗಲೂ ನಮ್ಮ ಬಳಿ ಪೂರಕ ದಾಖಲೆಗಳು ಇದ್ದರೆ ಸುಲಭವಾಗಿ ನಮ್ಮ ಗಾಡಿ ನಮ್ಮ ಕೈ ಸೇರುತ್ತದೆ ಎನ್ನುವುದಕ್ಕಾಗಿರುತ್ತದೆ. ಇಂತಹ ನಿಯಮಗಳನ್ನು ತಿಳಿದುಕೊಳ್ಳಿ ನಿಮ್ಮ ಹಕ್ಕನ್ನು ತಿಳಿದುಕೊಳ್ಳಿ.

advertisement

Leave A Reply

Your email address will not be published.