Karnataka Times
Trending Stories, Viral News, Gossips & Everything in Kannada

Gruha Lakshmi: ಗೃಹಲಕ್ಷ್ಮಿ 6 ನೇ ಕಂತಿನ ಹಣಕ್ಕೆ ಎರಡು ಹೊಸ ರೂಲ್ಸ್, ಹೀಗೆ ಮಾಡಿದ್ರೆ ಹಣ ಬರಲ್ಲ!

advertisement

ಗೃಹಲಕ್ಷ್ಮಿ ಯೋಜನೆಯನ್ನು ರಾಜ್ಯ ಸರ್ಕಾರವು ಜಾರಿ ಮಾಡಿದ್ದು. ಇದರಿಂದ ಅನೇಕ ಮಹಿಳೆಯರು ಹಣವನ್ನು ಪಡೆಯುತ್ತಿದ್ದು ತಿಂಗಳಿಗೆ 2000 ಹಣವನ್ನು ಪಡೆಯುತ್ತಿದ್ದಾರೆ. ಈ ಎರಡು ಕೆಲಸ ಮಾಡದಿದ್ರೆ ಹಣ ಸಿಗುವುದಿಲ್ಲ ಎಂದು ಈಗಾಗಲೇ ರಾಜ್ಯ ಸರ್ಕಾರ ಜಾರಿ ಮಾಡಿದೆ. ರಾಜ್ಯದ ಎಲ್ಲಾ ಜಿಲ್ಲೆಯ ಮಹಿಳೆಯರ ಬ್ಯಾಂಕ್ ಖಾತೆಗೆ ಕಳೆದ ಮೂರು ದಿನಗಳಿಂದ ಗೃಹಲಕ್ಷ್ಮಿಯೋಜನೆ (Gruha Lakshmi Scheme) ಯ 5ನೇ ಕಂತಿನ ಹಣ ಜಮಾ ಆಗುತ್ತಿದ್ದು ಇದುವರೆಗೂ ಒಂದು ಕಂತಿನ ಹಣ ಬರದೆ ಇರುವಂತಹ ಮಹಿಳೆಯರಿಗೆ ಮತ್ತೊಮ್ಮೆ ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಮಾಡಿಸಿದ ನಂತರ 5ನೇ ಕಂತಿನ ಹಣವನ್ನು ಕೂಡ ವರ್ಗಾವಣೆ ಮಾಡಲಾಗುತ್ತಿದೆ. ಪ್ರತಿ ತಿಂಗಳ ಹಣ ಸಾಮಾನ್ಯವಾಗಿ ಒಂದು ತಿಂಗಳ ತಡವಾಗಿ ತಲುಪುತ್ತಿದೆ. ಫೆಬ್ರವರಿ ತಿಂಗಳಲ್ಲಿ 6 ನೇ ಕಂತಿನ ಹಣ ಮಹಿಳೆಯರ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗಲಿದೆ.

ಈ ಕೆಲಸ ಮಾಡಲೇಬೇಕು :

 

 

ಗೃಹಲಕ್ಷ್ಮಿ ಯೋಜನೆಯ ಹಣ ಬರಬೇಕಾದ್ರೆ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ (Aadhaar Card) ಲಿಂಕ್ ಆಗುವುದು ಅಗತ್ಯ ಗೃಹಲಕ್ಷ್ಮಿ ಯೋಜನೆ ಹಣ (Gruha Lakshmi Money) ಖಾತೆಗೆ ಜಮಾ ಆಗದೇ ಇದ್ದರು ತಮ್ಮ ದಾಖಲೆಗಳನ್ನು ಸಮಸ್ಯೆಗಳನ್ನು ಆದಷ್ಟು ಬೇಗ ಸರಿಪಡಿಸಿ ಎಂದು ಸೂಚಿಸಲಾಗಿದೆ. ರಾಜ್ಯದಲ್ಲಿ ಒಟ್ಟು 15 ಲಕ್ಷಕ್ಕೂ ಅಧಿಕ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಸಮಯದಲ್ಲಿ ಆಧಾರ್ ಕಾರ್ಡ್ ಗೆ ಲಿಂಕ್ ಆಗದ ಬ್ಯಾಂಕ್ ಖಾತೆಯನ್ನು ನೀಡಿದ್ದಾರೆ ಎಂಬ ಮಾಹಿತಿ ದೊರೆತಿದೆ.

ಈ ಕಾರಣದಿಂದ ಕೆಲವು ಮಹಿಳೆಯರಿಗೆ ‌ ಹಣಜಮಾಗುವುದು ತೊಂದರೆ ಆಗುತ್ತಿದೆ ಸಾಕಷ್ಟು ಜನರು ಆಧಾರ್ ಲಿಂಕ್ ಮಾಡದೆ ಇದ್ದರೆ ಇನ್ನು ಕೆಲವೇ ದಿನಗಳಲ್ಲಿ ಹಣ ಬರಲಿದೆ ಹಾಗಾಗಿ ಬೇಗ ಆಧಾರ್ ಕಾರ್ಡ್ ಲಿಂಕ್ ಅನ್ನು ಬ್ಯಾಂಕಿನೊಂದಿಗೆ ಮಾಡಿಕೊಳ್ಳಿ ಮಹಾಲಕ್ಷ್ಮಿ ಯೋಜನೆ, ಬಿಗ್ ಅಪ್ಡೇಟ್ ಇದೆ. ಈಗಾಗಲೆ ಆಧಾರ್ ಅಪ್ಡೇಟ್ ಮಾಡಿ ನೀಡಿದವರು ಸಹ ಕಾಯಬೇಕು. ಹಾಗೂ ಅಧಾರ್ ಸೀಡಿಂಗ್ ಮಾಡಿದ ಮಹಿಳೆಯರು ಕೂಡ ಕೆಲ ಕಾಲ ಕಾಯಬೇಕಿದೆ.

ಗೃಹ ಲಕ್ಷ್ಮಿ ಹಣ ಬಂದಿದೆಯೇ ಎಂದು ತಿಳಿಯೋದು ಹೇಗೆ?

advertisement

ಗೃಹಲಕ್ಷ್ಮಿ ಯೋಜನೆಯಲ್ಲಿ ಫಲಾನುಭವಿಗಳು ಪ್ರತಿ ತಿಂಗಳು 2,000 ರೂಪಾಯಿಯನ್ನು ಪಡೆಯುತ್ತಾರೆ. ಇಲ್ಲಿ ಅವರ ಖಾತೆಗೆ ನೇರವಾಗಿ ಹಣ ಜಮೆಯಾಗಲಿದೆ. ಕೆಲವೊಮ್ಮೆ ಖಾತೆಗೆ ಹಣ ಜಮೆಯಾಗಿದ್ದರ ಬಗ್ಗೆ ಮೊಬೈಲ್‌ಗೆ ಎಸ್‌ಎಂಎಸ್‌ ಬರುತ್ತದೆ. ಹಲವು ಬಾರಿ ಎಸ್‌ಎಂಎಸ್‌ ಬರುವುದಿಲ್ಲ. ಇಂತಹ ಸಮಯದಲ್ಲಿ ಮನೆಯಲ್ಲೇ ಕುಳಿತು ಚೆಕ್‌ ಮಾಡಿಕೊಳ್ಳುವುದು ಹೇಗೆ ಎಂಬ ಬಗ್ಗೆ ತಿಳಿದುಕೊಳ್ಳಬಹುದು.

ಅವರು ಪಡೆದ ಅಥವಾ ಅವರ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿದೆಯೋ ಇಲ್ಲವೋ ಎಂದು ಅವರಿಗೆ ತಿಳಿಯುದಿಲ್ಲ. ಇದೀಗ ರಾಜ್ಯ ಸರ್ಕಾರ ಆ ಒಂದು ಸಮಸ್ಯೆಯನ್ನು ಪರಿಹರಿಸಿದೆ. ನಿಮ್ಮ ಮೊಬೈಲ್ ಮೂಲಕವೇ ರೇಷನ್ ಕಾರ್ಡ್ ನಂಬರ್ (Ration Card Number) ಬಳಸಿ ಹಣ ಜಮಾ ಅಥವಾ ಅರ್ಜಿ ಸಲ್ಲಿಸಿದ ವಿವರ ತಿಳಿಯಬಹುದು.

ಹಣ ಜಮೆಯ ಬಗ್ಗೆ ಹೀಗೆ ತಿಳಿಯಬಹುದು:

ರಾಜ್ಯ ಸರ್ಕಾರದ ಅಧಿಕೃತ ಇ- ಆಡಳಿತ ವಿಭಾಗದ ಮಾಹಿತಿ ಕಣಜ‌ ವೆಬ್‌ಸೈಟ್‌ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ಎಡಭಾಗದಲ್ಲಿ “ಗೃಹಲಕ್ಷ್ಮಿ ಅಪ್ಲಿಕೇಶನ್ ಸ್ಥಿತಿ” ಎಂಬ ಆಯ್ಕೆ ಇದ್ದು, ಅದರ ಮೇಲೆ ಕ್ಲಿಕ್‌ ಮಾಡಿ.
ಬಳಿಕ ಅರ್ಜಿದಾರರ ರೇಷನ್ ಕಾರ್ಡ್ ನಂಬ‌ರ್ (ಇದು 12 ಅಂಕಿ ಇರುತ್ತದೆ) ಅನ್ನು ಸರಿಯಾಗಿ ನಮೂದಿಸಬೇಕು. ಬಳಿಕ ಅಲ್ಲೇ ಇರುವ “Submit” ಬಟನ್ ಮೇಲೆ ಕ್ಲಿಕ್ ಮಾಡಿ.

ಆಗ ಇನ್ನೊಂದು ಪುಟ ತೆರೆದುಕೊಳ್ಳಲಿದ್ದು, ಅಲ್ಲಿ ನೀವು ಅರ್ಜಿ ಸಲ್ಲಿಸಿದ ದಿನಾಂಕ (Applied Date), ನಿಮ್ಮ ಅರ್ಜಿ ಸ್ಥಿತಿ (Status), ಅರ್ಜಿ ಅನುಮೋದನೆಗೊಂಡ ದಿನಾಂಕ (Approved Date) ಮತ್ತು ಕೊನೆಯದಾಗಿ ಯಾವ ದಿನ ಹಣ ವರ್ಗಾವಣೆ ಆಗಿದೆ ಎಂವ ವಿವರ (Payment Date and Amount) ಎಂದು ತೋರಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ “Details” ಬಟನ್ ಮೇಲೆ ಕ್ಲಿಕ್ ಮಾಡಿ.

ಆಗ ಗೃಹಲಕ್ಷ್ಮಿ ಯೋಜನೆಯಡಿ ಯಾವ ಯಾವ ತಿಂಗಳು ಯಾವ ದಿನಾಂಕಕ್ಕೆ 2000 ರೂಪಾಯಿ ಹಣವನ್ನು ನಿಮ್ಮ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ ಎಂಬ ಮಾಹಿತಿಯು ತೋರಿಸುತ್ತದೆ. ಈ ಮೂಲಕ ನೀವು ಗೃಹ ಲಕ್ಷ್ಮಿ ಯೋಜನೆ ಅಡಿ ಖಾತೆಗೆ ಹಣ ಬಂದಿದೆಯೇ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ.

advertisement

Leave A Reply

Your email address will not be published.