Karnataka Times
Trending Stories, Viral News, Gossips & Everything in Kannada

Ram Mandir: ಶ್ರೀರಾಮ ಮಂದಿರದಲ್ಲಿ ಯಾವ ಸಮಯದಲ್ಲಿ ಭಕ್ತರು ದರ್ಶನ ಪಡೆಯಬಹುದು? ಆರತಿ ಸಮಯ ಮತ್ತು ಬುಕಿಂಗ್ ಮಾಹಿತಿ ಇಲ್ಲಿದೆ!

advertisement

ದೇಶಾದ್ಯಂತ ಜನವರಿ 22, 2024 ದೀಪಾವಳಿಯನ್ನೇ ಆಚರಿಸಲಾಗಿದೆ. ಶ್ರೀ ರಾಮಲಲ್ಲ ರಾಮಮಂದಿರವನ್ನು ಸೇರಿದ್ದಾನೆ. ರಾಮಭಕ್ತರು ರಾಮ ಲಲ್ಲಾನ (Ram Lala) ದರ್ಶನಕ್ಕಾಗಿ ಅಯೋಧ್ಯೆಗೆ ಧಾವಿಸುತ್ತಿದ್ದಾರೆ.

ಶ್ರೀರಾಮ ಮಂದಿರ ನಿರ್ಮಾಣ ಹಲವು ವರ್ಷಗಳ ಕನಸು ಭಾರತದ ಪ್ರತಿಯೊಬ್ಬ ಪ್ರಜೆ ಕೂಡ 22ನೇ ತಾರೀಖಿನಂದು ಸಂಭ್ರಮಿಸಿದ್ದು ಸುಳ್ಳಲ್ಲ. ಇಂತಿಪ್ಪ ಐತಿಹಾಸಿಕ ಸ್ಥಳಕ್ಕೆ ನಿಮಗೂ ಕೂಡ ಭೇಟಿ ಮಾಡಬೇಕು ಎಂದು ಅನಿಸಿಯೇ ಇರುತ್ತೆ. ಹಾಗಾದ್ರೆ ಶ್ರೀರಾಮ ಮಂದಿರದಲ್ಲಿ ರಾಮಚಂದ್ರನ ದರ್ಶನವನ್ನು ಯಾವ ಸಮಯದಲ್ಲಿ ಪಡೆಯಬಹುದು? ದರ್ಶನಕ್ಕೆ ಬುಕಿಂಗ್ ಮಾಡಿಕೊಳ್ಳುವುದು ಹೇಗೆ? ಎಲ್ಲರ ಬಗ್ಗೆ ಇಲ್ಲಿದೆ ವಿವರ.

ಯಾವ ಸಮಯದಲ್ಲಿ ದೇವಾಲಯಕ್ಕೆ ಭೇಟಿ ನೀಡಬಹುದು?

ಇನ್ನು ಮುಂದೆ ಪ್ರತಿದಿನ ಬೆಳಿಗ್ಗೆ ಏಳು ಗಂಟೆಯಿಂದ 11:30 ವರೆಗೆ ಹಾಗೂ ಮಧ್ಯಾಹ್ನ 2 ಗಂಟೆಯಿಂದ ಸಂಜೆ 7:00 ವರೆಗೆ ಶ್ರೀರಾಮನ ಭಕ್ತರು ಶ್ರೀ ರಾಮಚಂದ್ರನ ದರ್ಶನವನ್ನು ಪಡೆಯಬಹುದು. ಇದಕ್ಕಾಗಿ ಅಯೋಧ್ಯೆಯ ಕ್ಷೇತ್ರ ಟ್ರಸ್ಟ್ ಭಕ್ತರಿಗಾಗಿ ಪ್ರವೇಶ ಪಾಸ್ ನೀಡುತ್ತದೆ. ಅದರಲ್ಲಿನ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರೆ ದೇವಾಲಯಕ್ಕೆ ಪ್ರವೇಶಿಸಲು ಅನುಮತಿ ಕೊಡಲಾಗುವುದು ಎನ್ನುವ ಮಾಹಿತಿ ಇದೆ.

advertisement

ಆರತಿ ಸಮಯ:

 

 

ಪ್ರಭು ಶ್ರೀ ರಾಮ ಮಂದಿರ (Ram Mandir) ದಲ್ಲಿ ದೇವಾಲಯಕ್ಕೆ ಭೇಟಿ ನೀಡಿದ ಭಕ್ತರು ಆರತಿ ಸಮಯದಲ್ಲಿ ಹೋದರೆ ದೇವರ ಕೃಪೆಗೂ ಪಾತ್ರರಾಗಬಹುದು. ಸಮಯ ಬೆಳಿಗ್ಗೆ 6.30. ಮಧ್ಯಾಹ್ನ 12 ಗಂಟೆ ಹಾಗೂ ಸಂಜೆ ಏಳು 30ಕ್ಕೆ ಆರತಿ ನಡೆಯಲಿದೆ.

ದರ್ಶನಕ್ಕಾಗಿ ಬುಕಿಂಗ್ ಮಾಡಿಕೊಳ್ಳುವುದು ಹೇಗೆ?

  • ಭಕ್ತರು ದೇವಾಲಯಕ್ಕೆ ಭೇಟಿ ನೀಡಲು https://srjbtkshetra.org/ ಈ ವೆಬ್ ಸೈಟ್ ನಲ್ಲಿ ಬುಕಿಂಗ್ ಮಾಡಿಕೊಳ್ಳಬಹುದು.
  • ಇದಕ್ಕಾಗಿ ನಿಮ್ಮ ಮೊಬೈಲ್ ಸಂಖ್ಯೆ ನಮೂದಿಸಬೇಕು ನಂತರ ಅದಕ್ಕೆ ಓಟಿಪಿ ಕಳುಹಿಸಲಾಗುತ್ತದೆ. OTP ಯನ್ನು ನಮೂದಿಸಿ ನೋಂದಾಯಿಸಿಕೊಳ್ಳಿ.
  • ಈಗ ಆರತಿ ಅಥವಾ ದರ್ಶನಕ್ಕೆ ಪ್ರೊಫೈಲ್ ಚೆಕ್ ಮಾಡಿ. ಆದರೆ ಈಗಿರುವ ಮಾಹಿತಿಯ ಪ್ರಕಾರ ಸದ್ಯ ಆನ್ಲೈನ್ ಬುಕಿಂಗ್ ಓಪನ್ ಆಗಿಲ್ಲ.
  • ದೇವಾಲಯದ ಆವರಣ ಪ್ರವೇಶಿಸುವ ಮೊದಲು ದೇವಾಲಯದ ಕೌಂಟರ್ ನಲ್ಲಿ ಪಾಸ್ ತೆಗೆದುಕೊಳ್ಳಬೇಕು.
  • ಅಯೋಧ್ಯೆಯು ಶ್ರೀರಾಮ ಮಂದಿರ ಈಗಷ್ಟೇ ಉದ್ಘಾಟನೆಯಾಗಿದೆ. ಹಾಗಾಗಿ ಅರ್ಜೆಂಟ್ ಮಾಡದೆ ಸ್ವಲ್ಪ ದಿನ ಕಾದು ಅಲ್ಲಿಯ ನಿಯಮಗಳನ್ನು ಸರಿಯಾಗಿ ತಿಳಿದುಕೊಂಡು ನಂತರ ಪ್ರಯಾಣ ಬೆಳೆಸುವುದು ಸೂಕ್ತ. ಯಾಕಂದ್ರೆ ಬೇರೆ ಬೇರೆ ರೀತಿಯ ಪ್ಯಾಕೇಜ್ ಗಳು ಕೂಡ ಆರಂಭವಾಗಿದ್ದು ನೀವು ಕಡಿಮೆ ಖರ್ಚಿನಲ್ಲಿ ಪ್ರಯಾಣ ಮಾಡಬಹುದಾದ ಪ್ಯಾಕೇಜ್ ಕೂಡ ಆಯ್ತು ಕೊಳ್ಳಬಹುದು.

advertisement

Leave A Reply

Your email address will not be published.