Karnataka Times
Trending Stories, Viral News, Gossips & Everything in Kannada

Actor Darshan Arrested: ಯಾವ ಕಾರಣಕ್ಕಾಗಿ ದರ್ಶನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ ಗೊತ್ತಾ? ಕಂಪ್ಲೀಟ್ ಡಿಟೇಲ್ಸ್

advertisement

Actor Darshan Arrested: ಕನ್ನಡ ಚಿತ್ರರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ಕೇಳಿ ಬರುತ್ತಿರುವಂತಹ ಸುದ್ದಿಗಳು ನಿಜಕ್ಕೂ ಕೂಡ ಕನ್ನಡ ಪ್ರೇಕ್ಷಕರಿಗೆ ಮರ್ಯಾದೆ ಹೋಗೋ ರೀತಿಯಲ್ಲಿ ಮಾಡ್ತಾ ಇದೆ ಅಂದ್ರೆ ತಪ್ಪಾಗಲ್ಲ. ಇತ್ತೀಚಿಗೆ ಎಷ್ಟು ನಿಮಗೆಲ್ಲರಿಗೂ ತಿಳಿದಿರಬಹುದು ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರ ವಿವಾಹ ವಿಚ್ಛೇದನದ ಸದ್ದಿ ಕೇಳಿ ಬಂದಿತ್ತು.

ಅದಾದ ನಂತರ ಕನ್ನಡ ಚಿತ್ರರಂಗದ ದೊಡ್ಮನೆ ಎಂದು ಕರೆಸಿಕೊಳ್ಳುವಂತಹ ರಾಜಕುಮಾರ್ ರವರ ಮಗ ಆಗಿರುವಂತಹ ರಾಘವೇಂದ್ರ ರಾಜಕುಮಾರ್ ರವರ ಮಗ ಯುವರಾಜ್ ಕುಮಾರ್ ಹಾಗೂ ಅವರ ಪತ್ನಿಯ ವಿವಾಹ ವಿಚ್ಛೇದನದ ಸುದ್ದಿ ಕೂಡ ಕೇಳಿಬಂದಿತ್ತು ಅದರಲ್ಲೂ ವಿಶೇಷವಾಗಿ ಯುವರಾಜ್ ಕುಮಾರ್ ಅವರು ತಮ್ಮ ಸಹ ನಟಿಯ ಜೊತೆಗೆ ಬೇಡವಾದ ಸಂಬಂಧವನ್ನು ಹೊಂದಿದ್ದಾರೆ ಎನ್ನುವ ಕಾರಣಕ್ಕಾಗಿ ಅವರ ಪತ್ನಿ ವಿವಾಹ ವಿಚ್ಛೇದನವನ್ನು ನೀಡಿದ್ದಾರೆ ಅನ್ನುವಂತಹ ಆರೋಪವನ್ನು ಕೂಡ ಹಾಕಲಾಗಿದ್ದು ಅದು ಎಷ್ಟರ ಮಟ್ಟಿಗೆ ಸತ್ಯ ಅಥವಾ ಸುಳ್ಳು ಎನ್ನುವುದನ್ನು ನಾವು ಮುಂದಿನ ದಿನಗಳಲ್ಲಿ ತಿಳಿದುಕೊಳ್ಳಬೇಕಾಗಿದೆ. ಇಷ್ಟರ ನಡುವೆ ಈಗ ಕನ್ನಡ ಚಿತ್ರರಂಗದ ಮತ್ತೊಬ್ಬ ದೊಡ್ಡ ಮಟ್ಟದ ಸ್ಟಾರ್ ಬಂಧನಕ್ಕೆ ಒಳಗಾಗಿದ್ದಾರೆ.

Image Source: Instagram

advertisement

ಹೌದು ನಾವ್ ಮಾತಾಡ್ತಿರೋದು ನಮ್ಮ ಕನ್ನಡ ಚಿತ್ರರಂಗ ಕಂಡಂತಹ ದೊಡ್ಡ ಮಟ್ಟದ ಸ್ಟಾರ್ ನಾಯಕರಲ್ಲಿ ಒಬ್ಬರಾಗಿರುವಂತಹ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು. ಹೌದು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರನ್ನು ಅವರ ಫಾರ್ಮ್ ಹೌಸ್ ನಿಂದ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕನ್ನಡ ಚಿತ್ರರಂಗದ ಒಬ್ಬ ದೊಡ್ಡ ಮಟ್ಟದ ಸ್ಟಾರ್ ನಾಯಕ ನಟ ಮತ್ತೆ ಈ ರೀತಿ ಪೊಲೀಸರ ಅತಿಥಿಯಾಗಿರುವುದು ನಿಜಕ್ಕೂ ಕೂಡ ಕನ್ನಡ ಚಿತ್ರರಂಗದ ತಲೆತಗ್ಗಿಸುವಂತಹ ಕೆಲಸವಾಗಿದೆ ಎಂದು ಹೇಳಬಹುದಾಗಿದೆ. ಅದು ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಬಂಧನಕ್ಕೆ ಒಳಗಾಗಿರುವುದು ಮ-ರ್ಡರ್ ಪ್ರಕರಣದಲ್ಲಿ ಎಂಬುದಾಗಿ ತಿಳಿದು ಬಂದಿದೆ. ಹಾಗಿದ್ರೆ ಬನ್ನಿ ಈ ಮ-ರ್ಡ ರ್ ಪ್ರಕರಣದ ಬಗ್ಗೆ ತಿಳಿದುಕೊಂಡಿರುವಂತಹ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.

ಯಾಕಾಗಿ ದರ್ಶನ್ ರವರ ಬಂಧನ ಆಗಿದೆ?

ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ವಿಜಯಲಕ್ಷ್ಮಿ ದರ್ಶನ್ ರವರನ್ನು ಮದುವೆಯಾಗಿದ್ದಾರೆ. ಅವರ ಹೊರತಾಗಿ ಕೂಡ ಕಳೆದ ಹತ್ತು ವರ್ಷಗಳಿಂದ ಪವಿತ್ರ ಗೌಡ ಎನ್ನುವವರ ಜೊತೆಗೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ದಾಂಪತ್ಯ ಜೀವನವನ್ನು ನಡೆಸುತ್ತಿದ್ದಾರೆ ಎನ್ನುವುದು ಅಧಿಕೃತವಾಗಿ ತಿಳಿದು ಬಂದಿದೆ. ಪವಿತ್ರ ಗೌಡ ಅವರಿಗೆ ರೇಣುಕಾ ಸ್ವಾಮಿ ಎನ್ನುವ ಯುವಕ ಕೆಟ್ಟದಾಗಿ ಮೆಸೇಜ್ ಮಾಡಿದ್ದ ಎಂಬುದಾಗಿ ತಿಳಿದು ಬಂದಿದ್ದು ಇದೇ ಕಾರಣಕ್ಕಾಗಿ ದರ್ಶನ್ ಹಾಗೂ ಅವರ ಸಹಚರರು ಆತನ ಮೇಲೆ ಹಲ್ಲೆ ನಡೆಸಿ ಮರಣ ಹೊಂದಿದ್ದಾನೆ ಎಂಬುದಾಗಿ ತಿಳಿದು ಬಂದಿದೆ.

ಹಲ್ಲೆ ನಡೆಸಿದ ನಂತರ ಆತನ ದೇಹವನ್ನು ಬೇರೆ ಕಡೆಗೆ ಹೋಗಿ ಎಸೆಯಲಾಗಿತ್ತು ಎನ್ನುವುದಾಗಿ ಕೂಡ ಈ ಪ್ರಕರಣದ ಬಗ್ಗೆ ಮಾಹಿತಿ ತಿಳಿದು ಬಂದಿದ್ದು ಇದೇ ಕಾರಣಕ್ಕಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಸೇರಿದಂತೆ 10 ಜನರನ್ನು ಬಂಧಿಸಲಾಗಿದೆ ಎಂಬುದಾಗಿ ತಿಳಿದು ಬಂದಿದ್ದು ಮುಂದಿನ ದಿನಗಳಲ್ಲಿ ಈ ಬಗ್ಗೆ ಯಾವ ರೀತಿಯಲ್ಲಿ ಸುದ್ದಿ ಸಿಗುತ್ತದೆ ಅನ್ನೋದನ್ನು ಕಾದು ನೋಡಬೇಕಾಗಿದೆ. ಸುದ್ದಿ ಮಾಧ್ಯಮಗಳಲ್ಲಿ ಈಗಾಗಲೇ ದರ್ಶನ್ ರವರನ್ನು ಬಂಧಿಸಿರುವ ವಿಚಾರ ದೊಡ್ಡ ಮಟ್ಟದಲ್ಲಿ ಹರಡುತ್ತಿದ್ದು ಇದು ಸಂಪೂರ್ಣವಾಗಿ ನಿಜಾನಾ ಅಥವಾ ಏನು ಎನ್ನುವುದನ್ನು ನಾವು ಕಾದು ನೋಡಬೇಕಾಗಿದೆ.

advertisement

Leave A Reply

Your email address will not be published.