Karnataka Times
Trending Stories, Viral News, Gossips & Everything in Kannada

KSRTC: ಉಚಿತ ಬಸ್ ಮುಕ್ತಾಯವಾಗುತ್ತೆ ಎನ್ನುವ ಬೆನ್ನಲ್ಲೇ KSRTC ಯಿಂದ ಹೊಸ ನಿರ್ಧಾರ, ಮುಖ್ಯವಾದ ಮಾಹಿತಿ

advertisement

Payment of ticket fares to go digital in KSRTC buses: ಸದ್ಯ ಎಲ್ಲೆಡೆ ಗ್ಯಾರಂಟಿಗಳು ಬಂದ್ ಆಗುತ್ತವೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ ಇದಾರೆ ಬೆನ್ನಲ್ಲೇ ಸಾವಿರಾರು ಪ್ರಯಾಣಿಕರಿಗೆ KSRTC ಹೊಸ ನಿಯಮ ಹಂಚಿಕೊಂಡಿದೆ. ಈಗಂತೂ ಎಲ್ಲ ಕಡೆ ಡಿಜಿಟಲ್ ಇಂಡಿಯಾ ಪರಿಕಲ್ಪನೆ ಬೇರು ಬಿಟ್ಟಿದೆ ಎನ್ನಬಹುದು. ಸಣ್ಣ ಪುಟ್ಟ ವಸ್ತು ಖರೀದಿ ಮಾಡಿದರು UPI ಪೇ ಮಾಡುತ್ತಿದ್ದವರಿಗೆ ರೈಲ್ವೇ, ಟಿಕೆಟ್ ಮತ್ತು ಬಸ್ ,ಫ್ಲೈಟ್ ಬುಕ್ಕಿಂಗ್ ಕೂಡ ಆನ್ಲೈನ್ ನಲ್ಲಿ ಮಾಡಬಹುದು. ಹೀಗಾಗಿ ನಗದು ರಹಿತ ಆನ್ಲೈನ್ ವ್ಯವಹಾರ ಎಲ್ಲ ಕಡೆ ಸಾಮಾನ್ಯವಾಗಿಬಿಟ್ಟಿದೆ. ಇದೀಗ KSRTC ಬಸ್ ನಲ್ಲಿಯೂ ಹೊಸತೊಂದು ಪರಿಕಲ್ಪನೆ ಜಾರಿಯಾಗಲಿದ್ದು ಇದರಿಂದ ಪ್ರಯಾಣಿಕರಿಗೆ ಅನೇಕ ತರನಾದ ಪ್ರಯೋಜನೆ ಸಿಗುತ್ತದೆ ಎಂದು ಹೇಳಬಹುದು.

ಕೆಲವೊಂದು ಸರಕಾರಿ ಮತ್ತು ಖಾಸಗಿ ಬಸ್ ನಲ್ಲಿ ಇತ್ತೀಚೆಗಷ್ಟೇ ಡಿಜಿಟಲ್ ಪೇ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತಂದಿರುವುದನ್ನು ನಾವು ಕಂಡಿರುತ್ತೇವೆ. ಈಗ ಅದರ ಬೆನ್ನಲ್ಲೆ ಬಸ್ ಪಾಸ್ ವ್ಯವಸ್ಥೆ ಸುಗಮಗೊಳಿಸಲು ಹೊಸ ವ್ಯವಸ್ಥೆ ಜಾರಿ ಮಾಡಲಾಗುತ್ತಿದೆ. ಡಿಜಿಟಲ್ ಪೇ ಹಾಗೂ ನೂತನ ಬಸ್ ಪಾಸ್ ಆ್ಯಪ್ ಬಿಡುಗಡೆ ಆಗುತ್ತಿದೆ. ಇದರ ಸಹಾಯದಿಂದ ಬಸ್ ಪಾಸ್ ಸುಲಭಕ್ಕೆ ನವೀಕರಣ ಮಾಡಬಹುದು ಅದರ ಜೊತೆಗೆ ಬಸ್ ಪಾಸ್ ಮತ್ತು ಟಿಕೆಟ್ ಕಳೆದು ಹೋದರು ಚಿಂತಿಸುವ ಅಗತ್ಯ ಬೀಳದು ಈ ಆ್ಯಪ್ ನಿಮಗೆ ಶೀಘ್ರವಾಗಿ ಪರಿಹಾರ ನೀಡುತ್ತದೆ ಎನ್ನಬಹುದು. ಈ ಬಗ್ಗೆ KSRTC ನಿಗಮದಿಂದ ಕೆಲವು ಉಪಯುಕ್ತ ಮಾಹಿತಿ ಹಂಚಿಕೊಳ್ಳಲಾಗಿದ್ದು ಪೂರ್ತಿ ಮಾಹಿತಿ ಇಲ್ಲಿದೆ.

Image Source: The Hindu

advertisement

UPI ವ್ಯವಸ್ಥೆಗೆ ಬೆಂಬಲ
ಬಹುತೇಕ ಕಡೆ UPI ವ್ಯವಹಾರ ಸಾಗುತ್ತಿದ್ದಂತೆ ಸರಕಾರಿ ಬಸ್ ನಲ್ಲಿ ಕೂಡ ಡಿಜಿಟಲ್ ಪೇ ಗೆ ಅಧಿಕ ಬೆಂಬಲ ನೀಡಲಾಗುತ್ತಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಇತ್ತೀಚೆಗೆ ಒಂದು ವಿಚಾರವನ್ನು ಪ್ರಸ್ತಾಪಿಸಿದ್ದು ಜೂನ್ 25ರ ಬಳಿಕ KSRTC ಪ್ರಯಾಣಿಕರು ಡೆಬಿಟ್, ಕ್ರೆಡಿಟ್ ಹಾಗೂ UPI ಪೇಮೆಂಟ್ ಮಾಡಬಹುದು ಎಂದು ಸೂಚನೆ ನೀಡಿದೆ. ಹಾಗಾಗಿ ಇನ್ನು ಮುಂದೆ ಪ್ರಯಾಣಿಕರು ಚಿಲ್ಲರೆ ಹಣ ಇಲ್ಲ , ಹಣ ತರುವುದು ಮರೆತು ಬಿಟ್ಟೆವು ಎಂದು ಚಿಂತಿಸುವ ಅಗತ್ಯ ಇರಲಾರದು. ಸರಕಾರದ 4 ಡಿಪೋದಲ್ಲಿ ಕೂಡ ಎಲೆಕ್ಟ್ರಾನಿಕ್ ಟಿಕೆಟ್ ಯಂತ್ರವನ್ನು ಪ್ರಾಯೋಗಿಕವಾಗಿ ಜಾರಿಗೆ ಬರಲಾಗುತ್ತಿದೆ. ಹಾಗಾಗಿ ಮೊದಲು ಬಸ್ ನ ನಿರ್ವಾಹಕರಿಗೆ ಈ ಬಗ್ಗೆ ತರಬೇತಿ ನೀಡಿದ್ದ ಬಳಿಕ ಎಲ್ಲ ಸರಕಾರಿ ಬಸ್ ನಲ್ಲಿ ಜಾರಿಗೆ ಬರುವುದಾಗಿ ಸರಕಾರದ ಸಾರಿಗೆ ಇಲಾಖೆ ಈ ಬಗ್ಗೆ ಸುತ್ತೊಲೆ ಹೊರಡಿಸಿದೆ.

KSRTC ಯ MD ಆಗಿರುವ ಅನ್ಬು ಕುಮಾರ್ ಅವರು ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಈಗಾಗಲೇ ಈ ಒಂದು ಪ್ರಕ್ರಿಯೆ ಪ್ರಾಯೋಗಿಕವಾಗಿ ಜಾರಿ ಆಗುತ್ತಿದೆ. ಹಾಗಾಗಿ ಮೊದಲ ಹಂತದಲ್ಲಿ 10,245 ಎಲೆಕ್ಟ್ರಾನಿಕ್ ಟಿಕೆಟ್ ಯಂತ್ರವನ್ನು ಪ್ರತಿ ಸಾಧನಕ್ಕೆ ತಿಂಗಳಿಗೆ 645ರೂಪಾಯಿ ಹಾಗೆ ಬಾಡಿಗೆ ನೀಡಿ ಖರೀದಿಸುತ್ತಿದ್ದು ಇದು ಡಿಜಿಟಲ್ ವ್ಯವಸ್ಥೆ ಬೆಂಬಲಿಸಲಿದೆ. ಪ್ರಯಾಣಿಕರಿಗೆ ಚಿಲ್ಲರೆ ನೀಡುವ ಸಮಸ್ಯೆ ಕೂಡ ಇರಲಾರದು.ಈಗಾಗಲೇ 5ವರ್ಷಕ್ಕೆ ಎಲೆಕ್ಟ್ರಾನಿಕ್ ಟಿಕೆಟ್ ಯಂತ್ರ (ETM) ಖರೀದಿಗಾಗಿ ಒಪ್ಪಂದ ಆಗಿದೆ.

ಈ ಒಂದು ETM ಒದಗಿಸುವ ಕಂಪೆನಿಯು ಬ್ಯಾಂಕೇಡ್ ಹಾಗೂ ಇಂಟರ್ ಫೇಸ್ ಸಾಫ್ಟ್ ವೇರ್ ಅನ್ನು ಒದಗಿಸಲಿದೆ. ಹಾಗಾಗಿ ಟಿಕೆಟ್ ಅನ್ನು ಸುಲಭವಾಗಿ ಗೂಗಲ್ ಪೇ, ಫೋನ್ ಪೇ ಇತರ ಆ್ಯಪ್ ಮೂಲಕ ಪಾವತಿ ಮಾಡಬಹುದು. ಆಗ ಟಿಕೆಟ್ ಅಗತ್ಯ ಇರಲಾರದು. ಟಿಕೆಟ್ ಕಳೆದು ಹೋಗಿದೆ ಎಂಬ ಭಯ ಸಹ ಇರಲಾರದು. ಅದರಂತೆ ಬಸ್ ಪಾಸ್ ಮಾಡಿದ್ದವರಿಗೆ ಕೂಡ ಸದ್ಯದಲ್ಲೆ ಹೊಸ ಆ್ಯಪ್ ಬಿಡುಗಡೆ ಆಗಲಿದ್ದು ಪಾಸ್ ಕಾರ್ಡ್ ಇಲ್ಲದೆ ಮೊಬೈಲ್ ನಲ್ಲೆ ಸ್ಕ್ಯಾನ್ ಮಾಡಿ ಸುಲಭವಾಗಿ ಪ್ರಯಾಣ ಮಾಡಬಹುದು. ಈ ಹೊಸ ಬಸ್ ಪಾಸ್ ಆ್ಯಪ್ ಬಗ್ಗೆ ಸರಕಾರ ಮುಂದಿನ ದಿನದಲ್ಲಿ ಮಾಹಿತಿ ನೀಡುವುದಾಗಿ ಸಾರಿಗೆ ಇಲಾಖೆಯ ಪ್ರಕಟನೆ ತಿಳಿಸಿದೆ.

advertisement

Leave A Reply

Your email address will not be published.