Karnataka Times
Trending Stories, Viral News, Gossips & Everything in Kannada

SBI: ಗ್ರಾಹಕರಿಗೆ ಹೊಸ ಎಫ್ ಡಿ ಯೋಜನೆ ಪರಿಚಯಿಸಿದ SBI! ಸಿಗಲಿದೆ ಹೆಚ್ಚಿನ ಲಾಭ.

advertisement

ಇಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವಿವಿಧ ರೀತಿಯ ಹೊಸ ವಹಿವಾಟು ಗಳನ್ನು ಗ್ರಾಹಕರಿಗೆ ಜಾರಿಗೆ ತರುತ್ತಲೆ ಇರುತ್ತದೆ. ಆದೇ ರೀತಿ‌ ತನ್ನ ಗ್ರಾಹಕರ ಸಂಖ್ಯೆ ಯನ್ನು ಸಹ ಎಸ್ ಬಿ ಐ ಹೆಚ್ಚಿಸಿಕೊಂಡಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಪರಿಸರವನ್ನು ಕಪಾಡುವ ಜೊತೆಗೆ ಉತ್ತೇಜನ ಮಾಡುವಲ್ಲಿ ಹಸಿರು ಹಣಕಾಸು ಪರಿಸರ ವ್ಯವಸ್ಥೆ ಅಭಿವೃದ್ಧಿಗೆ ಸಹಾಯ ಮಾಡುವ ಯೋಜನೆಯ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದು ಇದೀಗ ಗ್ರೀನ್ ರೂಪಾಯಿ ಟರ್ಮ್ ಡೆಪಾಸಿಟ್ ಸ್ಕಿಮ್  (SBI Green Rupee Deposit Scheme) ಅನ್ನು ಆರಂಭ ಮಾಡಿದೆ.

ಹೂಡಿಕೆ ಮಾಡಲು ಯಾರು ಅರ್ಹರು?

ಭಾರತೀಯ ನಿವಾಸಿಗಳು ಮತ್ತು NRI ಗ್ರಾಹಕರು ಈ ವಿಶೇಷ ಠೇವಣಿ ಯೋಜನೆಯಲ್ಲಿ ಹೂಡಿಕೆ ಮಾಡಲು ಅರ್ಹರಾಗಿದ್ದು, ಇದು‌ ಮೂರು ವಿಭಿನ್ನ ಅವಧಿಗಳಿಂದ ಆಯ್ಕೆ ಮಾಡುವ ಗುರಿಯನ್ನು ಹೊಂದಿದ್ದು 1111 ದಿನಗಳು, 1777 ದಿನಗಳು ಮತ್ತು 2222 ದಿನಗಳ ಆಯ್ಕೆಯಲ್ಲಿ ಇದೆ. ಇದರಲ್ಲಿ ಬಡ್ಡಿದರವು ಹಿರಿಯ ನಾಗರಿಕರು, ಸಿಬ್ಬಂದಿ ಯೋಜನೆಯಡಿ ಅನ್ವಯವಾಗುವ ದರಕ್ಕಿಂತ ಹೆಚ್ಚುವರಿ ಬಡ್ಡಿ ದರ ಇರುತ್ತದೆ. RBI ಅಧಿಸೂಚನೆಯ ಪ್ರಕಾರ, ಹಸಿರು ಠೇವಣಿ ಎಂದರೆ ವಿಶೇಷ ಬಡ್ಡಿಯನ್ನು ಹೊಂದಿರುವ ಠೇವಣಿ ಯಾಗಿದ್ದು ನಿಗದಿತ ಅವಧಿಗೆ ಬಡ್ಡಿ ಮೊತ್ತ ಪಡೆಯುವ ಮತ್ತು ಆದಾಯವನ್ನು ಗ್ರೀನ್ ಫೈನಾನ್ಸ್‌ಗೆ ಹಂಚಿಕೆ ಮಾಡುವ ಕಾರ್ಯ ವೈಖರಿ ಯಾಗಿದೆ.

advertisement

ಇನ್ನೊಂದು ಹೊಸ ಯೋಜನೆ

ಅದೇ ರೀತಿ ಎಸ್ ಬಿ ಐ ನಲ್ಲಿ ಅಮೃತ್ ಕಳಶ್ (Amrit Kalash) ವಿಶೇಷ ಠೇವಣಿಯ ಆಯ್ಕೆಯೂ ಇದ್ದು, ಇದರಲ್ಲಿ ಬಡ್ಡಿ ಹಣವು ಠೇವಣಿ ಅವಧಿ ನಂತರ ಮೆಚ್ಯೂರ್ ಆದ ಸಮಯದಲ್ಲಿ ಒಟ್ಟಿಗೆ ದೊರೆಯುತ್ತದೆ. ಇದು ಸಾಮಾನ್ಯ ಗ್ರಾಹಕರಿಗೆ ಠೇವಣಿಗೆ ಶೇ. 7.1ರಷ್ಟು ಬಡ್ಡಿ ನೀಡಿದರೆ, ಹಿರಿಯ ನಾಗರಿಕರಿಗೆ ಶೇ. 7.6ರಷ್ಟು ಬಡ್ಡಿ ಸೌಲಭ್ಯ ನೀಡಲಾಗುತ್ತದೆ. 400 ದಿನಗಳ ಅವಧಿಯ ಈ ಎಫ್‌ಡಿ ಯೋಜನೆಯು ಹೂಡಿಕೆದಾರರಿಗೆ ಹೆಚ್ಚಿನ ಆದಾಯವನ್ನು ನೀಡಲಿದೆ. ಅದೇ ರೀತಿ ಈ ಅಮೃತ್ ಕಲಶ್‌ ಎಫ್‌ಡಿ ಹೂಡಿಕೆದಾರರಿಗೆ ಬ್ಯಾಂಕ್‌ ಮಾಸಿಕ, ತ್ರೈಮಾಸಿಕ ಮತ್ತು ಅರ್ಧ ವಾರ್ಷಿಕ ಲೆಕ್ಕದಲ್ಲಿ ಬಡ್ಡಿ ಪಾವತಿ ಮಾಡುತ್ತದೆ.

advertisement

Leave A Reply

Your email address will not be published.