Karnataka Times
Trending Stories, Viral News, Gossips & Everything in Kannada

PM Kisan: ರೈತರಿಗೆ ಗುಡ್ ನ್ಯೂಸ್, ಈ ದಿನ ಬಿಡುಗಡೆ ಆಗಲಿದೆ 16ನೇ ಕಂತಿನ ಹಣ!

advertisement

ರೈತರಿಗೆ ಆರ್ಥಿಕ ನೆರವು ನೀಡುವ ಸಲುವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಜಿ (PM Narendra Modi) ಅವರು ಕೇಂದ್ರ ಸರ್ಕಾರದಲ್ಲಿ 2015 ರಿಂದ ಪಿ ಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM Kisan Samman Nidhi Yojana) ಯನ್ನು ಜಾರಿಗೆ ತಂದಿದ್ದಾರೆ. ಈ ಯೋಜನೆಯಡಿಯಲ್ಲಿ ಇಂದು ಕೋಟ್ಯಾಂತರ ರೈತರು ಸರ್ಕಾರದಿಂದ ಆರ್ಥಿಕ ನೆರವು ಪಡೆದುಕೊಳ್ಳುತ್ತಿದ್ದಾರೆ.

PM Kisan Samman Nidhi Yojana:

 

 

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM Kisan Samman Nidhi Yojana) ಯ ಅಡಿಯಲ್ಲಿ, ರೈತರಿಗೆ ಪ್ರತಿ ವರ್ಷ 6,000ಗಳನ್ನು 3 ಕಂತುಗಳಲ್ಲಿ, ತಲಾ ಎರಡು ಸಾವಿರ ರೂಪಾಯಿಗಳಂತೆ ಕೇಂದ್ರ ಸರ್ಕಾರ ನೇರವಾಗಿ ರೈತರ ಖಾತೆಗೆ ಜಮಾ ಮಾಡುತ್ತಿದೆ. ಈಗಾಗಲೇ 15 ಕಂತಿನ ಹಣ ಬಿಡುಗಡೆ ಆಗಿದೆ.

ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ರೈತರಿಗೆ ಆರ್ಥಿಕ ನೆರವು ನೀಡುವ ಸಲುವಾಗಿ ಈ ಯೋಜನೆಯನ್ನು ಸರ್ಕಾರ ಆರಂಭಿಸಿದೆ. 15 ಕಂತಿನ ಹಣ ಪಡೆದುಕೊಂಡ ರೈತರಿಗೆ ಈಗ ಗುಡ್ ನ್ಯೂಸ್ ಒಂದು ಹೊರ ಬಿದ್ದಿದೆ. 16ನೇ ಕಂತಿನ ಹಣ ಯಾವಾಗ ಬಿಡುಗಡೆ ಆಗಬಹುದು ಎಂದು ಕಾಯುತ್ತಿರುವವರಿಗೆ ಸದ್ಯದಲ್ಲಿಯೇ 16ನೇ ಕಂತಿನ ಹಣ ಬಿಡುಗಡೆ ಆಗುವ ಬಗ್ಗೆ ಸರ್ಕಾರ ಮುನ್ಸೂಚನೆ ನೀಡಿದೆ.

ರೈತರಿಗೆ ಆರ್ಥಿಕ ನೆರವು ನೀಡುವ ಯೋಜನೆ:

advertisement

ಪ್ರತಿ ವರ್ಷ 6,000ಗಳನ್ನು ಈ ಯೋಜನೆಯ ಅಡಿಯಲ್ಲಿ ಆರ್ಥಿಕ ನೆರವು ರೂಪದಲ್ಲಿ ನೀಡಲಾಗುತ್ತಿದ್ದು ಪ್ರತಿ ಕಂತಿಗೆ ಎರಡು ಸಾವಿರ ರೂಪಾಯಿಗಳನ್ನು ಪಡೆಯಬಹುದು. ಇಲ್ಲಿ ಕುಟುಂಬದ ಯಜಮಾನನಿಗೆ ಮಾತ್ರ ಈ ಯೋಜನೆಯ ಹಣ ಲಭ್ಯವಾಗುತ್ತದೆ ಹಾಗೂ ಇದು ರೈತರಿಗಾಗಿ ಮಾತ್ರ ಮೀಸಲಿರುವ ಯೋಜನೆ ಆಗಿದೆ ಮನೆಯಲ್ಲಿ ಇಬ್ಬರು ರೈತರಿದ್ದರೆ ಒಬ್ಬರಿಗೆ ಮಾತ್ರ ಹಣ ಸಿಗುತ್ತದೆ.

ಇನ್ನು, ಮುಂದಿನ ಕಂತಿನ ಹಣ ನಿಮ್ಮ ಖಾತೆಗೆ ಬರಬೇಕು ಅಂದ್ರೆ ಕೆವೈಸಿ ಅಪ್ಡೇಟ್ ಮಾಡಿಕೊಳ್ಳುವುದು ಕಡ್ಡಾಯ ಎಂದು ಸರ್ಕಾರ ತಿಳಿಸಿದೆ ಯಾವ ರೈತರು ತಮ್ಮ ಖಾತೆಗೆ ಮಾಡಿಕೊಂಡಿಲ್ಲವೋ ಅಂತವರಿಗೆ ಹದಿನಾರನೇ ಕಂತಿನ ಹಣ ಜಮಾ ಆಗುವುದಿಲ್ಲ ಹಾಗಾಗಿ ತಕ್ಷಣವೇ ಬ್ಯಾಂಕ್ ಗೆ ಹೋಗಿ ಈ ಕೆಲಸ ಮಾಡಿಕೊಳ್ಳಿ.

ಸ್ಟೇಟಸ್ ಚೆಕ್ ಮಾಡಿ:

ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ ನಿಧಿ ಯೋಜನೆ (PM Kisan Samman Nidhi Yojana) ಯ ಹಣ ಪಡೆದುಕೊಳ್ಳಲು, ಮೊದಲು ಪಿಎಮ್ ಕಿಸಾನ್ (PM Kisan) ನೋಂದಣಿ ಸಂಖ್ಯೆಯನ್ನು ಹೊಂದಿರಬೇಕು ಅಂದರೆ ಕಿಸಾನ್ ಕಾರ್ಡ್ ರಿಜಿಸ್ಟ್ರೇಷನ್ ಮಾಡಿಕೊಂಡಿರಬೇಕು. ಖಾತೆಗೆ ಹಣ ಜಮಾ ಆಗಿದ್ಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಿಕೊಳ್ಳಲು ವೆಬ್ಸೈಟ್ಗೆ ಭೇಟಿ ನೀಡಿ. ಅಲ್ಲಿ Know Your Status ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಇಲ್ಲಿ ನೀವು ನಿಮ್ಮ ಪಿಎಂ ಕಿಸಾನ್ ನೋಂದಣಿ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ. ನಂತರ ನಿಮ್ಮ ಖಾತೆಯ ಸ್ಥಿತಿ ಚೆಕ್ ಮಾಡಬಹುದು. ಇದುವರೆಗೆ ಜಮಾ ಆಗಿರುವ ಹಣದ ಬಗ್ಗೆ ಇಲ್ಲಿ ಮಾಹಿತಿ ಲಭ್ಯವಾಗುತ್ತದೆ.

ಇನ್ನು ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು ಕೂಡ, ಪಿಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್ಸೈಟ್ ಗೆ ಹೋಗಿ, ನಿಮ್ಮ ಜಿಲ್ಲೆ, ಬ್ಲಾಕ್, ಗ್ರಾಮದ ಹೆಸರು ಮೊದಲಾದ ಮಾಹಿತಿಯನ್ನು ಭರ್ತಿ ಮಾಡಿ ಆಗ ಒಂದು ಲಿಸ್ಟ್ ತೆರೆದುಕೊಳ್ಳುತ್ತದೆ. ಅದರಲ್ಲಿ ನಿಮ್ಮ ಹೆಸರು ಇದ್ರೆ ನೀವು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಫಲಾನುಭವಿಗಳಾಗಿರುತ್ತೀರಿ.

ಸದ್ಯದಲ್ಲಿಯೇ 16ನೇ ಕಂತಿನ ಹಣವು ಕೂಡ ಬಿಡುಗಡೆ ಆಗಲಿದ್ದು ರೈತರು ತಮ್ಮ ಖಾತೆಗೆ ಈ ಕೆ ವೈ ಸಿ ಮಾಡಿಸಿಕೊಳ್ಳದೆ ಇದ್ದರೆ ತಕ್ಷಣ ಆ ಕೆಲಸ ಮಾಡಿ. ಒಂದು ವೇಳೆ ಈ ಕೆ ವೈ ಸಿ ಮಾಡಿಸಿಕೊಳ್ಳದೆ ಇದ್ದರೆ ಅಥವಾ ಆಧಾರ್ ಲಿಂಕ್ ಆಗಿದೆ ಇದ್ದರೆ ಅಂತಹ ರೈತರ ಖಾತೆಗೆ ಹಣ ಜಮಾ ಆಗುವುದಿಲ್ಲ. ಇದೇ ರೀತಿ ಈ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ನೀವು ಕೊಟ್ಟ ಮಾಹಿತಿ ಬಹಳ ಹಿಂದಿನದಾಗಿದ್ದರೆ ಈಗ ವೆಬ್ಸೈಟ್ನಲ್ಲಿ ಮಾಡಿಕೊಳ್ಳಬೇಕು. ಅಥವಾ ನೀವು ಬ್ಯಾಂಕಿಗೆ ಹೋಗಿ ಅಪ್ಡೇಟ್ ಮಾಡಿಸಬೇಕು ಆಗ ಯಾವುದೇ ಸಮಸ್ಯೆ ಇಲ್ಲದೆ ನಿಮ್ಮ ಖಾತೆಗೆ ಹಣ ಬರುತ್ತದೆ.

advertisement

Leave A Reply

Your email address will not be published.