Karnataka Times
Trending Stories, Viral News, Gossips & Everything in Kannada

Vasati Yojana: ಕರ್ನಾಟಕದ ಕಾಂಗ್ರೆಸ್ ಸರಕಾರದಿಂದ ಆರನೇ ಯೋಜನೆ ಘೋಷಣೆ

advertisement

ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರದ ಆಡಳಿತ ಈ ಬಾರಿ ಹೆಚ್ಚು ಪ್ರಚಲಿತಕ್ಕೆ ಬಂದ ಮೂಲ ಕಾರಣ ಗ್ಯಾರೆಂಟಿ ಯೋಜನೆ ಎನ್ನಬಹುದು. ಪಂಚ ಗ್ಯಾರೆಂಟಿ ಯೋಜನೆಯನ್ನು ಚುನಾವಣಾ ಪೂರ್ವದಲ್ಲಿ ಭರವಸೆ ನೀಡಿ ಬಳಿಕ ಬಹುಮತದಿಂದ ಗೆದ್ದ ಬಳಿಕ ಕೊಟ್ಟ ಭರವಸೆಯನ್ನು ಒಂದೊಂದಾಗೇ ಈಡೇರಿಸುತ್ತಾ ಬಂದಿದೆ. ಈಗ ಪಂಚ ಗ್ಯಾರೆಂಟಿ ಜೊತೆಗೆ ಆರನೇ ಗ್ಯಾರೆಂಟಿ ಯೋಜನೆ ಘೋಷಣೆ ಆಗುತ್ತಿದ್ದು ಸಾಮಾನ್ಯ ನಾಗರೀಕರಿಗೆ ಈ ವಿಚಾರ ದೊಡ್ಡ ಖುಷಿ ನೀಡಿದೆ.

ಅನ್ನಭಾಗ್ಯ (Anna Bhagya), ಯುವನಿಧಿ (Yuva Nidhi), ಗೃಹಲಕ್ಷ್ಮೀ (Gruha Lakshmi), ಗೃಹಜ್ಯೋತಿ (Gruha Jyothi), ಶಕ್ತಿ ಯೋಜನೆ (Shakti Yojana) ಈಗಾಗಲೇ ರಾಜ್ಯದಲ್ಲಿ ಬಹಳ ಮಾನ್ಯತೆ ಪಡೆದಿದ್ದು ಅದರಲ್ಲಿ ಯುವನಿಧಿ ಮತ್ತು ಗೃಹಲಕ್ಷ್ಮೀ ಯೋಜನೆ (Gruha Lakshmi Yojana) ಅನೇಕ ಗೊಂದಲ ಸಹ ನಿರ್ಮಾಣ ಮಾಡಿತ್ತು ಆದರೆ ಬಳಿಕ ಎಲ್ಲ ಸಮಸ್ಯೆ ಹಾಗೂ ಗೊಂದಲ ಬಗೆ ಹರಿದಿದ್ದು ಈಗ ಎಲ್ಲ ಯೋಜನೆ ಎಲ್ಲ ಸ್ತ್ರೀ ಸಾಮಾನ್ಯರಿಗೂ ಸೇರುತ್ತಲಿದೆ ಎಂದು ಹೇಳಬಹುದು. ಇದೀಗ ಅದರ ಬಳಿಕ ಆರನೇ ಗ್ಯಾರೆಂಟಿ ಯೋಜನೆಯೊಂದು ಜಾರಿಗೆ ಬರುತ್ತಿದೆ. ಹಾಗಾಗಿ ಬಡವರಿಗೆ ಈ ಭಾಗ್ಯ ಬಹಳವೇ ಅನುಕೂಲವಾಗಲಿದೆ.

6 ನೇ ಗ್ಯಾರಂಟಿ:

ಗಣರಾಜ್ಯೋತ್ಸವದ ಕಾರಣ ರಾಜ್ಯದೆಲ್ಲೆಡೆ ವಿಭಿನ್ನವಾದ ಕಾರ್ಯಕ್ರಮ ನಡೆಯುತ್ತಿದೆ. ಹಾಗಾಗಿ ಇಂತಹದ್ದೇ ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡ ವಸತಿ ಸಚಿವ ಹಾಗೂ ವಿಜಯನಗರ ಜಿಲ್ಲೆಯ ಉಸ್ತುವಾರಿ ಸಚಿವರಾದ ಬಿ. ಜೆಡ್. ಜಮೀರ್ ಅಹ್ಮದ್ (B. Z. Zameer Ahmed) ಅವರು ಹೊಸಪೇಟೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಕಾರ್ಯಕ್ರಮದ ಧ್ವಜಾರೋಹಣ ನೆರವೇರಿಸಿ ಬಳಿಕ ಮಾತನಾಡಿದ್ದಾರೆ ಈ ಮೂಲಕ ಬಡವರಿಗೆ ಹಾಗೂ ನಿರಾಶ್ರಿತರಿಗೆ ಅನುಕೂಲವಾಗಲೆಂದ ರಾಜ್ಯ ಸರಕಾರ ಆರನೇ ಹೊಸ ಯೋಜನೆ ಘೋಷಣೆ ಮಾಡಿದ್ದಾರೆ.

advertisement

ವಸತಿ ನಿರ್ಮಾಣ:

 

 

ಬಡವರ ಅನುಕೂಲಕ್ಕಾಗಿ ಅವರಿಗೆ ಮನೆ ನಿರ್ಮಾಣದ ಕನಸು ಈಡೇರಿಕೆಗೆ ರಾಜೀವ್ ಗಾಂಧಿ ವಸತಿ ಯೋಜನೆ (Rajiv Gandhi Vasati Yojana) ಹಾಗೂ ಸ್ಲಂ ಬೋರ್ಡ್ ಯೋಜನೆ (Slum Board Scheme) ಮುಖೇನ ನಿರ್ಮಾಣಗೊಂಡಿರುವ ಬಹುತೇಕ ಮನೆ ಅಪೂರ್ಣವಾಗಿದೆ. ವಸತಿ ಸೌಲಭ್ಯ ಅತೀ ಹೆಚ್ಚು ಜನರಿಗೆ ಒದಗಿಸುವಂತೆ ಮಾಡುವ ಮೂಲಕ ಆರನೇ ಗ್ಯಾರೆಂಟಿ ಯೋಜನೆಗೆ ಮುಂದಾಗುತ್ತಿದ್ದೇವೆ. ಸರಕಾರವು ಮನೆಯೊಂದಕ್ಕೆ 4.50 ಲಕ್ಷ ರೂಪಾಯಿ ಸಹಾಯಧನ ದೊರೆಯುತ್ತಿದೆ. ಆದರೆ ಈ ಹಣದಲ್ಲಿ ಮನೆ ಪೂರ್ಣಗೊಂಡಿಲ್ಲ ಈ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ ಹಣಕ್ಕೆ ಬೇಡಿಕೆ ಇಡಲಾಗಿದೆ ಎಂದು ಹೇಳಿದರು.

ಈಗಾಗಲೇ ಸಿಎಂ ಅವರಿಗೆ ಮನೆ ಪೂರ್ಣಗೊಳಿಸಲು 500 ಕೋಟಿ ರೂಪಾಯಿಗೆ ಬೇಡಿಕೆ ಇಎಲಾಗಿತ್ತು ಆದರೆ ಅದರಲ್ಲಿ 300 ಕೋಟಿ ರೂಪಾಯಿಗೆ ಸಮ್ಮತಿ ಸೂಚಿಸಲಾಗಿದೆ. ಸದ್ಯ 1.30 ಲಕ್ಷ ಮನೆಗಳು ನಿರ್ಮಾಣ ವಾಗುತ್ತಿದೆ. ವಿಜಯ ನಗರದ 1160 ಮನೆಗಳು ಸೇರಿಕೊಂಡು 36,000 ಮನೆಗಳನ್ನು ನೀಡುತ್ತಿದ್ದೇವೆ. ಫೆಬ್ರವರಿ ಅಂತ್ಯದೊಳಗೆ ಮನೆ ಹಸ್ತಾಂತರಕ್ಕೆ ಪ್ರಯತ್ನ ಪಡುತ್ತಿದ್ದೇವೆ ಎಂದು ವಸತಿ ಸಚಿವರಾದ ಬಿ. ಜೆಡ್. ಜಮೀರ್ ಅಹ್ಮದ್ ಖಾನ್ ಅವರು ಹೇಳಿದ್ದಾರೆ.

advertisement

Leave A Reply

Your email address will not be published.