Karnataka Times
Trending Stories, Viral News, Gossips & Everything in Kannada

SBI: ಈಗ ಮನೆಯಲ್ಲಿ ಕುಳಿತು ಬ್ಯಾಂಕ್ ಖಾತೆಗೆ ಹೊಸ ಮೊಬೈಲ್ ಸಂಖ್ಯೆ ಅಪ್ಡೇಟ್ ಮಾಡಬಹುದು, ಇಲ್ಲಿದೆ ಸುಲಭ ಮಾರ್ಗ!

advertisement

ನಗದು ಕೊಟ್ಟು ವ್ಯವಹಾರ ಮಾಡುವ ಕಾಲ ಮರೆಯಾಗಿದ್ದು, ಇದೀಗ ನಾವು ನೀವುಗಳು ಡಿಜಿಟಲ್ ಆಗಿ ವ್ಯವಹಾರ (Digital Transaction) ಗಳನ್ನು ಮಾಡುವ ಹಂತಕ್ಕೆ ಬಂದು ತಲುಪಿದ್ದೇವೆ. ಹೆಚ್ಚಿನವರು ತಮ್ಮ ಹಣಕಾಸು ವ್ಯವಹಾರಗಳಿಗೆ ಡಿಜಿಟಲ್ ಬ್ಯಾಂಕಿಂಗ್ ಅನ್ನು ಅವಲಂಬಿಸಿಕೊಂಡಿದ್ದಾರೆ. ಡಿಜಿಟಲ್ ವ್ಯವಹಾರಗಳನ್ನು ಮಾಡಬೇಕಾದರೆ ನಿಮ್ಮ ಬಳಿಯಿರುವ ಮೊಬೈಲ್ ಸಂಖ್ಯೆ (Mobile Number) ಯು ಬ್ಯಾಂಕ್ ಖಾತೆ (Bank Account) ಗೆ ಲಿಂಕ್ ಆಗಿರಬೇಕು. ಕೆಲವೊಮ್ಮೆ ಮೊಬೈಲ್ ಸಂಖ್ಯೆಯನ್ನು ಬದಲಾಯಿಸಿ, ಆ ಬಗ್ಗೆ ಬ್ಯಾಂಕ್ ಗೆ ಮಾಹಿತಿ ನೀಡದೇ ಇದ್ದರೆ ಸಮಸ್ಯೆಯಾಗಬಹುದು. ಒಂದು ವೇಳೆ ನಿಮ್ಮದು ಎಸ್ ಬಿಐ ಖಾತೆ (SBI Account) ಯಾಗಿದ್ದು, ಬ್ಯಾಂಕ್ ಗೆ ತೆರಳಿ ಮೊಬೈಲ್ ಸಂಖ್ಯೆಯನ್ನು ಬದಲಾಯಿಸಿಕೊಳ್ಳಲು ಆಗದೇ ಇದ್ದರೆ, ಮನೆಯಲ್ಲಿ ಕುಳಿತು ಬ್ಯಾಂಕ್ ಖಾತೆಯಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ಬದಲಾಯಿಸಬಹುದು. ಹಾಗಾದರೆ ಅದೇಗೆ ಎನ್ನುವುದರ ಕಂಪ್ಲೀಟ್ ಮಾಹಿತಿಯು ಇಲ್ಲಿದೆ.

ಮನೆಯಲ್ಲಿ ಕುಳಿತು ಬ್ಯಾಂಕ್ ಖಾತೆಯಲ್ಲಿನ ಮೊಬೈಲ್ ಸಂಖ್ಯೆಯನ್ನು ಬದಲಾವಣೆ ಮಾಡುವುದು ಹೇಗೆ?

 

 

ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ದಲ್ಲಿ ಬ್ಯಾಂಕ್ ಖಾತೆಯನ್ನು ಹೊಂದಿದ್ದು, ಮೊಬೈಲ್ ಸಂಖ್ಯೆಯನ್ನು ನವೀಕರಿಸಬೇಕೆಂದು ಕೊಂಡಿದ್ದರೆ ಮನೆಯಲ್ಲಿಯೇ ಕುಳಿತು ಈ ಕೆಲಸವನ್ನು ಸುಲಭವಾಗಿಯೇ ಮಾಡಿಕೊಳ್ಳಬಹುದು. ಲ್ಯಾಪ್ ಟಾಪ್ (Laptop) ಅಥವಾ ಸ್ಮಾರ್ಟ್‌ಫೋನ್ (Smartphone) ನಿಂದ ಮೊಬೈಲ್ ಸಂಖ್ಯೆಯನ್ನು ಬದಲಾಯಿಸಿಕೊಳ್ಳಬಹುದಾಗಿದೆ.

advertisement

  • ಇಲ್ಲಿ ಮೊದಲಿಗೆ ನೀವು ಬ್ಯಾಂಕಿನ, ನೆಟ್ ಬ್ಯಾಂಕಿಂಗ್ ವೆಬ್‌ಸೈಟ್ www.onlinesbi.com ಗೆ ಲಾಗಿನ್ ಆಗಬೇಕು.
  • ಆ ಬಳಿಕ ವೆಬ್‌ಸೈಟ್‌ಗೆ ಭೇಟಿ ನೀಡಿದ ನಂತರ, ನೀವು ನಿಮ್ಮ ಖಾತೆಗೆ ಲಾಗಿನ್ ಆಗಬೇಕು ಮತ್ತು ಪ್ರೊಫೈಲ್ ಅನ್ನು ಕ್ಲಿಕ್ ಮಾಡಬೇಕು.
  • ಅಲ್ಲಿ ವೈಯಕ್ತಿಕ ವಿವರಗಳ ಮೇಲೆ ಕ್ಲಿಕ್ ಮಾಡಿ State Bank of India ಪ್ರೊಫೈಲ್‌ನ ಪಾಸ್‌ವರ್ಡ್ ಅನ್ನು ಹಾಕಬೇಕು.
  • ಆ ಕೂಡಲೇ ಇಮೇಲ್ ಐಡಿ ಮತ್ತು ಹಳೆಯ ಮೊಬೈಲ್ ಸಂಖ್ಯೆಯು ಕಾಣಿಸುತ್ತದೆ. ಅಲ್ಲಿಯೇ ಮೊಬೈಲ್ ಸಂಖ್ಯೆಯನ್ನು ಬದಲಾಯಿಸುವ ಆಯ್ಕೆಯಿದ್ದುಯಿದ್ದು, ಅದರ ಮೇಲೆ ಕ್ಲಿಕ್ ಮಾಡಿ ಮೊಬೈಲ್ ಸಂಖ್ಯೆಯನ್ನು ಬದಲಾಯಿಸಬಹುದು.

ಎಟಿಎಂ (ATM) ಮೂಲಕ ಮೊಬೈಲ್ ಸಂಖ್ಯೆಯ ಬದಲಾವಣೆ ಹೇಗೆ?

  • ಇಲ್ಲಿ ನೀವು ಹಳೆಯ ಮೊಬೈಲ್ ಸಂಖ್ಯೆಯನ್ನು ಹೊಂದಿದ್ದು, ಆ ಸಂಖ್ಯೆಯು ಬ್ಯಾಂಕ್‌ನಲ್ಲಿ ನೋಂದಾಯಿಸಿದ್ದಿರಬೇಕು.
  • ಹೀಗೆ ಇದ್ದರೆ ಎಟಿಎಂಗೆ ಹೋಗಿ ಅಲ್ಲಿ ATM Card ಹಾಕಿ ಪಿನ್ ಅನ್ನು ನಮೂದಿಸಬೇಕು.
  • ಆ ವೇಳೆಗೆ ಮೊಬೈಲ್ ಸಂಖ್ಯೆಯನ್ನು ಬದಲಾಯಿಸುವ ಆಯ್ಕೆಯು ಪರದೆಯ ಮೇಲೆ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಹಳೆಯ ಮೊಬೈಲ್ ಸಂಖ್ಯೆಗೆ OTP ಬರುತ್ತದೆ. ಆ OTP ಯನ್ನು ನಮೂದಿಸಬೇಕು.
  • ಕೊನೆಗೆ ಹೊಸ ಸಂಖ್ಯೆಯ ಆಯ್ಕೆಯು ಬರುತ್ತದೆ. ಅಲ್ಲಿ ಹೊಸ ಮೊಬೈಲ್ ಸಂಖ್ಯೆ ನಮೂದಿಸಬೇಕು. ನಿಮ್ಮ ಹೊಸ ಮೊಬೈಲ್ ಸಂಖ್ಯೆಯು ದೃಡೀಕರಿಸಲ್ಪಡುತ್ತದೆ.

ಬ್ಯಾಂಕ್ (Bank) ಗೆ ತೆರಳಿ ಮೊಬೈಲ್ ಸಂಖ್ಯೆಯನ್ನು ಬದಲಾಯಿಸುವುದು ಹೇಗೆ?

  • ಬ್ಯಾಂಕ್ ಶಾಖೆಗೆ ಹೋಗಿ ಅಲ್ಲಿ ಮೊಬೈಲ್ ಸಂಖ್ಯೆಯನ್ನು ಬದಲಾಯಿಸಲು ಇರುವ ಫಾರ್ಮ್ ಅನ್ನು ಕೇಳಿ ಪಡೆದು, ಭರ್ತಿ ಮಾಡಬೇಕು.
  • ಆ ಅರ್ಜಿಯಲ್ಲಿ ಮಾಹಿತಿಯನ್ನು ಭರ್ತಿ ಮಾಡಿ, ಅದರೊಂದಿಗೆ ಪಾಸ್‌ಬುಕ್‌ ಪ್ರತಿ (Passbook Xerox) ಹಾಗೂ ಆಧಾರ್ ಕಾರ್ಡ್‌ ಪ್ರತಿ (Aadhaar Card Xerox) ಯನ್ನು ಸಲ್ಲಿಸಬೇಕು. ಹೀಗೆ ಮಾಡಿದ ಬಳಿಕ ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯು ಬದಲಾವಣೆಯಾಗುತ್ತದೆ.

advertisement

Leave A Reply

Your email address will not be published.