Karnataka Times
Trending Stories, Viral News, Gossips & Everything in Kannada

PM Kisan: ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಸಹಾಯಧನ ಪಡೆಯಲು ಈ ಕೆಲಸ ಕಡ್ಡಾಯ, ಇಲ್ಲದಿದ್ರೆ ಹಣ ಸಿಗಲ್ಲ

advertisement

ಇಂದು ರೈತರಿಗಾಗಿ ಸರಕಾರ ಹಲವು ರೀತಿಯ ಯೋಜನೆಯನ್ನು ಜಾರಿಗೆ ತರುತ್ತಲೆ ಇದ್ದು ರೈತರನ್ನು ಪ್ರೊತ್ಸಾಹ ಮಾಡುತ್ತಲೆ ಇದೆ. ಅದರಲ್ಲಿ ಮುಖ್ಯವಾಗಿ‌ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM Kisan Samman Nidhi) ಯು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾಗಿದೆ. ಕೇಂದ್ರ ಸರ್ಕಾರವು ರೈತರಿಗೆ ಸಹಾಯ ಹಸ್ತ ನೀಡಲು ಬಿತ್ತನೆ ಬೀಜ, ಗೊಬ್ಬರ ಖರೀದಿ ಸೇರಿದಂತೆ ಆರ್ಥಿಕವಾಗಿ ರೈತರನ್ನು ಸಬಲರನ್ನಾಗಿ ಮಾಡುವ ದೃಷ್ಟಿಯಿಂದ 2019ರಲ್ಲಿ ಈ ಯೋಜನೆ ಜಾರಿಗೆ ತರಲಾಯಿತು.

ಈ ಕೆಲಸ ಕಡ್ಡಾಯ:

 

 

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM Kisan Samman Nidhi Scheme) ಯ ಸೌಲಭ್ಯ ನಿಮಗೆ ಸಿಗಬೇಕಾದರೆ E-KYC ಮಾಡುವುದು ಕಡ್ಡಾಯ ವಾಗಿದೆ. ಇಲ್ಲದಿದ್ದಲ್ಲಿ ‌ಈ ಹಣ ನಿಮಗೆ ದೊರೆಯುದಿಲ್ಲ. ಇ-ಕೆವೈಸಿ ಮಾಡದೇ ಇದ್ದ ಫಲಾನುಭವಿಗಳ ಸಹಾಯಧನ ಪಾವತಿಯನ್ನು ತಡೆಹಿಡಿಯೋದಾಗಿ ಈಗಾಗಲೇ ಈ ಬಗ್ಗೆ ಕೇಂದ್ರ ಸರಕಾರ ಮಾಹಿತಿ ನೀಡಿದೆ.

advertisement

ಶಿಬಿರ ಆಯೋಜನೆ:

ಇಕೆವೈಸಿ ಮಾಡಲು ಈಗಾಗಲೇ ಪಂಚಾಯತ್ ಮಟ್ಟದಲ್ಲಿ ಶಿಬಿರಗಳನ್ನು ಆಯೋಜನೆ ಮಾಡಿದ್ದು ರೈತರಿಗೆ ಈ ಬಗ್ಗೆ ಮಾಹಿತಿ ನೀಡಲಾಗುತ್ತಿದೆ.ಕೆವೈಸಿಯನ್ನು ಮಾಡುದಾದ್ರೆ https://pmkisan.gov.in ವೆಬ್ಸೈಟ್ ನಲ್ಲಿ ಅಪ್ಲೈ ಮಾಡಬಹುದಾಗಿದೆ.ಇನ್ನು ಆಸಕ್ತ ರೈತರು ಕೃಷಿ ಇಲಾಖೆ ಅಧಿಕಾರಿಗಳನ್ನು ಭೇಟಿಯಾಗುವ ಮೂಲಕ ಇ-ಕೆವೈಸಿ ಪ್ರಕ್ರಿಯೆ ಪೂರ್ಣ ಗೊಳಿಸಬಹುದು.

ಮೊತ್ತವು ಹೆಚ್ಚಳ:

ಪ್ರತಿ ವರ್ಷ 3 ಕಂತುಗಳಲ್ಲಿ ತಲಾ 2,000 ರೂ.ನಂತೆ ವರ್ಷದಲ್ಲಿ ಒಟ್ಟು 6,000 ರೂ. ಹಣವನ್ನು ಫಲಾನುಭವಿ ರೈತರ ಖಾತೆಗೆ ಜಮೆ ಮಾಡಲಾಗುತ್ತಿದ್ದು ಇನ್ನೇನು 2024ರ ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಪಿಎಂ ಕಿಸಾನ್ ಯೋಜನೆ (PM Kisan Scheme)  ಮೊತ್ತವನ್ನು ಹೆಚ್ಚು ಮಾಡಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಯೋಜನೆಯ ಸೌಲಭ್ಯ ವನ್ನು ‌ ರೈತರಿಗೆ ಒಂದು ವರ್ಷಕ್ಕೆ ಒದಗಿಸುವ 6,000 ರೂ ಹಣವನ್ನು 8,000 ರೂಗೆ ಏರಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಅದೇ ರೀತಿ ಪಿಎಂ ಕಿಸಾನ್ ಯೋಜನೆ ಮಾತ್ರವಲ್ಲ, ಪಿಎಂ ಗರೀಬ್ ಕಲ್ಯಾಣ್ ಅನ್ನ ಯೋಜನೆಯ ಮೊತ್ತವನ್ನೂ ಸರ್ಕಾರ ಹೆಚ್ಚಿಸುವ ಸಾಧ್ಯತೆ ಇದೆ.

advertisement

Leave A Reply

Your email address will not be published.