Karnataka Times
Trending Stories, Viral News, Gossips & Everything in Kannada

GruhaLakshmi: ಗೃಹಲಕ್ಷ್ಮಿಯರಿಗೆ ಗುಡ್ ನ್ಯೂಸ್, ಹಣ ಡಬಲ್! ಸರ್ಕಾರದ ಹೊಸ ಘೋಷಣೆ.

advertisement

ಗ್ಯಾರಂಟಿ  ಗಿಫ್ಟ್ ಕೊಟ್ಟ ಸರ್ಕಾರದಿಂದ ನಯಾ ಪ್ಲ್ಯಾನ್‌ ಸಿದ್ದವಾಗಿದೆ. ಮಹಿಳೆಯರಿಗೆ ಗೃಹಲಕ್ಷ್ಮಿ (GruhaLakshmi) ಗಿಫ್ಟ್ ಕೊಟ್ಟ ಸರ್ಕಾರ ಅದೇ ದುಡ್ಡನ್ನು ಮಹಿಳೆಯರು ಚಿಟ್‌ಫಂಡ್‌ನಲ್ಲಿ ಹೂಡಿಕೆ ಮಾಡುವ ಬೊಂಬಾಟ್ ಸ್ಕೀಮ್‌ನ್ನು ತರಲು ರೆಡಿ ಮಾಡಿದೆ. ಕೇರಳ ಮಾದರಿಯ ನಯಾ ಚಿಟ್‌ಫಂಡ್‌ನ್ನು ಜಾರಿ ಮಾಡಲು ಸರ್ಕಾರ ಮುಂದಾಗಿದೆ. ಎಂಎಸ್‌ಐಎಲ್‌ನಿಂದ ಏಪ್ರಿಲ್‌ನಲ್ಲಿ ಈ ನಯಾ ಸ್ವರೂಪದ ಚಿಟ್‌ಫಂಡ್ ರಾಜ್ಯದ್ಯಾಂತ ಜಾರಿಯಾಗಲಿದೆ. ಪ್ರಮುಖವಾಗಿ ಮಹಿಳೆಯರನ್ನು ಈ ಚಿಟ್‌ಫಂಡ್‌ನಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವುದು ಸರ್ಕಾರದ ಉದ್ದೇಶವಾಗಿದೆ.

ಹೇಗಿರಲಿದೆ ಚಿಟ್‌ ಫಂಡ್‌?

ಮಹಿಳೆಯರಿಗೆ ಗೃಹಲಕ್ಷ್ಮಿಯ ಯೋಜನೆಯಿಂದ ಹಣ ಬರುತ್ತಿರುವುದರಿಂದ ಸರ್ಕಾರಿ ಸ್ವಾಮ್ಯದ ಎಂಎಸ್‌ಐಎಲ್ ಚಿಟ್‌ಫಂಡ್ ಉನ್ನತೀಕರಣಕ್ಕೆ ಪ್ಲ್ಯಾನ್‌ ಮಾಡಲಾಗಿದೆ. ಈಗಾಗಲೇ ಕೇರಳದಲ್ಲಿ 40 ಸಾವಿರ ಕೋಟಿ ರೂ. ವಹಿವಾಟು ನಡೆಯುತ್ತಿದ್ದು ಕರ್ನಾಟಕದಲ್ಲಿ ಸದ್ಯ ಚಿಟ್‌ಫಂಡ್ ಉದ್ಯಮ 300 ಕೋಟಿ ರೂ, ಮಾತ್ರವಿದೆ. 10 ಸಾವಿರ ಕೋಟಿ ರೂ. ಲಾಭದಾಯಕವಾಗಿ ಮಾಡುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಗ್ರಾಮೀಣ ಭಾಗದಲ್ಲಿರುವ ಸ್ವಸಹಾಯ ಸಂಘಗಳ ಮೂಲಕ ಚಿಟ್‌ಫಂಡ್ ಉದ್ಯಮ ಬಲಪಡಿಸುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ.

advertisement

ಮಹಿಳೆಯರಿಗಾಗಿ ಚಿಟ್ ಫಂಡ್ ಸ್ಕೀಂ: (Chit Fund Scheme)

ಎಂಎಸ್ಐಎಲ್ನಿಂದ (MSIL) ಈ ವರ್ಷದ ಎಪ್ರಿಲ್ನಲ್ಲಿ ಮಹಿಳೆಯರಿಗಾಗಿ ಹೊಸ ಸ್ವರೂಪದ ಚಿಟ್ ಫಂಡ್ ಸ್ಕೀಂ ಆರಂಭವಾಗಲಿದೆ. ಮಹಿಳೆಯರು ಸಹ ಚಿಟ್ ಫಂಡ್ನಲ್ಲಿ ತೊಡಗಿಸಿ ಲಾಭ ಗಳಿಸುವಂತಾಗಲಿ ಎನ್ನುವುದು ರಾಜ್ಯ ಸರ್ಕಾರದ ಉದ್ದೇಶವಾಗಿದೆ. ಕೇರಳ ಮಾದರಿಯ ಚಿಟ್ ಫಂಡ್ ಸ್ಕೀಂ ಜಾರಿಗೆ ತರಲು ರಾಜ್ಯ ಸರ್ಕಾರ ಸದ್ದುಗದ್ದಲವಿಲ್ಲದೆ ತಯಾರಿ ನಡೆಸಿದೆ ಎನ್ನಲಾಗಿದೆ.

ಯಾವ ರೀತಿ ಇರುತ್ತದೆ ಯೋಜನೆ:

ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಮಹಿಳೆಯರು ಪ್ರತಿ ತಿಂಗಳು 2,000 ರೂ. ಪಡೆದುಕೊಳ್ಳುತ್ತಿದ್ದು, ಈ ಹಣವನ್ನು ಈ ಚಿಟ್ ಫಂಡ್ನಲ್ಲಿ ತೊಡಗಿಸಿ ಎಂಎಸ್ಐಎಲ್ (Mysore Sales International Limited) ಅಭಿವೃದ್ಧಿಗೆ ಸರ್ಕಾರ ಚಿಂತನೆ ನಡೆಸಿದೆ. ಗ್ರಾಮೀಣ ಭಾಗದ ಸ್ವ-ಸಹಾಯ ಸಂಘಗಳ ಮೂಲಕವೂ ಚಿಟ್ ಫಂಡ್ ಉದ್ಯಮ ಅಭಿವೃದ್ಧಿ ಪಡಿಸುವ ಗುರಿ ಹೊಂದಲಾಗಿದೆ. ಆದರೆ ಸರ್ಕಾರದ ಈ ಯೋಜನೆ ಎಷ್ಟರ ಮಟ್ಟಿಗೆ ಜನರಿಗೆ ತಲುಪಲಿದೆ ಎಂದು ಕಾದು ನೋಡಬೇಕಾಗಿದೆ.

ಹೀಗೆ ಗೃಹ ಲಕ್ಷ್ಮಿ ಯೋಜನೆ ಅಡಿಯಲ್ಲಿ ಕೊಟ್ಟ ಹಣವನ್ನು ಸಹ ಚಿಟ್ ಫಂಡ್ನಲ್ಲಿ ತೊಡಗಿಸುವಂತೆ ಮಾಡಿ ಈ ಮೂಲಕ ಮಹಿಳೆಯರ ಆರ್ಥಿಕ ಸ್ವಾವಲಂಬನೆ ಹಾಗೂ ಚಿಟ್ ಫಂಡ್ ಉದ್ಯಮವನ್ನು ಅಭಿವೃದ್ಧಿ ಪಡಿಸುವುದು ಸರ್ಕಾರದ ಉದ್ದೇಶವಾಗಿದೆ. ಕಾಂಗ್ರೆಸ್ ಸರ್ಕಾರವು ಈಗಾಗಲೇ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಇದರ ಪ್ರಯೋಜನವನ್ನು ರಾಜ್ಯದ ಕೋಟ್ಯಂತರ ಜನರು ಪಡೆದುಕೊಳ್ಳುತ್ತಿದ್ದಾರೆ. ಅರ್ಜಿ ಸಲ್ಲಿಸಿದ ಪ್ರತಿಯೊಬ್ಬರಿಗೂ ಮುಟ್ಟಿಸುವ ಸಲುವಾಗಿ ಅದಾಲತ್ಗಳನ್ನು ಸಹ ನಡೆಸಲಾಗುತ್ತಿದೆ. ಒಟ್ಟಿನಲ್ಲಿ ರಾಜ್ಯ ಸರ್ಕಾರವು ಕಟ್ಟ ಕಡೆಯ ಪ್ರಜೆಯನ್ನು ಮುಟ್ಟಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದೆ.

advertisement

Leave A Reply

Your email address will not be published.