Karnataka Times
Trending Stories, Viral News, Gossips & Everything in Kannada

Dairy Farming: ಹೈನುಗಾರಿಕೆಗೆ ಮಾಡುವವರಿಗೆ ಗುಡ್ ನ್ಯೂಸ್, ಈ ಬ್ಯಾಂಕ್ ನಿಂದ ಸಹಾಯಧನ ಲಭ್ಯ!

advertisement

ನಮ್ಮ ಕರ್ನಾಟಕದಲ್ಲಿ ಕೃಷಿ ಮಾಡಿಯೇ ಬದುಕು ಕಟ್ಟಿಕೊಂಡವರು ಬಹಳಷ್ಟು ಮಂದಿ‌ ಇದ್ದಾರೆ. ಇದರ ಜೊತೆ ಹೈನುಗಾರಿಕೆ (Dairy Farming), ಕೋಳಿಸಾಕಾಣಿಕೆ, ಕುರಿ ಸಾಕಾಣಿಕೆ ಇತ್ಯಾದಿ ಚಟುವಟಿಕೆಗಳನ್ನು ಅವಲಂಬಿಸಿ ಕೊಂಡಿದ್ದಾರೆ. ಇಂದು ರೈತರು ಹೈನುಗಾರಿಕೆ ‌ನಡೆಸಲು ಕೂಡ ಸರಕಾರ ಹಲವು ರೀತಿಯ ಸೌಲಭ್ಯ ಗಳನ್ನು ಜಾರಿಗೆ ತರುತ್ತಿದೆ. ಅದೇ‌ ರೀತಿ‌ ಇದೀಗ ಕರ್ನಾಟಕ‌ ಬ್ಯಾಂಕ್ ಹೈನುಗಾರಿಕೆಗೆ ಸಹಾಯಧನ ನೀಡಲು ಮುಂದಾಗಿದೆ.

ಫಿನ್‌ಟೆಕ್ ಸಂಸ್ಥೆ ಯಿಂದ ಸೌಲಭ್ಯ:

ಇದೀಗ ಹೈನುಗಾರಿಕಾ (Dairy Farming) ಉದ್ಯಮದಲ್ಲಿ ಆರ್ಥಿಕ ಅಭಿವೃದ್ಧಿ ಗಾಗಿ Karnataka Bank ಮುಂದಾಗಿದ್ದು ಇದಕ್ಕಾಗಿ Fintech ಸಂಸ್ಥೆಯಾದ ಡಿಜಿವೃದ್ಧಿ (DGVriddhi) ಮೂಲಕ ಹಣಕಾಸು ಸೌಲಭ್ಯ ಒದಗಿಸಲಿದೆ. ಇದೀಗ ಈ ಸಂಸ್ಥೆ ಅನೇಕ ಆರ್ಥಿಕ ಉತ್ಪನ್ನಗಳು ಹೈನುಗಾರಿಕಾ ಉದ್ಯಮಕ್ಕೆ ಬೆಂಬಲವಾಗಿ ನಿಲ್ಲಲಿದೆ.

 

advertisement

ಕೃಷಿ ಆಧಾರಿತ ಸಾಲ:

ಕೃಷಿ ಆಧಾರಿತ ಸಾಲಗಳನ್ನು ನೀಡುವ ಮೂಲಕ ಹಾಗೂ ವಿವಿಧ ಬ್ಯಾಂಕಿಂಗ್‌ ಸೌಲಭ್ಯ ವನ್ನು ಕೃಷಿ ರಂಗಕ್ಕೆ ನೀಡುವುದರಲ್ಲಿ ಕರ್ಣಾಟಕ ಬ್ಯಾಂಕ್‌ ಈ ಮೊದಲಿನಿಂದಲು ಇದರ ಹೆಸರು ಮುಂಚುಣಿಯಲ್ಲಿದೆ. ಇದೀಗ ಈ ಡಿಜಿ ಪೇ ಉತ್ಪನ್ನವು ರೈತರಿಗೆ ಕೆಲಸ ಸರಳಗೊಳಿಸುದಲ್ಲದೆ ಬ್ಯಾಂಕ್‌ ಖಾತೆಗಳನ್ನು ತೆರೆಯುವುದು ಸೇರಿದಂತೆ ಮೂಲಭೂತ ಬ್ಯಾಂಕಿಂಗ್‌ ಅಗತ್ಯಗಳಿಗೆ ಸಹಾಯ ಮಾಡುತ್ತದೆ. ಅದೇ ರೀತಿ ಸಾಲಸೌಲಭ್ಯ ಪ್ರಕ್ರಿಯೆಯನ್ನು ಸುಲಭಗೊಳಿಸುತ್ತದೆ.

ಕೇಂದ್ರ ಸರಕಾರ ದಿಂದ ಹೈನುಗಾರಿಕೆಗೆ ಸೌಲಭ್ಯ:

ಕೇಂದ್ರ ಸರ್ಕಾರವು ಡೈರಿ ಉದ್ಯಮಶೀಲತೆ ಅಭಿವೃದ್ಧಿ ಕಾರ್ಯಕ್ರಮದಡಿ ಡೈರಿ ಉದ್ಯಮ ಆರಂಭಿಸಲು ಪ್ರೋತ್ಸಾಹಿಸಲಾಗುತ್ತಿದೆ. ಇದರ ವತಿಯಿಂದ ನಬಾರ್ಡ್‌ ಯೋಜನೆಯಡಿ ಹಣಕಾಸು ನೆರವು ಒದಗಿಸಲಾಗುತ್ತಿದೆ. ಈ ಯೋಜನೆಯಡಿ, ಬ್ಯಾಂಕಿನಿಂದ ಡೈರಿ ವ್ಯವಹಾರಕ್ಕಾಗಿ ಸಬ್ಸಿಡಿ ಸಹಾಯಧನ ಪಡೆಯಬಹುದು. ಗರಿಷ್ಠ 25 ಲಕ್ಷ ರೂಪಾಯಿವರೆಗೆ ಸಾಲ ಪಡೆಯಲು ಅವಕಾಶವಿದ್ದು ಹೊಸದಾಗಿ ಡೈರಿ ಉದ್ಯಮ ಆರಂಭಿಸುವವರಿಗೆ ನೇರವಾಗಲಿದೆ.

advertisement

1 Comment
  1. Rahul belagavi says

    Ok intrasta

Leave A Reply

Your email address will not be published.