Karnataka Times
Trending Stories, Viral News, Gossips & Everything in Kannada

PPF Scheme: ಈ ಯೋಜನೆಯಲ್ಲಿ ಕೇವಲ 417 ರೂಪಾಯಿ ಹೂಡಿಕೆ ಮಾಡಿದ್ರೆ 40 ಲಕ್ಷ ಪಡೆಯಬಹುದು!

advertisement

ಶ್ರೀಮಂತವಾಗಿ ಬದುಕಬೇಕು ಬಯಸಿದ್ದೆಲ್ಲ ಪಡೆದು ಸುಖ ಜೀವನ ಕಾಣಬೇಕೆಂಬುದು ಅನೇಕರ ಜೀವನದ ಒಂದು ಕನಸ್ಸಾಗಿರುತ್ತದೆ ಆದರೆ ಎಲ್ಲರಿಂದ ಇದು ಸಾಧ್ಯವಾಗಲಾರದು. ವರ್ಷ ಪೂರ್ತಿ ಕಷ್ಟ ಪಟ್ಟರೂ ನಿತ್ಯ ಜೀವನವೇ ಕಷ್ಟವಾಗಿಬಿಡುತ್ತದೆ. ಹಾಗಾಗಿ ಹಣ ಇರುವಾಗಲೇ ಉತ್ತಮ ಯೋಜನೆ ಕಡೆ ಹೂಡಿಕೆ ಮಾಡಿದರೆ ದೀರ್ಘಾವಧಿಯಲ್ಲಿ ಶ್ರೀಮಂತರಾಗಲು ಈಗಲೇ ಸಿದ್ಧತೆ ಮಾಡಿಕೊಂಡಂತಾಗುವುದು. ಹಾಗಾಗಿ ನೀವು ಉಳಿತಾಯ ಯೋಜನೆ (Savings Scheme) ಬಗ್ಗೆ ತಿಳಿದು ಹೂಡಿಕೆ ಮಾಡಿದರೆ ಅತೀ ಹೆಚ್ಚು ಹಣ ಪಡೆಯಬಹುದು.

ಯಾವುದು ಈ ಯೋಜನೆ:

ಪಿಪಿಎಫ್ ಯೋಜನೆ (PPF Scheme) ಯಲ್ಲಿ ನೀವು ಹಣ ಉಳಿತಾಯ ಮಾಡಿದರೆ ನಿಮಗೆ ಉತ್ತಮ ಲಾಭ ಸಿಗಲಿದೆ. ಸಾರ್ವಜನಿಕ ಭವಿಷ್ಯ ನಿಧಿ ಯೋಜನೆ (PPF Scheme) ಎನ್ನುವುದು ಭವಿಷ್ಯದ ಹಣ ಉಳಿತಾಯ ಮಾಡುವ ಒಂದು ಅತ್ಯುತ್ತಮವಾದ ವೇದಿಕೆ ಎನ್ನಬಹುದು. ಒಂದು ವಿಧದಲ್ಲಿ ಇದು ಸ್ಥಿರ ಆದಾಯದ ಹೂಡಿಕೆಯಾಗಿದೆ. 1968 ರಲ್ಲಿ ಈ ಯೋಜನೆ ಪರಿಚಯಿಸಲಾಗಿದ್ದು ಹಣಕಾಸು ಸಚಿವಾಲಯದ ಮೂಲಕ ಜಾರಿಗೆ ತಂದಿದೆ. ಮಕ್ಕಳು ಚಿಕ್ಕವರಿರುವಾಗಲೇ ಈ ಯೋಜನೆಗೆ ನೀವು ಬೆಂಬಲಿಸಿದರೆ ಬಳಿಕ ನಿಮಗೆ ಭವಿಷ್ಯದಲ್ಲಿ ಈ ಹಣ ಭದ್ರ ಸ್ಥಿತಿ ನಿರ್ಮಾಣ ಮಾಡಲಿದೆ.

 

 

ತೆರಿಗೆಯಲ್ಲಿ ಮಹಾ ಉಳಿತಾಯ:

advertisement

ಕೇಂದ್ರ ಸರಕಾರದ ಆರ್ಥಿಕ ನೀತಿಯ ಅನುಸಾರವಾಗೇ ಈ ಯೋಜನೆ ಕಾರ್ಯ ನಿರ್ವಹಿಸುವ ಕಾರಣ ಇದು ಬಹುಲಾಭದ ಉಳಿತಾಯ ಎನ್ನಬಹುದು. ಇಲ್ಲಿ ನೀವು ಮಾಡುವ ಹೂಡಿಕೆಗೆ ಅನೇಕ ಪ್ರಯೋಜನ ಸಹ ಪಡೆಯಲಿದ್ದೀರಿ.ಆದಾಯ ತೆರಿಗೆ ಕಾಯ್ದೆಯ 80C ಅಡಿಯಲ್ಲಿ ತೆರಿಗೆ ವಿನಾಯಿತಿ ಸೌಲಭ್ಯ ಸಹ ನೀವು ಪಡೆಯಬಹುದು. ಈ ಒಂದು ಯೋಜನೆ ಮೂಲಕ ನೀವು 1.5ಲಕ್ಷ ರೂಪಾಯಿ ವರೆಗೆ ಹೂಡಿಕೆ ಮೇಲೆ ತೆರಿಗೆ ವಿನಾಯಿತಿ ಸೌಲಭ್ಯ ಪಡೆಯಲಿದ್ದೀರಿ. ಸರಕಾರ ಕೂಡ ಸಣ್ಣ ಉಳಿತಾಯ ಯೋಜನೆಗೆ ಬೆಂಬಲಿಸುತ್ತಲಿದ್ದು ಇಲ್ಲಿ ಮಾಡುವ ಉಳಿತಾಯಕ್ಕೆ ಸಂಪೂರ್ಣ ಸುರಕ್ಷತೆ ಸಹ ನಿಮಗೆ ದೊರೆಯಲಿದೆ.

ಲೆಕ್ಕಾಚಾರ ಯಾವ ರೀತಿ ಇರಲಿದೆ?

ಪಿಪಿಎಫ್ ಯೋಜನೆ (PPF Scheme) ಯಲ್ಲಿ ಹೂಡಿಕೆಯ ಮೇಲೆ ಪ್ರತೀ ತಿಂಗಳು 12,500 ರೂಪಾಯಿ ಹೂಡಿಕೆ ಮಾಡಿದರೆ ಆಗ 15ವರ್ಷದಲ್ಲಿ 40.68ಲಕ್ಷ ರೂಪಾಯಿ ನೀವು ಪಡೆಯಲಿದ್ದೀರಿ. ಅಂದರೆ ನೀವು ನಿಮ್ಮ ಕೈಯಾರೆ ಕಟ್ಟಿದ್ದ ಮೊತ್ತ 22.50 ಲಕ್ಷ ರೂಪಾಯಿ ಆದರೆ ಪಿಪಿಎಫ್ ಯೋಜನೆ ಮೂಲಕ ಹೆಚ್ಚುವರಿ 18.18ಲಕ್ಷ ರೂಪಾಯಿ ನೀವು ಪಡೆಯಲಿದ್ದೀರಿ. ದಿನಕ್ಕೆ 417 ರೂಪಾಯಿ ಹೂಡಿಕೆ ಮಾಡಿದರೆ ನಿಮಗೆ ಅಧಿಕ ಲಾಭ ಸಿಗಲಿದೆ. ಒಂದು ವೇಳೆ ನೀವು ಪಿಪಿಎಫ್ ಪೂರ್ಣ ಹಂತದಲ್ಲಿದ್ದರೆ ಆಗ ಇರುವ ಬಡ್ಡಿದರದ ಆಧಾರದ ಮೇಲೆ ಕೂಡ ಮತ್ತೆ ಹೂಡಿಕೆ ಮಾಡಬಹುದು.

ಲಾಕ್ ಇನ್ ವ್ಯವಸ್ಥೆ:

ಪಿಪಿಎಫ್ ನಲ್ಲಿ ಕಡ್ಡಾಯ ಲಾಕ್ ಇನ್ ವ್ಯವಸ್ಥೆ ಇರಲಿದೆ. ಅಂದರೆ ಒಮ್ಮೆ ನೀವು ಇಲ್ಲಿ ಠೇವಣಿ ಮಾಡಿದರೆ ಕಡ್ಡಾಯವಾಗಿ 15 ವರ್ಷ ಮಾಡಲೇ ಬೇಕು. ತೀರಾ ಅಗತ್ಯ ಬಿದ್ದು ನೀವು ಹಣ ವಾಪಾಸ್ಸುವ ಪಡೆಯಬೇಕೆಂಬ ಅವಶ್ಯಕತೆ ಬಿದ್ದರೆ ಆಗ ಕೂಡ ಕೆಲ ನಿರ್ದಿಷ್ಟ ನಿಯಮ ಪಾಲಿಸಬೇಕು. ಹಾಗೆಂದು ಕಟ್ಟಿದ್ದ ಪೂರ್ತಿ ಹಣ ಸಿಗದೇ ಭಾಗಶಃ ಸಿಗಲಿದೆ. ಉಳಿದ ಮೊತ್ತ 15ವರ್ಷದ ಬಳಿಕ ಸಿಗಲಿದೆ. ಈ ಮೂಲಕ ನಿವೃತ್ತಿ ಜೀವನ ಸುಖ ಕರವಾಗಿರಲು ಈ ಯೋಜನೆ ಬಹಳ ಅನುಕೂಲ ಆಗಲಿದೆ ಎಂದು ಹೇಳಬಹುದು.

advertisement

Leave A Reply

Your email address will not be published.