Karnataka Times
Trending Stories, Viral News, Gossips & Everything in Kannada

Saving Schemes: ಮಹಿಳೆಯರಿಗೆ ಇರುವ ಸೇವಿಂಗ್ಸ್ ಸ್ಕೀಮ್ ಗಳು, ಇಂದಿನಿಂದಲೇ ಹೂಡಿಕೆ ಮಾಡಿ ಭವಿಷ್ಯವನ್ನು ಸುರಕ್ಷಿತಗೊಳಿಸಿ.

advertisement

ಇಂದಿನ ಕಾಲದಲ್ಲಿ ಮಹಿಳೆಯರು ಕೂಡ ಪುರುಷರಷ್ಟೇ ಸಮಾನರಾಗಿ ಬೆಳೆಯುತ್ತಿದ್ದಾರೆ. ಇಂದಿನ ಕಾಸ್ಟ್ಲಿ ಜಗತ್ತಿನಲ್ಲಿ ಇಬ್ಬರೂ ದುಡಿಯದೇ ಇದ್ದರೆ ಆರಾಮದಾಯಕ ಜೀವನ ನಡೆಸುವುದು ಕಷ್ಟದ ವಿಚಾರವೇ ಸರಿ. ಹೀಗೆ ದುಡಿಯುತ್ತಿರುವ ಮಹಿಳೆಯರಿಗೆ ಹಲವು ಸೇವಿಂಗ್ಸ್ ಯೋಜನೆಗಳು (Saving Schemes) ಇದ್ದು ಇಲ್ಲಿ ಹೂಡಿಕೆ ಮಾಡಿದರೆ ಉತ್ತಮ ರಿಟರ್ನ್ಗಳು ಸಿಗುತ್ತವೆ.

ಸರ್ಕಾರಿ ಯೋಜನೆಗಳು, ಅಂಚೆ ಕಛೇರಿ ಯೋಜನೆಗಳು (Post Office Schemes) ಹಾಗೂ ಇನ್ನೂ ಹಲವು ಹೂಡಿಕೆಯ ದಾರಿಗಳು ನಮ್ಮ ಮುಂದೆ ಇರುತ್ತವೆ. ಇಲ್ಲಿ ಹೂಡಿಕೆ ಮಾಡುವುದರಿಂದ ತೆರಿಗೆ ಪ್ರಯೋಜನಗಳ ಜೊತೆಗೆ ನಮ್ಮ ಭವಿಷ್ಯದ ಖರ್ಚಿಗಾಗಿ ಅಥವಾ ಸುರಕ್ಷತೆಗಾಗಿ ನಮ್ಮ ಬಳಿ ಹಣ ಇರುತ್ತದೆ.

ಅಂತಹ ಯಾವೆಲ್ಲ ಯೋಜನೆಗಳು ಇದೆ ನೋಡೋಣ:

Mahila Samman Savings Scheme:

 

 

ಮಹಿಳೆಯರಿಗಾಗಿಯೇ ಹೊಸ ಬಗೆಯ ಹೂಡಿಕೆ ವಿಧಾನವನ್ನು ಸರಕಾರ ಜಾರಿಗೆ ತಂದಿದೆ. ಇದು ವಿಶೇಷವಾಗಿ ಮಹಿಳೆಯರಿಗೆ ರೂಪಿಸಲಾದ ಯೋಜನೆ ಯಾಗಿದ್ದು ಈ ಯೋಜನೆ ಅಡಿ ಮಹಿಳೆಯರು ಎರಡು ಲಕ್ಷದವರೆಗೆ ಹೂಡಿಕೆ ಮಾಡಬಹುದು. ಈ ರೀತಿ ಹೂಡಿಕೆ ಮಾಡಿದ ಠೇವಣಿಯ ಮೇಲೆ ಶೇಕಡಾ 7.5 ರಷ್ಟು ಬಡ್ಡಿ ಕೂಡ ಸಿಗುತ್ತದೆ ಈ ಯೋಜನೆ ಎರಡು ವರ್ಷಗಳ ಯೋಜನೆ ಆಗಿದೆ.

Sukanya Samriddhi Yojana:

 

advertisement

 

ತಮ್ಮ ಹೆಣ್ಣು ಮಗಳ ಭವಿಷ್ಯಕ್ಕಾಗಿ ಈ ಯೋಜನೆ ಅಡಿ ಹೂಡಿಕೆ ಮಾಡಿದರೆ ಗರಿಷ್ಠವಾದ ರಿಟರ್ನ್ ಸಿಗುತ್ತದೆ. ಹೆಣ್ಣು ಮಕ್ಕಳ ಹೆಸರಿನಲ್ಲಿ ಹೆಣ್ಣುಮಗು 10 ವರ್ಷ ಆಗುವ ತನಕ ಈ ಖಾತೆಯನ್ನು ತೆರೆಯಬಹುದು. ಈ ಖಾತೆಯಲ್ಲಿ 250 ರೂಪಾಯಿ ಗಳಿಂದ 1.5 ಲಕ್ಷದ ತನಕ ಹೂಡಿಕೆ ಮಾಡಬಹುದು. ಪ್ರಸ್ತುತ ಈ ಯೋಜನೆಯಲ್ಲಿ ಹೂಡಿಕೆ ಮಾಡಿದವರಿಗೆ ಸರ್ಕಾರ 8% ನ ಬಡ್ಡಿಯನ್ನು ನೀಡುತ್ತಿದೆ.

National Savings Scheme:

 

 

ರಾಷ್ಟ್ರೀಯ ಉಳಿತಾಯ ಯೋಜನೆ ಕೂಡ ಬಹಳ ಮಂದಿ ಹೂಡಿಕೆ ಮಾಡುವ ವಿಧಾನವಾಗಿದೆ. ಇಲ್ಲಿ ಸಾವಿರ ರೂಪಾಯಿಗಳಿಂದ ಆರಂಭ ಮಾಡಿ ನಮಗೆ ಬೇಕಾದ ಯಾವುದೇ ಮೊತ್ತದ ಹೂಡಿಕೆ ಮಾಡಬಹುದು. ಇಲ್ಲಿ 7.7% ನ ಬಡ್ಡಿ ಸಿಗುತ್ತದೆ ಹಾಗೂ ಈ ಯೋಜನೆಯು ಐದು ವರ್ಷಗಳ ಅವಧಿಯದ್ದಾಗಿರುತ್ತದೆ. ಇದಲ್ಲದೆ ಪಿಪಿಎಫ್ ಕೂಡ ಹಣ ಹೂಡಿಕೆ ಮಾಡಬಹುದಾಗಿದ್ದು ಇಲ್ಲಿಯೂ 7.1% ನ ಬಡ್ಡಿದರ ಇದೆ

Post Office TD Scheme:

ಪೋಸ್ಟ್ ಆಫೀಸ್ನ ಟಿ ಡಿ ಅಥವಾ ಟೈಮ್ ಡೆಪಾಸಿಟ್ ಸ್ಕೀಮ್ ಕೂಡ ಬಹಳ ಉತ್ತಮ ಹೂಡಿಕೆಯ ವಿಧಾನ ವಾಗಿದೆ. ಪೋಸ್ಟ್ ಆಫೀಸ್ ನ ಹಲವು ಸ್ಕೀಮ್ ಗಳ ಜೊತೆಗೆ ಈ ಸ್ಕೀಮ್ ಕೂಡ ಉತ್ತಮ ರಿಟರ್ನ್ಸ್ ಕೊಡುತ್ತದೆ. ಈ ಹೂಡಿಕೆ ಕೂಡ ಐದು ವರ್ಷಗಳ ಅವಧಿಗೆ ಇದೆ. ಇಲ್ಲಿ ಹೂಡಿಕೆ ಮಾಡಿದವರಿಗೆ 7.5 ಶೇಕಡಾ ಬಡ್ಡಿ ಸಿಗುತ್ತದೆ.

advertisement

Leave A Reply

Your email address will not be published.