Karnataka Times
Trending Stories, Viral News, Gossips & Everything in Kannada

Pension: ಪಿಂಚಣಿ ಹಣ ಹಿಂಪಡೆಯುವವರಿಗೆ ಸರ್ಕಾರದ ಮಹತ್ವದ ಆದೇಶ, ಫೆಬ್ರುವರಿ 1 ರಿಂದ ಹೊಸ ನಿಯಮ ಜಾರಿಗೆ!

advertisement

ನಾವು ಕೆಲಸ ಮಾಡುವ ಸಮಯದಲ್ಲಿ ನಮ್ಮ ಭವಿಷ್ಯದ ಹಣದ ಅಗತ್ಯಗಳಿಗಾಗಿ ಎಂದು ನಮ್ಮ ಹಣದ ಒಂದು ಭಾಗ ಪಿಎಫ್ ನಲ್ಲಿ ಜಮೆ ಆಗುತ್ತಿರುವುದು ನಮಗೆಲ್ಲ ಗೊತ್ತಿರುವ ವಿಚಾರ. ಈ ಹಣವನ್ನು ಅವಧಿಗಿಂತ ಮೊದಲು ಸಾಲದ ರೂಪದಲ್ಲಿ ಅಥವಾ ಬೇರೆ ರೂಪದಲ್ಲಿ ಹಿಂದೆ ಪಡೆಯಲು ಕೆಲವು ನಿಯಮಗಳು ಇವೆ.

ಸರ್ಕಾರ ಈಗ ಆ ನಿಯಮಗಳಿಗೆ ಬದಲಾವಣೆ ತರುತ್ತದೆ ಪಿಂಚಣಿ (Pension) ನಿಧಿ ಸಂಸ್ಥೆ (PFRDA) ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ಅಡಿಯಲ್ಲಿ ಪಿಂಚಣಿಯನ್ನು ಹಿಂದೆ ಪಡೆಯುವ ನಿಬಂಧನೆಗಳನ್ನು ಬದಲಾಯಿಸಿ ಹೊಸ ನಿಯಮಗಳನ್ನು ಜಾರಿಗೆ ತರುತ್ತಿದೆ. ಬದಲಾದ ನಿಯಮಗಳು 1 ಫೆಬ್ರವರಿ 20204 ರಿಂದ ಜಾರಿಗೆ ಬರುತ್ತಿದ್ದು ಈ ನಿಯಮಗಳ ಪ್ರಕಾರ ವೈಯಕ್ತಿಕ ಪಿಂಚಣಿ ಖಾತೆಯಲ್ಲಿ ಉದ್ಯೋಗದಾತರ ಕೊಡುಗೆಗಳನ್ನು ಹೊರತುಪಡಿಸಿ ಹೆಚ್ಚು ಎಂದರೆ 25 ಶೇಕಡ ಕೊಡುಗೆಗಳನ್ನು ಮಾತ್ರ ಹಿಂದೆ ಪಡೆಯಬಹುದು.

 

advertisement

ಯಾವೆಲ್ಲಾ ಕಾರಣಗಳಿಗೆ ತಮ್ಮ PF ಕೊಡುಗೆಗಳನ್ನು ಹಿಂದೆ ಪಡೆಯಬಹುದು ಎಂಬ ವಿವರಗಳು ಈ ಕೆಳಗಿನಂತಿವೆ:

  • ಮಕ್ಕಳ ಉನ್ನತ ಶಿಕ್ಷಣಕ್ಕೆ ಹಣದ ಅಗತ್ಯವಿದ್ದರೆ ಆ ಸಮಯದಲ್ಲಿ ಪಡೆಯಬಹುದು.
  • ಮಕ್ಕಳ ಮದುವೆ ಕರ್ಚಿಗೆ ಹಣ ಪಡೆಯುವುದು.
  • ಸ್ವಂತ ಮನೆ ಅಥವಾ ಫ್ಲಾಟ್ ಖರೀದಿಗೆ ಹಣದ ಅಗತ್ಯವಿದ್ದಾಗ ಈ ಹಣ ನೆರವರಿಗೆ ಬರುತ್ತದೆ ಆದರೆ ಗ್ರಾಹಕರು ಈಗಾಗಲೇ ಮನೆಯನ್ನು ಹೊಂದಿದ್ದರೆ ಎರಡನೇ ಮನೆಗೆ ಈ ನಿಯಮ ಅನ್ವಯವಾಗುವುದಿಲ್ಲ.
  • ಗಂಭೀರ ಆರೋಗ್ಯದ ಸಮಸ್ಯೆಗಳು ಇದ್ದರೆ ನ್‌ಪಿಎಸ್ ನಿಂದ ಹಣ ಪಡೆಯುವುದು.
  • ಅಂಗವಿಕಲತೆ ಅಥವಾ ಅಂಗವಿಕಲಯೆಯಿಂದ ಉಂಟಾಗುವ ವೈದ್ಯಕೀಯ ಖರ್ಚುಗಳಿಗಾಗಿ ಬಳಸಬಹುದು
  • ಕೌಶಲ್ಯ ಅಭಿವೃದ್ಧಿಗಾಗಿ ಬಳಸಬಹುದು
  • ಹೊಸ ಉದ್ಯಮ ಅಥವಾ ವ್ಯವಹಾರವನ್ನು ಆರಂಭಿಸುವುದಾದರೆ ಬಳಸಬಹುದು.

ಈ ರೀತಿ ಹಿಂದೆ ಪಡೆಯುವುದಕ್ಕೂ ಚಂದಾದಾರರ ಸೇರ್ಪಡೆ ಮತ್ತಿತರ ಅಂಶಗಳು ಮುಖ್ಯವಾಗುತ್ತವೆ. ಅವು ಯಾವುದೆಂದರೆ:

  • NPS ಚಂದಾದಾರರೂ ಸೇರ್ಪಡೆಗೊಂಡ ದಿನಾಂಕದಿಂದ ಕನಿಷ್ಠ ಮೂರು ವರ್ಷಗಳ ಕಾಲ ನಿರಂತರವಾಗಿ NPS ಸದಸ್ಯ ಆಗಿರಬೇಕು
  • ಭಾಗಶಃ ಹಿಂಪಡೆಯುವಿಕೆಯ ಒಟ್ಟು ಮೊತ್ತ ಪಿಂಚಣಿ (Pension) ಖಾತೆಯ ಒಟ್ಟು ಮೊತ್ತದ ನಾಲ್ಕನೇ ಒಂದು ಭಾಗವನ್ನು ಮೀರಬಾರದು
  • ಈ ರೀತಿ ಹಿಂಪಡೆಯುವಿಕೆ ಕೂಡ NPS ಚಂದಾರಾದಾರರಾಗಿರುವ ಸಮಯದಲ್ಲಿ ಗರಿಷ್ಠ ಮೂರು ಬಾರಿ ಹಿಂದೆ ಪಡೆಯಬಹುದು.

ಈ ರೀತಿ ಹಣವನ್ನು ಹಿಂದೆ ಪಡೆಯಲು ಚಂದದಾರರು ತಮ್ಮ ಸರ್ಕಾರಿ ನೋಡಲ್ ಕಚೇರಿ ಅಥವಾ ಪಾಯಿಂಟ್ ಆಫ್ ಪ್ರೆಸೆಂಟ್ (Point of Present) ಮೂಲಕ ಉದ್ದೇಶವನ್ನು ತಿಳಿಸಿ ಸ್ವಯಂ ಘೋಷಣೆಯೊಂದಿಗೆ ಮನವಿಯನ್ನು ಕೇಂದ್ರ ರೆಕಾರ್ಡ್ ಕೀಪಿಂಗ್ ಏಜೆನ್ಸಿ (CRA) ಗೆ ಸಲ್ಲಿಸಬೇಕು. ಇದಾದ ಬಳಿಕ ಬ್ಯಾಂಕ್ ಖಾತೆಯ ಪರಿಶೀಲನೆ ನಡೆದ ನಂತರ ಹಣವನ್ನು ನೀಡಲಾಗುತ್ತದೆ.

advertisement

Leave A Reply

Your email address will not be published.