Karnataka Times
Trending Stories, Viral News, Gossips & Everything in Kannada

Ram Mandir Inauguration: ರಾಮಮಂದಿರ ಉದ್ಘಾಟನೆ ದಿನ ಕೇಂದ್ರ ಸರ್ಕಾರಿ ನೌಕರರಿಗೆ ಅರ್ಧ ದಿನ ರಜೆ!

advertisement

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ (Ram Mandir Inauguration) ಹಾಗೂ ರಾಮ ಮಂದಿರದ ಗರ್ಭ ಗೃಹದಲ್ಲಿ ರಾಮ ಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ನಡೆಯಲಿದ್ದು ಜನರು ಕಾತುರದಿಂದ ಕಾಯುತ್ತಿದ್ದಾರೆ. ಆ ದಿನ ಪ್ರತಿಯೊಬ್ಬರಿಗೂ ವಿಶೇಷ, ಹಾಗಾಗಿ ಜನರು ತಮ್ಮ ಮನೆಗಳ ಮುಂದೆ ದೀಪ ಬೆಳಗಿಸಿ ರಾಮನ ಪೂಜೆ ಪುರಸ್ಕಾರ ಇದ್ದಲ್ಲಿಯಿಂದಲೇ ಮಾಡಲಿದ್ದಾರೆ. ಅನೇಕ ಜನರು ಅಯೋಧ್ಯೆಗೆ ಹೋಗಲು ತಯಾರಿ ನಡೆಸುತ್ತಿದ್ದರೆ, ಇನ್ನೂ ಕೆಲವರು ಆದಿನ ವಿಶೇಷ ಕೆಲಸವನ್ನು ಮಾಡಬೇಕು ಎನ್ನುವ ಯೋಚನೆಯಲ್ಲಿದ್ದಾರೆ.

ಅರ್ಧ ದಿನ ರಜೆ:

ಈ ನಿಟ್ಟಿನಲ್ಲಿ ಜನವರಿ 22 ರಂದು ದೇಶಾದ್ಯಂತ ಎಲ್ಲಾ ಕೇಂದ್ರ ಸರ್ಕಾರಿ ನೌಕರರಿಗೆ (Central Govt Employee) ಅರ್ಧ ದಿನ ರಜೆ ನೀಡಲು ಕೇಂದ್ರ ಸರ್ಕಾರ ಈಗಾಗಲೇ ಈ ಬಗ್ಗೆ ಆದೇಶ ಹೊರಡಿಸಿದೆ. ‌2024 ರ ಜನವರಿ 22 ರಂದು ಮಧ್ಯಾಹ್ನ 2.30 ರವರೆಗೆ ರಜೆ ನೀಡಲಾಗಿದೆ ಎಂದು ಕೇಂದ್ರ ಸರ್ಕಾರದ ಆದೇಶದಲ್ಲಿ ನೀಡಲಾಗಿದೆ.

ಇಲ್ಲಿ ರಜೆ ಘೋಷನೆ:

ಅಯೋಧ್ಯಾ ಶ್ರೀರಾಮ ಮಂದಿರ ಉದ್ಘಾಟನೆ (Ram Mandir Inauguration) ಭಾಗವಾಗಿ ಉತ್ತರ ಪ್ರದೇಶ, ಛತ್ತೀಸ್‌ಗಢ, ಗೋವಾ ಇತ್ಯಾದಿ ರಾಜ್ಯದ ಶಾಲೆ, ಕಾಲೇಜುಗಳಿಗೆ ಸರ್ಕಾರ ರಜೆ ಘೋಷಣೆ ಮಾಡಿದೆ.

advertisement

ಲೈವ್ ಸ್ಟ್ರೀಮ್ ನೋಡಲು ಸಿದ್ದತೆ:

 

 

ಕೆಲವು ಶಾಲೆಗಳಲ್ಲಿ ರಜೆ ಘೋಷಿಸದಂತೆ ಮತ್ತು ಅದರ ಬದಲಾಗಿ ರಾಮ ಮಂದಿರದ ಉದ್ಘಾಟನಾ ಸಂಭ್ರಮ ವನ್ನು ಲೈವ್-ಸ್ಟ್ರೀಮ್ (Live Stream) ಮೂಲಕ ನೋಡಲು ನಿರ್ದೇಶನವನ್ನು ನೀಡಿದೆ. ಕೇಂದ್ರ ಸರಕಾರದ ಆದೇಶದ ಪ್ರಕಾರ, ರಾಜ್ಯದ ಕೇಂದ್ರ ಸರ್ಕಾರಿ ಕಚೇರಿಗಳು ಜನವರಿ 22 ರಂದು ಅರ್ಧ ದಿನವನ್ನು ಈ ಸಂಭ್ರಮ ಕ್ಕೆ ಭಾಗಿಯಾಗಲು ಮೀಸಲಿಟ್ಟಿದೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Chief Minister Yogi Adityanath) ಅವರ ನಿರ್ದೇಶನದಂತೆ ಜನವರಿ 22 ರಂದು ಉತ್ತರ ಪ್ರದೇಶದ ಶಿಕ್ಷಣ ಸಂಸ್ಥೆಗಳು ರಾಮಮಂದಿರ ಸಮಾರಂಭದ ದೃಷ್ಟಿಯಿಂದ ಅಲ್ಲಿನ ಶಾಲೆಗಳಿಗೆ ರಜೆ ಇರುತ್ತದೆ.

ನಿರ್ದೇಶನ ನೀಡುವಂತೆ ಮನವಿ:

ನಗರ ಅಥವಾ ರಾಜ್ಯದಲ್ಲಿ ಯಾವುದೇ ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಯ ಸಂದರ್ಭ ಬಂದರೆ , ಆಯಾ ಜಿಲ್ಲಾಧಿಕಾರಿಗಳು ರಜೆ ಘೋಷಿಸಬಹುದು ಎನ್ನಲಾಗಿದೆ.

advertisement

Leave A Reply

Your email address will not be published.