Karnataka Times
Trending Stories, Viral News, Gossips & Everything in Kannada

Pension: ಇನ್ಮುಂದೆ ಇಂತಹ ಮಹಿಳೆಯರು 50ನೇ ವಯಸ್ಸಿನಿಂದಲೇ ಪಿಂಚಣಿ ಪಡೆದುಕೊಳ್ಳಬಹುದು, ಇಲ್ಲಿದೆ ಹೊಸ ಅಪ್ಡೇಟ್!

advertisement

ದೇಶಾದ್ಯಂತ ಕೇಂದ್ರ ಹಾಗೂ ರಾಜ್ಯ ಸರಕಾರದ ವತಿಯಿಂದ ಮಹಿಳೆಯರಿಗೆ ಹಲವು ರೀತಿಯ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಇದೀಗ ಜಾರ್ಖಂಡ್ ಸರ್ಕಾರ ರಾಜ್ಯದ ಮಹಿಳೆಯರಿಗೆ ಗುಡ್ ನ್ಯೂಸ್ ಪ್ರಕಟಿಸಿದೆ. ಮಹಿಳೆಯರಿಗೆ ಪಿಂಚಣಿ ಪಡೆಯುವ ವಯೋಮಿತಿಯನ್ನು ರಾಜ್ಯ ಸರ್ಕಾರ ಶೀಘ್ರದಲ್ಲೇ ಕಡಿತಗೊಳಿಸಲಿದೆ. ಇದರಿಂದ ರಾಜ್ಯದ ಮಹಿಳೆಯರು 50 ವರ್ಷದಿಂದಲೇ  ಪಿಂಚಣಿ (Pension) ಪಡೆಯಲು ಪ್ರಾರಂಭಿಸಲಿದ್ದಾರೆ.

ಪ್ರಸ್ತುತ ರಾಜ್ಯದಲ್ಲಿ ಎಲ್ಲಾ ವರ್ಗದ ಮಹಿಳೆಯರು ತಮ್ಮ 60ನೇ ವಯಸ್ಸಿನಿಂದ ಪಿಂಚಣಿ (Pension) ಪಡೆಯುತ್ತಿದ್ದಾರೆ. ಇದೇ ವೇಳೆ, ಶೀಘ್ರದಲ್ಲೇ ಕೆಲವು ವಿಶೇಷ ಮಹಿಳೆಯರು 50 ವರ್ಷದಿಂದ ಪಿಂಚಣಿ ಪಡೆಯಲು ಆರಂಭಿಸಲಿದ್ದಾರೆ. ಅಧಿಕಾರಿಯೊಬ್ಬರು ಮಂಗಳವಾರ ಈ ಮಾಹಿತಿ ನೀಡಿದ್ದಾರೆ.

50 ನೇ ವಯಸ್ಸಿನಲ್ಲಿ ಯಾವ ಮಹಿಳೆಯರು ಪಿಂಚಣಿ ಸಿಗಲಿದೆ?

 

 

advertisement

ಈ ಕುರಿತು ಪ್ರಸ್ತಾವನೆ ಅಂತಿಮ ಹಂತದಲ್ಲಿದೆ ಎಂದು ಮಹಿಳಾ, ಮಕ್ಕಳ ಅಭಿವೃದ್ಧಿ ಮತ್ತು ಸಾಮಾಜಿಕ ಭದ್ರತಾ ಇಲಾಖೆಯ ಕಾರ್ಯದರ್ಶಿ ಕೃಪಾ ನಂದ್ ಝಾ ತಿಳಿಸಿದ್ದಾರೆ. ಪ್ರಸ್ತಾವನೆಯ ಅಡಿಯಲ್ಲಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮಹಿಳೆಯರಿಗೆ ಪಿಂಚಣಿ ಪಡೆಯಲು ವಯಸ್ಸಿನ ಮಿತಿ 50 ವರ್ಷಗಳಾಗಿರಲಿದೆ.

ಮುಂದಿನ ಸಭೆಯಲ್ಲಿ ಪ್ರಸ್ತಾವನೆಗೆ ಅನುಮೋದನೆ:

ಮುಖ್ಯಮಂತ್ರಿ ಹೇಮಂತ್ ಸೊರೆನ್ (Chief Minister Hemant Soren) ಅವರು ಡಿಸೆಂಬರ್ 29 ರಂದು ರಾಜ್ಯದ ಆದಿವಾಸಿಗಳು ಮತ್ತು ದಲಿತರು 50 ವರ್ಷ ವಯಸ್ಸನ್ನು ತಲುಪಿದ ನಂತರ ಪಿಂಚಣಿ ಪ್ರಯೋಜನಗಳಿಗೆ ಅರ್ಹರಾಗಿರುತ್ತಾರೆ ಎಂದು ಘೋಷಿಸಿದ್ದಾರೆ. ಇದಾದ ನಂತರ ಝಾ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ಮುಂದಿನ ಸಭೆಯಲ್ಲಿ ಸಚಿವ ಸಂಪುಟದ ಪ್ರಸ್ತಾವನೆಗೆ ಅನುಮೋದನೆ ದೊರೆಯಲಿದೆ ಎಂದು ಭಾವಿಸುತ್ತೇವೆ ಎಂದಿದ್ದಾರೆ.

18 ಲಕ್ಷ ಫಲಾನುಭವಿಗಳು ಪ್ರಯೋಜನ ಸಿಗಲಿದೆ:

ಇದು ಜಾರಿಯಾದ ನಂತರ ಜಾರ್ಖಂಡ್‌ನಲ್ಲಿ ಹೆಚ್ಚುವರಿ 18 ಲಕ್ಷ ಫಲಾನುಭವಿಗಳು ಪಿಂಚಣಿ ಯೋಜನೆಗೆ ಸೇರಲಿದ್ದಾರೆ ಎಂದು ಅವರು ಹೇಳಿದ್ದಾರೆ. ರಾಜ್ಯದಲ್ಲಿ ಒಟ್ಟು 35.68 ಲಕ್ಷ ಫಲಾನುಭವಿಗಳು ಪಿಂಚಣಿ ಸೌಲಭ್ಯ ಪಡೆಯುತ್ತಿದ್ದಾರೆ ಎಂದು ಝಾ ತಿಳಿಸಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಪಿಂಚಣಿದಾರರ ಸಂಖ್ಯೆ ಶೇಕಡಾ 82 ರಷ್ಟು ಹೆಚ್ಚಾಗಿದೆ ಎಂದು ಅವರು ಹೇಳಿದ್ದಾರೆ.

advertisement

Leave A Reply

Your email address will not be published.