Karnataka Times
Trending Stories, Viral News, Gossips & Everything in Kannada

Sukanya Samriddhi Yojana: ಸುಕನ್ಯಾ ಸಮೃದ್ಧಿ ಯೋಜನೆ ಹಣವನ್ನು ಅವಧಿ ಮೊದಲೇ ಖಾತೆಯಿಂದ ಹಿಂಪಡೆಯಬಹುದೇ? ಇಲ್ಲಿದೆ ಉತ್ತರ!

advertisement

ಇಂದು ಹೆಣ್ಣು ಮಕ್ಕಳ ಅಭಿವೃದ್ಧಿ ಗಾಗಿ ಸರಕಾರ ಹಲವು ರೀತಿಯ ಯೋಜನೆಗಳನ್ನು ಜಾರಿಗೆ ತರುತ್ತಲೆ ಇದೆ.ಇಂದು ಹೆಣ್ಣು ಮಕ್ಕಳು ಸಹ ತಾವು ಯಾವುದೇ ರೀತಿಯಲ್ಲಿ ಕಮ್ಮಿ ಇಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ವಿದ್ಯಾವಂತರಾಗಿ ಕೆಲಸ ಗಿಟ್ಟಿಸಿಕೊಂಡು ತಾವೇ ಹಣ ಸಂಪಾದನೆ ಮಾಡಿಕೊಳ್ಳುತ್ತಾರೆ. ಅದೇ ರೀತಿ ಕುಟುಂಬದ ಪ್ರತಿ ಹೆಣ್ಣು ಮಗುವಿಗೆ ಹಣ ಉಳಿತಾಯ ಮಾಡುವ ಉದ್ದೇಶ ದಿಂದ ಸುಕನ್ಯಾ ಸಮೃದ್ಧಿ ಯೋಜನೆ (Sukanya Samriddhi Yojana) ಯನ್ನು ಜಾರಿಗೆ ತರಲಾಗಿದೆ. ಈ SSY ಯೋಜನೆ ಮೂಲಕ ಹೆಣ್ಣು ಮಕ್ಕಳ ಭವಿಷ್ಯವನ್ನು ಸುಖಮಯವಾಗಿ ಇಡಬಹುದು. ಆಕೆಯ ಭವಿಷ್ಯವನ್ನು ಸುರಕ್ಷಿತವಾಗಿರಿಸಲು ನೀವು ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.

 

ಕನಿಷ್ಠ ಹೂಡಿಕೆ ಮಾಡಿ:

advertisement

ಈ ಯೋಜನೆ ಮೂಲಕ ಕನಿಷ್ಠ 250 ಮತ್ತು ಗರಿಷ್ಠ 1.50 ಲಕ್ಷ ಹೂಡಿಕೆ ಮಾಡಲು ಅವಕಾಶ ಇದ್ದು ಈ ಹಣವನ್ನು ಹೆಣ್ಣು ಮಗುವಿನ ಶಿಕ್ಷಣ, ಮದುವೆ ಇತ್ಯಾದಿಗಳಿಗೆ ಬಹಳಷ್ಟು ಸಹಾಯಕವಾಗುತ್ತದೆ.ಈ ಯೋಜನೆಯ ಮೂಲಕ ಶೇಕಡಾ ಶೇಕಡಾ 8.2 ರ ದರದಲ್ಲಿ ಬಡ್ಡಿ ನೀಡಲಾಗುತ್ತಿದ್ದು ನಿಮ್ಮ ಮಗಳ ವಯಸ್ಸು 10 ವರ್ಷದೊಳಗಿದ್ದರೆ, ನೀವು ಈ ಯೋಜನೆಯಲ್ಲಿ ಹಣವನ್ನು ಠೇವಣಿ ಮಾಡಲು ಅವಕಾಶ ಇದೆ. ಇದರಲ್ಲಿ 15 ವರ್ಷಗಳ ಕಾಲ ನಿರಂತರವಾಗಿ ಹೂಡಿಕೆ ಮಾಡಬೇಕು, 21 ವರ್ಷಗಳ ನಂತರ ಠೇವಣಿ ಮೊತ್ತವನ್ನು ಬಡ್ಡಿ‌ ಸಹಿತ ನೀಡಲಾಗುತ್ತದೆ

ಈ ಮೊದಲು ಹಣ ಪಡೆಯಬಹುದೆ?

ಈ ಯೋಜನೆ ಮೂಲಕ ನೀವು 15 ವರ್ಷಗಳವರೆಗೆ ಹೂಡಿಕೆ ಮಾಡಬೇಕಾಗುತ್ತದೆ. 21 ವರ್ಷಗಳಲ್ಲಿ ಖಾತೆಯ ಹಣ ಪಡೆದರೆ ನೀವು ಬಡ್ಡಿಯೊಂದಿಗೆ ಹಣವನ್ನು ಪಡೆಯಬಹುದು. ಇದು ಮೆಚ್ಯೂರ್‌ ಆಗಲು 21 ವರ್ಷ ಕಾಯಬೇಕು. ಕೆಲವು ತುರ್ತು ಸಂದರ್ಭಗಳಲ್ಲಿ ಅವದಿಗೂ ಮೊದಲೇ ಹಣ ಹಿಂಪಡೆಯಬಹುದು. ಆದರೆ ಕೆಲವು ನಿಯಮ ಇರಲಿದೆ.

ಈ ನಿಯಮ ಇದೆ:

ಮಗಳು 18 ನೇ ವಯಸ್ಸಿನಲ್ಲಿ ಮದುವೆಯಾದರೆ, ನೀವು ಖಾತೆಯಲ್ಲಿನ 50 ಪ್ರತಿಶತವನ್ನು ಹಿಂಪಡೆಯಬಹುದು. ಅಂದರೆ ಹಿಂದಿನ ಹಣಕಾಸು ವರ್ಷದ ಒಟ್ಟು ಬ್ಯಾಲೆನ್ಸ್‌ನ ಶೇ.50ರವರೆಗೆ ಹಣವನ್ನು ಹಿಂಪಡೆಯಲು ಅವಕಾಶ ಇದ್ದು ನೀವು ವರ್ಷಕ್ಕೊಮ್ಮೆ ಮಾತ್ರ ಹಣ ಹಿಂಪಡೆಯಬಹುದು. ಒಂದು ತಿಂಗಳ ಮೊದಲು ಮಗು ಯಾವುದೇ ಮಾರಣಾಂತಿಕ ಕಾಯಿಲೆ ಸಮಸ್ಯೆ ಇದ್ದರೆ ಚಿಕಿತ್ಸೆಗೆ ಹಣದ ಅಗತ್ಯವಿದ್ದರೆ, ನೀವು ಖಾತೆಯನ್ನು ಮುಚ್ಚಬಹುದಾಗಿದೆ.

advertisement

Leave A Reply

Your email address will not be published.