Karnataka Times
Trending Stories, Viral News, Gossips & Everything in Kannada

PPF Investment: ಈ ಯೋಜನೆಯಲ್ಲಿ ಹೂಡಿಕೆ ಮಾಡುವುದರಿಂದ 1 ಕೋಟಿ ಹಣ ಗಳಿಸಬಹುದು, ಇಲ್ಲಿದೆ ಲೆಕ್ಕಾಚಾರ!

advertisement

ಕಷ್ಟ ಅಂತ ಬಂದಾಗ ನಮಗೆ ನೇರವಾಗುವುದೇ ಹೂಡಿಕೆಯ ಹಣ. ಹಾಗಾಗಿ ಅಲ್ಪ ಹಣವಾದರೂ ನಾವು ಹೂಡಿಕೆ ಮಾಡಬೇಕು. ಇಂದು ಹೂಡಿಕೆಗೆ ಹಲವು ಆಯ್ಕೆಗಳಿದ್ದು ಪೋಸ್ಟ್ ಅರ್ ಡಿ, ಬ್ಯಾಂಕ್, ಎಲ್ ಐ ಸಿ ಇತ್ಯಾದಿ ಗಳಲ್ಲಿ ಹೂಡಿಕೆ ಮಾಡಬಹುದು.‌ಆದ್ರೆ ನೀವು PPF ಮೂಲಕ ಹೂಡಿಕೆ ಮಾಡಿದ್ರೆ ಕೋಟ್ಯಾಧಿ ಪತಿಯಾಗಬಹುದು.

ಇಷ್ಟು ಬಡ್ಡಿದರ ಇದೆ:

ಉಳಿತಾಯ ಮಾಡುವ ಉದ್ದೇಶದ ಜತಗೆ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವ ಜನರಿಗೆ ನಿವೃತ್ತಿ ಭದ್ರತೆ ಒದಗಿಸುವ ಉದ್ದೇಶದಿಂದ ಈ ಯೋಜನೆ ಜಾರಿಗೆ ಮಾಡಲಾಗಿದೆ.ಈಗಾಗಲೆ ಈ ಯೋಜನೆಯ ಮೂಲಕ ಹಲವು ಜನರು ಹೂಡಿಕೆ ಮಾಡಿದ್ದಾರೆ. ಈ ಪಿಪಿಎಫ್‌ ಖಾತೆ (PPF Account) ಯನ್ನು ತೆರೆಯುವ ಏಳನೇ ಹಣಕಾಸು ವರ್ಷದಿಂದ ಪ್ರತಿ ವರ್ಷ ಭಾಗಶಃ ಹಿಂಪಡೆಯುವಿಕೆ ಇದೆ. ಈ ಪಿಪಿಎಫ್‌ನ ಬಡ್ಡಿ ದರವನ್ನು ಕೇಂದ್ರ ಸರ್ಕಾರವು ಪ್ರತಿ ತ್ರೈಮಾಸಿಕದಲ್ಲಿ ನಿರ್ಧಾರ ಮಾಡುತ್ತದೆ.ಇಂದು ಪಿಪಿಎಫ್‌ನ ಬಡ್ಡಿ ದರವು ಶೇ.7.1 ನಷ್ಟು ಇದೆ.

 

advertisement

ಇಷ್ಟು ಲಾಭ ಗಳಿಸಿ:

ನೀವು ಸಾರ್ವಜನಿಕ ಭವಿಷ್ಯ ನಿಧಿ ನಂತಹ ಪೋಸ್ಟ್ ಆಫೀಸ್ ಯೋಜನೆ (Post Office Scheme) ಯ ಮೂಲಕ ಹೂಡಿಕೆ ಮಾಡಿದ್ರೆ ಹೆಚ್ಚಿನ ಲಾಭ ಗಳಿಕೆ ಮಾಡಬಹುದಾಗಿದೆ. ಹೌದು PPF ನಲ್ಲಿ ವಾರ್ಷಿಕ ಹೂಡಿಕೆಯ ಗರಿಷ್ಠ ಮಿತಿ 1.5 ಲಕ್ಷ ರೂ ಆಗಿದ್ದು ಪ್ರತಿ ತಿಂಗಳು ಸುಮಾರು 12,500 ರೂಪಾಯಿಗಳನ್ನು PPF ನಲ್ಲಿ ಹೂಡಿಕೆ ಮಾಡಿ. ನೀವು ವಾರ್ಷಿಕವಾಗಿ 1,50,000 ರೂಪಾಯಿಗಳ ಹೂಡಿಕೆಯನ್ನು 25 ವರ್ಷಗಳವರೆಗೆ ಮುಂದುವರಿಕೆ ಮಾಡಿ. 25 ವರ್ಷಗಳಲ್ಲಿ ಸುಮಾರು 37,50,000 ಹೂಡಿಕೆ ಮಾಡಿದರೂ ಬಡ್ಡಿಯಾಗಿ 65,58,015 ಸಿಗುತ್ತದೆ. ಹೂಡಿಕೆ ಮಾಡಿದ ಮೊತ್ತ ಮತ್ತು ಬಡ್ಡಿ ಮೊತ್ತವನ್ನು ಒಳಗೊಂಡಂತೆ 25 ವರ್ಷಗಳ ನಂತರ, ನೀವು PPF ನಿಂದ 1,03,08,015 ರೂ ಪಡೆಯಬಹುದಾಗಿದೆ.

ಇಲ್ಲಿ ಖಾತೆ ತೆರೆಯಬಹುದು:

ಇದನ್ನು ಯಾವುದೇ ಅಧಿಕೃತ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್‌ (Post Office) ನ ಯಾವುದೇ ಶಾಖೆಯಲ್ಲಿ PPF ಖಾತೆಗಳನ್ನು ತೆರೆಯಬಹುದಾಗಿದ್ದು ಪಿಪಿಎಫ್ ಯೋಜನೆಯಲ್ಲಿ ಮಾಡಿದ ಠೇವಣಿಗಳನ್ನು ಆದಾಯ ತೆರಿಗೆ ಕಾಯಿದೆಯ ಮೂಲಕ 80 ಸಿ ಅಡಿ ತೆರಿಗೆ ವಿನಾಯಿತಿಗೂ ಅವಕಾಶ ಇದೆ. ಈ ಖಾತೆಯಲ್ಲಿ ವಾರ್ಷಿಕ ಕನಿಷ್ಠ 500 ರೂ. ನಿಂದ ಗರಿಷ್ಠ 1.5 ಲಕ್ಷ ರೂಪಾಯಿವರೆಗೆ ಠೇವಣಿ ಮಾಡಬಹುದು.

advertisement

Leave A Reply

Your email address will not be published.