Karnataka Times
Trending Stories, Viral News, Gossips & Everything in Kannada

PPF Scheme: ಕನಿಷ್ಠ ಹೂಡಿಕೆಯಲ್ಲಿ ಅಧಿಕ ಲಾಭವನ್ನು ನೀಡುವ ಪಿಪಿಎಫ್ ಯೋಜನೆಯ ಬಗ್ಗೆ ನಿಮಗೆಷ್ಟು ಗೊತ್ತು?

advertisement

ಇತ್ತೀಚೆಗಿನ ದಿನಗಳಲ್ಲಿ ಹೆಚ್ಚಿನವರು ಉಳಿತಾಯ ಹಾಗೂ ಹೂಡಿಕೆಯಂತಹ ಯೋಜನೆಗಳತ್ತ ಹೆಚ್ಚು ಗಮನ ಹರಿಸುತ್ತಾರೆ. ಅದರಲ್ಲಿಯೂ ಕಡಿಮೆ ಹೂಡಿಕೆಯಲ್ಲಿ ಅಧಿಕ ಆದಾಯವನ್ನು ಗಳಿಸುವತ್ತ ಒಲವು ತೋರಿಸುತ್ತಿದ್ದಾರೆ. ಹೀಗಾಗಿ ಕಡಿಮೆ ಹೂಡಿಕೆಯ ಯೋಜನೆಗಳಿಗೆ ಹಣ ಹೂಡಿಕೆಯನ್ನು ಮಾಡಿ ಅಧಿಕ ಆದಾಯವನ್ನು ಪಡೆಯುತ್ತಿದ್ದಾರೆ. ಕಡಿಮೆ ಹೂಡಿಕೆ ಮಾಡಿದರೆ ಅಧಿಕ ಆದಾಯವನ್ನು ಈ ಪಿಪಿಎಫ್ ಯೋಜನೆ (PPF Scheme) ಯಲ್ಲಿ ಪಡೆಯಬಹುದಾಗಿದೆ. ಹಾಗಾದ್ರೆ ಕಡಿಮೆ ಹೂಡಿಕೆಯಲ್ಲಿ ಅಪಾಯ ಮುಕ್ತವಾಗಿರುವ ಯೋಜನೆಯಾಗಿರುವ ಈ ಸಾರ್ವಜನಿಕ ಭವಿಷ್ಯ ನಿಧಿ (PPF) ಯ ಕುರಿತಾದ ಮಾಹಿತಿಯನ್ನು ಈ ಲೇಖನದಲ್ಲಿ ಓದಿ ತಿಳಿದುಕೊಳ್ಳಿ.

ಕಡಿಮೆ ಹೂಡಿಕೆಯಲ್ಲಿ ಯೋಜನೆ ಆರಂಭ:

 

 

ಸಾರ್ವಜನಿಕ ಭವಿಷ್ಯ ನಿಧಿ ಯೋಜನೆ (PPF Scheme) ಯು ಸುರಕ್ಷಿತ ಮತ್ತು ಉತ್ತಮ ಆದಾಯವನ್ನು ನೀಡುವ ಈ ಯೋಜನೆಯಲ್ಲಿ ಒಂದಾಗಿದೆ. ಆದಾಯದ ದೃಷ್ಟಿಯಿಂದ ಈ ಯೋಜನೆಯಲ್ಲಿ ಖಾತೆಯನ್ನು ಅಂಚೆ ಕಚೇರಿಯಲ್ಲಿ ಹಾಗೂ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿಯೂ ತೆರೆಯಬಹುದಾಗಿದೆ. ಪ್ರಸ್ತುತ ಪಿಪಿಎಫ್ (PPF) ಅಡಿಯಲ್ಲಿ ಶೇಕಡಾ 7.1 ಬಡ್ಡಿ ನೀಡಲಾಗುತ್ತಿದೆ. ಈ ಯೋಜನೆಯಲ್ಲಿ ತ್ರೈಮಾಸಿಕ ಆಧಾರದ ಮೇಲೆ ಪರಿಶೀಲನೆ ಮಾಡಿ, ಸರ್ಕಾರವು ಬಡ್ಡಿದರಗಳನ್ನು ನಿಗದಿಪಡಿಸುತ್ತದೆ. ಕನಿಷ್ಟ 500 ರೂಪಾಯಿ ಹಾಗೂ ಗರಿಷ್ಠ ಮೊತ್ತ 1.5 ಲಕ್ಷ ರೂಪಾಯಿ ಹೂಡಿಕೆಯೊಂದಿಗೆ ಯೋಜನೆಯನ್ನು ಪ್ರಾರಂಭಿಸಬಹುದು.

advertisement

ಮೆಚ್ಯೂರಿಟಿ ಅವಧಿಗಳು ಎಷ್ಟು ವರ್ಷಗಳು?

ಸಾರ್ವಜನಿಕ ಭವಿಷ್ಯ ನಿಧಿ (PPF) ಯಡಿಯಲ್ಲಿ ಮೆಚ್ಯೂರಿಟಿ ಅವಧಿಯು 15 ವರ್ಷಗಳಾಗಿದ್ದು, ಮೆಚ್ಯೂರಿಟಿಯ ಬಳಿಕ ಸಂಪೂರ್ಣ ಹಣವು ಹೂಡಿಕೆದಾರರ ಕೈ ಸೇರುತ್ತದೆ. ಒಂದು ವೇಳೆ ಹಣದ ಅಗತ್ಯವಿಲ್ಲವಾದರೆ ಮೆಚ್ಯೂರಿಟಿಯ ನಂತರದಲ್ಲಿ ಮತ್ತೆ ಐದು ವರ್ಷಗಳ ಕಾಲ ವಿಸ್ತರಿಸಲು ಅವಕಾಶವಿದೆ. ಆದರೆ ಐದು ವರ್ಷಗಳ ಕಾಲ ವಿಸ್ತರಿಸಲು ಬಯಸಿದರೆ ಮೆಚ್ಯೂರಿಟಿಗೆ ಒಂದು ವರ್ಷದ ಮೊದಲು ಅರ್ಜಿಯನ್ನು ಕಡ್ಡಾಯವಾಗಿ ನೀಡಬೇಕು. ಇಲ್ಲವಾದರೆ ಮುಕ್ತಾಯದ ನಂತರ ಖಾತೆಯನ್ನು ವಿಸ್ತರಿಸಲು ಆಗುವುದಿಲ್ಲ. ಅದಲ್ಲದೇ ಈ ಐದು ವರ್ಷಗಳ ಅವಧಿಯ ವೇಳೆ ಹಣಕಾಸಿನ ತುರ್ತು ಪರಿಸ್ಥಿತಿಯೂ ಎದುರಾದಲ್ಲಿ ಈ ಹಣವನ್ನು ಪಡೆಯಲು ಆಗುವುದಿಲ್ಲ. ಅದಲ್ಲದೇ 15 ವರ್ಷಗಳ ಅವಧಿಯ ನಡುವೆ ಈ ಯೋಜನೆಯಿಂದ ಹಣವನ್ನು ಹಿಂಪಡೆದರೆ ಶೇಕಡಾ ಒಂದರಷ್ಟು ಬಡ್ಡಿಯನ್ನು ಕಡಿತಗೊಳಿಸಲಾಗುತ್ತದೆ.

500 ರೂಪಾಯಿ ಹೂಡಿಕೆ ಮಾಡಿದರೆ ಎಷ್ಟು ಹಣ ಕೈ ಸೇರುತ್ತದೆ?

ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF) ಈ ಯೋಜನೆಯಡಿಯಲ್ಲಿ ಪ್ರತಿತಿಂಗಳು ಕನಿಷ್ಠ 500 ರೂಪಾಯಿಗಳನ್ನು ಹೂಡಿಕೆ ಮಾಡಿದರೂ ಕೂಡ ಅಧಿಕ ಆದಾಯವನ್ನು ಪಡೆಯಬಹುದು. ಪ್ರತಿ ತಿಂಗಳು 500 ರೂಪಾಯಿಯಂತೆ ಸರಿಸುಮಾರು 15 ವರ್ಷಗಳವರೆಗೆ ಹೂಡಿಕೆ ಮಾಡಬೇಕು. ಹೀಗೆ ಮಾಡಿದ್ದಲ್ಲಿ ಮೆಚ್ಯೂರಿಟಿ ಅವಧಿಯ ವೇಳೆ 1.63 ಲಕ್ಷ ರೂಪಾಯಿಯೂ ಸಿಗುತ್ತದೆ. ಒಂದು ವೇಳೆ ಪ್ರತಿ ತಿಂಗಳು 1,000 ರೂಪಾಯಿ ಹೂಡಿಕೆ ಮಾಡಿದರೆ 15 ವರ್ಷಗಳ ಬಳಿಕ 3.25 ಲಕ್ಷ ರೂಪಾಯಿ ಹಣ ಕೈ ಸೇರುತ್ತದೆ. ಹೀಗಾಗಿ ಕಡಿಮೆ ಹೂಡಿಕೆಯಲ್ಲಿ ಅಧಿಕ ಆದಾಯ ಪಡೆಯಬೇಕೆಂದುಕೊಂಡವರಿಗೆ ಈ ಪಿಪಿಎಫ್ ಯೋಜನೆ ಬೆಸ್ಟ್ ಎನ್ನಬಹುದು.

advertisement

Leave A Reply

Your email address will not be published.