Karnataka Times
Trending Stories, Viral News, Gossips & Everything in Kannada

UPI Payment: ಯುಪಿಐ ಪೇಮೆಂಟ್ ನಿಂದ ಮೋಸ ಹೋದರೆ ಈ ಸರಳ ಮಾರ್ಗ ನಿಮಗಾಗಿ!

advertisement

ಇಂದು ಜನರು ನಗದು ವ್ಯವಹಾರ ಮಾಡುವುದಕ್ಕಿಂತಲೂ ಆನ್ಲೈನ್ ಪೇಮೆಂಟ್ (Online Payment) ಮಾಡಲು ಅಧಿಕ ಮಾನ್ಯತೆ ನೀಡುತ್ತಿದ್ದಾರೆ. ಚಿಲ್ಲರೆ ಸಮಸ್ಯೆ , ಹಣ ಒಯ್ಯುವ ಸಮಸ್ಯೆ ಹಾಗೂ ದೂರದೂರಿಗೂ ಸುಲಭಕ್ಕೆ ಹಣ ಹಾಕಲು ಇಷ್ಟೆಲ್ಲ ಅವಕಾಶ ಇರುವಾಗ ಆನ್ಲೈನ್ ಪೇಮೆಂಟ್ ಮಾಡಲು ಮನಸ್ಸಾಗುವುದು ಸಾಮಾನ್ಯವಾಗಿದೆ‌‌. ದಿನದಿಂದ ದಿನಕ್ಕೆ ಇದರ ಬಳಕೆದಾರರ ಸಂಖ್ಯೆಯು ಹೆಚ್ಚಾಗುತ್ತಿದ್ದು ಆನ್ಲೈನ್ ಪೇಮೆಂಟ್ ಅಪ್ಲಿಕೇಶನ್ (Online Paymnet Application) ಕೂಡ ಪ್ರಾಮುಖ್ಯತೆ ಪಡೆಯುತ್ತಿದೆ.

ಸರಳ ಕ್ರಮ:

ಯುಪಿಐ ಪೇಮೆಂಟ್ (UPI Payment) ಇಷ್ಟೆಲ್ಲ ಅನುಕೂಲತೆ ಇದ್ದರೂ ಅದರಲ್ಲಿ ಅನಾನುಕೂಲ ಅಂಶ ಕೂಡ ಇದೆ‌. ಇಂದು ಯುಪಿಐ ಪೇಮೆಂಟ್ ಮೂಲಕ ಮೋಸ, ವಂಚನೆ ಪ್ರಕರಣದ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ವಂಚನೆ ಆದರೆ ಏನು ಮಾಡುವುದು ಎಂದು ಸಹ ಅನೇಕರಿಗೆ ಗೊತ್ತಿರಲಾರದು ಹಾಗಾಗಿ ನಾವಿಂದು ಹೇಳುವ ಸರಳ ಕ್ರಮ ನಿಮಗೆ ಸಾಕಷ್ಟು ಅನುಕೂಲ ನೀಡಲಿದೆ.

ಎಚ್ಚರಿಕೆ ಅಗತ್ಯ:

 

advertisement

 

ಫೋನ್ ಪೇ (PhonePe), ಗೂಗಲ್ ಪೇ (Google Pay), ಪೇಟಿಎಂ (Paytm), ಭೀಮ್ (BHIM) ಇನ್ನು ಅನೇಕ UPI ಪೇಮಂಟ್ ಆ್ಯಪ್ ಇದ್ದು ಈಗ ಬಹಳ ಪ್ರಚಲಿತದಲ್ಲಿದೆ. ತಂತ್ರಜ್ಞಾನ ಕ್ಷೇತ್ರ ಅಭಿವೃದ್ಧಿ ಆಗುತ್ತಿದ್ದು ಧನಾತ್ಮಕವಾಗಿ ಬೆಳೆದಂತೆ ಋಣಾತ್ಮಕವಾಗಿ ಕೂಡ ತಂತ್ರಜ್ಞಾನ ಬಳಕೆಯಾಗುತ್ತಿದೆ. ಹಾಗಾಗಿ ಈ ಬಗ್ಗೆ ಎಚ್ಚೆತ್ತುಕೊಳ್ಳುವುದು ಬಹಳ ಅವಶ್ಯಕವಾಗಿದೆ. ಯುಪಿಐ ನಲ್ಲಿ ನಿಮಗೆ ವಂಚನೆ ಆದರೆ ಕೆಲ ಸರಳ ಮಾರ್ಗ ಅನುಸರಿಸಬೇಕು. ಆಗ ನೀವು ಸಮಸ್ಯೆಯಿಂದ ಹೊರಬರಬಹುದು.

ಈ ವಿಧಾನ ಅನುಸರಿಸಿ:

  • ಮೊದಲನೇಯದ್ದಾಗಿ ಯುಪಿಐ ಪೇಮೆಂಟ್ (UPI Payment) ನಲ್ಲಿ ವಂಚನೆ ಆದಾಗ ನೀವು ಸೇವಾ ಪೂರೈಕೆದಾರರಿಗೆ ವರದಿ ಮಾಡಬೇಕು.
  • ಆಗ ಸೇವಾ ಪೂರೈಕೆದಾರರು ಸ್ಪಂದಿಸಲಿದ್ದಾರೆ. ಒಂದು ವೇಳೆ ನಿಮ್ಮ ಮನವಿಗೆ ಸ್ಪಂದಿಸದಿದ್ದರೆ ಆಗ ಎನ್ ಪಿಸಿ ಐ ವೆಬ್ಸೈಟ್ ಪೋರ್ಟಲ್ (NPCI Website Portal) ಗೆ ಭೇಟಿ ನೀಡಿ.ಅದಕ್ಕಾಗಿ npci.org.in ನಲ್ಲಿ ದೂರನ್ನು ಸಲ್ಲಿಸಿ. ಅದರ ಜೊತೆಗೆ ನಿಮ್ಮ ಬ್ಯಾಂಕಿನಲ್ಲಿ ಸಹ ಈ ಬಗ್ಗೆ ದೂರು ಸಲ್ಲಿಸಿ.
  • ನೀವು ದೂರು ನೀಡಿದ್ದ ಬಳಿಕ ಒಂದು ತಿಂಗಳಾದರೂ ಸಮಸ್ಯೆ ಪರಿಹಾರವಾಗದಿದ್ದರೆ ಆಗ ಡಿಜಿಟಲ್ (Digital) ದೂರು ನೀಡಬಹುದು ಅದಕ್ಕಾಗಿ ಬ್ಯಾಂಕಿನ ಒಂಬುಡ್ಸ್ ಮನ್ ಅನ್ನು ಸಂಪರ್ಕಿಸಬೇಕು. ಅದಕ್ಕಾಗಿ ನೀವು cms.rbi.org.in ವೆಬ್ಸೈಟ್ ನಲ್ಲಿ ಭೇಟಿ ನೀಡಬಹುದು.
  • ಆನ್ಲೈನ್ ಮೂಲಕ ನೀವು ವಂಚನೆಗೆ ಒಳಗಾದರೆ ಸೈಬರ್ ಕ್ರೈಂ ಪೋರ್ಟಲ್ (Cyber Crime Portal) ಅನ್ನು ಭೇಟಿ ನೀಡಿ.
  • ಒಂದು ವೇಳೆ ನಿಮಗೆ ವಂಚನೆ ಬ್ಯಾಂಕ್ ನಿಂದಲೇ ಆಗಿದ್ದರೆ ಆಗ ಬ್ಯಾಂಕ್ ಗೆ ಒಂದು ವರದಿ ಸಲ್ಲಿಸಬೇಕು. ಮೂರು ದಿನದ ಒಳಗೆ ಅಗತ್ಯವಾಗಿ ವರದಿ ಸಲ್ಲಿಸಲೇ ಬೇಕಿ ಎಂಬ ನಿಯಮ ಇದೆ. ಈ ಎಲ್ಲ ವಿಧಾನ ನೀವು ಅನುಸರಿಸಿದರೆ ಸುಲಭಕ್ಕೆ ಸಂಕಷ್ಟದಿಂದ ಪಾರಾಗಬಹುದಾಗಿದೆ‌.

advertisement

Leave A Reply

Your email address will not be published.