Karnataka Times
Trending Stories, Viral News, Gossips & Everything in Kannada

Maruti Car: ಮಾರುತಿ ಕಂಪನಿಯ ಈ ಕಾರಿನ ಮೇಲೆ 42,000ರೂ. ಭರ್ಜರಿ ಡಿಸ್ಕೌಂಟ್, ಡಿ.31 ರವರೆಗೆ ಮಾತ್ರ ಅವಕಾಶ!

advertisement

ಇಂದು ಹೊಸದಾಗಿ ಕಾರು ಖರೀದಿ ಮಾಡಬೇಕು ಎಂಬ ಆಸೆ ಬಹಳಷ್ಟು ಜನರಲ್ಲಿ ಇದ್ದೆ ಇರುತ್ತದೆ. ಎಲ್ಲಾದರೂ ಹೋಗಬೇಕು ಅಂದಾಗ ಬಸ್ಸಿಗಾಗಿ ಕಾದು ಕುಳಿತು ಪ್ರಯಾಣ ಮಾಡುವುದು ಇಂದು ಕಷ್ಟ ಸಾಧ್ಯ. ಹಾಗಾಗಿ ವಾಹನಗಳ ಅವಶ್ಯಕತೆ ಇದ್ದೆ ಇರುತ್ತದೆ. ಅದರಲ್ಲೂ ಹೊಸ ಮಾಡೆಲ್ ಕಾರು, ಹೊಸ ಪೀಚರ್ಸ್ ಅಂದಾಗ ಯುವಕರಿಗೆ ಕ್ರೇಜ್ ಹೆಚ್ಚು. ಇದೀಗ ಕಾರು ಖರೀದಿ ಮಾಡೋರಿಗೆ ಮಾರುತಿ ಬಲೆನೊ ಮೇಲೆ ರಿಯಾಯಿತಿ ನೀಡುತ್ತಿದ್ದು ಬಿಗ್ ಆಫರ್ ಅನ್ನು ಘೋಷಣೆ ಮಾಡಿದೆ.‌

ಎಷ್ಟು ಡಿಸ್ಕೌಂಟ್

ಮಾರುತಿ ಬಲೆನೊ (Maruti Baleno) ಕಾರನ್ನು‌ ಖರೀದಿ ಮಾಡಲು‌ ರಿಯಾಯಿತಿ ನೀಡಿದ್ದು, ಈ ಕಾರಿನ ಮೇಲೆ ಸುಮಾರು ರೂ 42 ಸಾವಿರದವರೆಗೆ ರಿಯಾಯಿತಿಯನ್ನು ಘೋಷಣೆ ಮಾಡಿದ್ದಾರೆ. ಈ ಕಾರಿನ ಬೆಲೆ 6.61 ಲಕ್ಷ ರೂ. ಆಗಿದ್ದು , ಇದೀಗ ನಗದು ರಿಯಾಯಿತಿ ವಿನಿಮಯ ಬೋನಸ್ ಮತ್ತು ಕಾರ್ಪೊರೇಟ್ ಬೋನಸ್ ಅನ್ನು ಪಡೆಯಲು ಅವಕಾಶ ಇದೆ. CNG ಕಾರು ಖರೀದಿ ಮಾಡಲು ಕೇವಲ 20,000 ರೂಪಾಯಿಗಳ ನಗದು ರಿಯಾಯಿತಿ ಕೂಡ ಇರಲಿದೆ.

advertisement

ಈ ತಿಂಗಳಿನಲ್ಲಿ ಮಾತ್ರ ಅವಕಾಶ

ಮಾರುತಿ ಬಲೆನೊ ಖರೀದಿ ಮಾಡಲು‌ ಡಿಸೆಂಬರ್ 31 ರವರೆಗೆ ಮಾತ್ರ ಆಫರ್ ಇದ್ದು ಈ ತಿಂಗಳ ಕೊನೆಯ ವರೆಗೆ ಅವಕಾಶ ಇದೆ. 25 ಸಾವಿರದವರೆಗೆ ನಗದು ರಿಯಾಯಿತಿಯೂ ಇದರಲ್ಲಿ ಲಭ್ಯವಿದೆ.

ವೈಶಿಷ್ಟ್ಯ ಹೇಗಿದೆ?

ಈ ಕಾರು ನೋಡಲು ಕೂಡ ಬಹಳ ಆಕರ್ಷಕವಾಗಿದ್ದು, ಉತ್ತಮ ಪೀಚರ್ಸ್ ಅನ್ನು ಒಳಗೊಂಡಿದೆ. ಈ ಕಾರು 1.2 ಲೀಟರ್ ಎನ್ಎ ಪೆಟ್ರೋಲ್ ಎಂಜಿನ್ ಹೊಂದಿದ್ದು ಪ್ರಯಾಣ ಮಾಡಲು ಆರಾಮದಾಯಕ ಅನುಭವವನ್ನು‌ ಸಹ ಇದು ನೀಡಲಿದೆ. ಈ ಬಲೆನೊದಲ್ಲಿ 6 ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಹಿಲ್ ಹೋಲ್ಡ್ ಅಸಿಸ್ಟ್ ಅನ್ನು ಸಹ ಹೊಂದಿದೆ. ಬಲೆನೋ 1.2 ಲೀಟರ್ ಕೆ ಪೆಟ್ರೋಲ್ ಎಂಜಿನ್ ಹೊಂದಿದೆ.

83 bhp ಪವರ್ ಹಾಗೂ 115nm ಟಾರ್ಕ್ ಹೊಂದಿದೆ. ಹೆಡ್ ಲ್ಯಾಂಪ್ ಕ್ಲಸ್ಟರ್ ನೊಂದಿಗೆ ಸ್ಟೈಲಿಶ್ ಫಾಗ್ ಲ್ಯಾಂಪ್, ಆಲೋಯ್ ವೀಲ್ಹ್ಸ್ ಸೇರಿದಂತೆ ಹೊರ ವಿನ್ಯಾಸದಲ್ಲಿಯು ನೋಡಲು ಆಕರ್ಷಿತ ವಾಗಿದೆ. ಇದು ಹೈ ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ (High Speed Manual Gearbox) ಪ್ರಮಾಣಿತ ಫಿಟ್‌ಮೆಂಟ್‌ನಂತೆ ಬರಲಿದ್ದು ಆರಾಮದಾಯಕ ಅನುಭವ ನೀಡಲಿದೆ. ಹಾಗಾಗಿ ಮಾರುತಿ ಬಲೆನೊ ರಿಯಾಯಿತಿ ದರದಲ್ಲಿ ಲಭ್ಯವಿದ್ದು ಖರೀದಿ ಮಾಡಲು ಉತ್ತಮ‌ ಅವಕಾಶ ಆಗಿದೆ.

advertisement

Leave A Reply

Your email address will not be published.