Karnataka Times
Trending Stories, Viral News, Gossips & Everything in Kannada

Property: ಹೊಸದಾಗಿ ಆಸ್ತಿ ಖರೀದಿ ಹಾಗೂ ಮಾರಾಟ ಮಾಡೋರಿಗೆ ಹೊಸ ನಿಯಮ ಅನ್ವಯ!

advertisement

ಇಂದು ಆಸ್ತಿ (Property) ಮುಖ್ಯ ಹೂಡಿಕೆಯ ಭಾಗವಾಗಿ ಬಿಟ್ಟಿದೆ, ಮುಂದಿನ ಭವಿಷ್ಯ ಕ್ಕಾಗಿ ಆಸ್ತಿ ಮೂಲಕವು ಹೂಡಿಕೆ ಮಾಡುವುದು ಬಹಳ ಮುಖ್ಯ. ಇಂದು ಆಸ್ತಿ ಖರೀದಿ (Property Purchase), ಮಾರಾಟ ಇತ್ಯಾದಿ ವಹಿವಾಟು ಗಳು ಹೆಚ್ಚಾಗಿದ್ದು ನಗರ ಪ್ರದೇಶದಲ್ಲಿರುವ ಜಾಗಗಳಿಗೆ ಹೆಚ್ಚು ಬೇಡಿಕೆ ಇದೆ. ಹಾಗಾಗಿ ಕೊಂಡುಕೊಳ್ಳುವವರ ಸಂಖ್ಯೆ ಕೂಡ ಬಹಳಷ್ಟು ಹೆಚ್ಚಾಗಿದೆ. ನಿವೇಶನ, ಅಥವಾ ಆಸ್ತಿ ಖರೀದಿ ಮಾಡುವುದೆಂದರೆ ಹೆಚ್ಚು ಹಣ ವ್ಯಯಿಸಿ‌ ಖರೀದಿ ಮಾಡ ಬೇಕಾಗುತ್ತದೆ. ಆದರೆ ಆಸ್ತಿ ಖರೀದಿ ವೇಳೆ ಸಾಕಷ್ಟು ಜಾಗ್ರತೆ ವಹಿಸುವುದು ಅಷ್ಟೇ ಮುಖ್ಯ, ಆಸ್ತಿ‌ ಖರೀದಿ ಮಾಡುವ ಮುನ್ನ ಆ ಜಾಗದ ದಾಖಲೆಗಳನ್ನು ಸರಿಯಾಗಿ ಪರಿಶೀಲನೆ ಮಾಡಿ‌ ಖರೀದಿ ಮಾಡುವುದು ಮುಖ್ಯವಾಗುತ್ತದೆ.

ಮಾಹಿತಿ ನೀಡಬೇಕು:

ಆದಾಯ ತೆರಿಗೆ ರಿಟರ್ನ್ ಫೈಲಿಂಗ್ (Income Tax Return Filing) ಸೀಸನ್ ನಡೆಯುತ್ತಿದ್ದು ನೀವು ಆಸ್ತಿ ಖರೀದಿ ಮಾಡುವ ಮುನ್ನ‌ ಈ ವಿಚಾರ ತಿಳಿಯಲೇ ಬೇಕು. ಐ ಟಿ ಅರ್ ಫೈಲ್ (ITR File) ಮಾಡುವಾಗ ನೀವು ಯಾವ ಮೂಲಗಳಿಂದ ಹಣವನ್ನು ಗಳಿಸಿದ್ದೀರಿ ಮತ್ತು ಎಲ್ಲಿ ಹೂಡಿಕೆ ಮಾಡಿದ್ದೀರಿ ಈ ಮಾಹಿತಿ ನೀಡಲೇಬೇಕು.

 

 

advertisement

Income Tax ಇಲಾಖೆಯಿಂದ ನೋಟಿಸ್:

ತೆರಿಗೆ ರಿಟರ್ನ್ ಫೈಲಿಂಗ್‌ (Income Tax Return Filing) ನಲ್ಲಿ ನೀವು ಸರಿಯಾದ ಮಾಹಿತಿಯನ್ನು ನೀಡದಿದ್ದರೆ, ಆದಾಯ ತೆರಿಗೆ ಇಲಾಖೆ (Income Tax Department) ನಿಮಗೆ ನೋಟಿಸ್ ನೀಡುತ್ತದೆ. ಇನ್ನೂ ನೀವು ಆಸ್ತಿಯನ್ನು ಖರೀದಿಸಲು ಮತ್ತು ಮಾರಾಟ ಮಾಡಲು ಬಯಸಿದ್ದರೆ, ರೂ 30 ಲಕ್ಷದ ಮಿತಿಯನ್ನು ನೆನಪಿನಲ್ಲಿಡಿ. ಅದೇ ರೀತಿ ವಿದೇಶಿ ಕರೆನ್ಸಿ (Foreign Currency) ಯನ್ನು ಮಾರಾಟ ಮಾಡಿದರೆ 10 ಲಕ್ಷ ರೂ.ಗಳ ಮಿತಿ ಇರಬೇಕಾಗುತ್ತದೆ, ಈ ಬಗ್ಗೆಯು ನೀವು ಗಮನ ಹರಿಸಬೇಕು.

ಈ ನಿಯಮ ಪಾಲಿಸಿ:

ಆಸ್ತಿ (Property) ಮಾರಾಟ ಮಾಡುವ ಅಥವಾ ಗ್ರಾಹಕರು 30 ಲಕ್ಷಕ್ಕಿಂತ ಹೆಚ್ಚಿನ ಮೌಲ್ಯದ ಯಾವುದೇ ಆಸ್ತಿ ಖರೀದಿಸಿದರೆ ಅಥವಾ ಮಾರಾಟ ಮಾಡಿದರೆ, ಆಸ್ತಿ ರಿಜಿಸ್ಟ್ರಾರ್ (Property Registrar) ಮತ್ತು ಸಬ್ ರಿಜಿಸ್ಟ್ರಾರ್‌ (Sub Registrar) ಗೆ ಮಾಹಿತಿ ನೀಡುವುದು ಕಡ್ಡಾಯ.

  • ಆಸ್ತಿ ರಿಜಿಸ್ಟ್ರಾರ್‌ನಲ್ಲಿ ನೀವು ಕಡ್ಡಾಯ ವಾಗಿ ನೋಂದಾಯಿಸಬೇಕು.
  • ಒಂದು ಹಣಕಾಸು ವರ್ಷದಲ್ಲಿ ನಿಮ್ಮ ಉಳಿತಾಯ ಖಾತೆ (Saving Account) ಯಲ್ಲಿ 10 ಲಕ್ಷ ರೂ.ಗಿಂತ ಹೆಚ್ಚಿನ ವಹಿವಾಟು ನಡೆಸಿದರೆ, ಆಗ ನೀವು ಐಟಿ ಇಲಾಖೆಗೆ ಹಣದ ಮೂಲ ಮತ್ತು‌ ದಾಖಲೆ ನೀಡಬೇಕಾಗುತ್ತದೆ.
  • ಹಾಗೆಯೇ ಒಂದು ವರ್ಷದಲ್ಲಿ ಚಾಲ್ತಿ ಖಾತೆಯಲ್ಲಿ 50 ಲಕ್ಷ ರೂ.ಗಿಂತ ಹೆಚ್ಚಿನ ವಹಿವಾಟು ನಡೆದರೆ ಈ ಮಾಹಿತಿಯನ್ನೂ ಆದಾಯ ತೆರಿಗೆ ಇಲಾಖೆಗೆ ಮಾಹಿತಿ‌ ನೀಡಬೇಕಾಗುತ್ತದೆ.
  • ಒಂದು ಹಣಕಾಸು ವರ್ಷದಲ್ಲಿ ಮ್ಯೂಚುವಲ್ ಫಂಡ್, ಸ್ಟಾಕ್, ಬಾಂಡ್ ಇತ್ಯಾದಿಯಲ್ಲಿ 10 ಲಕ್ಷ ರೂ.ಗಿಂತ ಹೆಚ್ಚಿನ ಹೂಡಿಕೆಯನ್ನು ಹಣದ ಮೂಲಕ ಇಟ್ಟರೆ ಅದರ ಬಗ್ಗೆ ಮಾಹಿತಿ ನೀಡಿ.

advertisement

Leave A Reply

Your email address will not be published.