Karnataka Times
Trending Stories, Viral News, Gossips & Everything in Kannada

RTO New Rules: ವಾಹನ ಚಲಾಯಿಸುವವರಿಗೆ ಹೊಸ ರೂಲ್ಸ್, ಈ ರೂಲ್ಸ್ ಬ್ರೇಕ್ ಮಾಡಿದ್ರೆ 11,000 ದಂಡ!

advertisement

ರಸ್ತೆಯಲ್ಲಿ ವಾಹನ ಚಲಾಯಿಸಬೇಕು ಅಂದ್ರೆ ಚಾಲನಾ ಪರವಾನಿಗೆ (Driving License) ಹೊಂದಿರುವುದು ಮಾತ್ರವಲ್ಲ ರಸ್ತೆ ನಿಯಮಗಳನ್ನು ಕೂಡ ಪಾಲಿಸಬೇಕು. ಒಂದುವೇಳೆ ರಸ್ತೆ ನಿಯಮಗಳನ್ನು ಉಲ್ಲಂಘಿಸಿದರೆ ಅದಕ್ಕೆ ದಂಡ (Fine) ಹಾಗೂ ಶಿಕ್ಷೆಯನ್ನು ಸರ್ಕಾರ ವಿಧಿಸುತ್ತದೆ. ಹಾಗಾಗಿ ಸರಿಯಾಗಿ ಎಲ್ಲ ರಸ್ತೆಯ ನಿಯಮಗಳನ್ನು ಕೂಡ ತಿಳಿದುಕೊಂಡಿರಬೇಕು.

ಈ ನಿಯಮ ಉಲ್ಲಂಘನೆಗೆ 11,000 ರೂ. ದಂಡ!

 

 

ಎಲ್ಲರಿಗೂ ತಿಳಿದಿರುವಂತೆ ಮಧ್ಯ ಸೇವಿಸಿ ವಾಹನ ಚಲಾಯಿಸುವುದು ಅಪರಾಧ. ಅದೇ ರೀತಿ ಹೆಲ್ಮೆಟ್ (Helmet) ಇಲ್ಲದೆಯೂ ಕೂಡ ದ್ವಿಚಕ್ರ ವಾಹನ (Two Wheeler) ವನ್ನು ಓಡಿಸಬಾರದು. ಇನ್ನು ಮದ್ಯ ಕುಡಿದು ಹೆಲ್ಮೆಟ್ ಕೂಡ ಧರಿಸದೆ ದ್ವಿಚಕ್ರ ವಾಹನ ಓಡಿಸುವ ತಪ್ಪು ಮಾಡಿದರೆ ಎರಡೆರಡು ತಪ್ಪಿಗೆ ದಂಡ ಪಾವತಿಸಬೇಕಾಗುತ್ತದೆ. ಇಂತಹ ಘಟನೆ ಒಂದು ಇತ್ತೀಚಿಗೆ ನಡೆದಿದೆ.

advertisement

ಆಲ್ಕೋಹಾಲ್ ಸೇವಿಸಿ ಹೆಲ್ಮೆಟ್ ಕೂಡ ಧರಿಸದೆ ಒಬ್ಬ ವ್ಯಕ್ತಿ ಟೂ ವೀಲರ್ ಚಲಾಯಿಸುತ್ತಿದ್ದ. ನ್ಯೂಟೌನ್ ನ ಪೊಲೀಸ್ ಠಾಣೆ (Newtown Police Station) ವ್ಯಾಪ್ತಿಯಲ್ಲಿ ಬರುವ ಜಯಶ್ರೀ ವೃತ್ತದ ಬಳಿ ಠಾಣಾಧಿಕಾರಿ ರಮೇಶ್ ಅವರು ವಾಹನ ತಪಾಸಣೆಯಲ್ಲಿ ತೊಡಗಿರುವ ಸಂದರ್ಭದಲ್ಲಿ ಮದ್ಯಪಾನ ಮಾಡಿ ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸುತ್ತಿದ್ದ ಸವಾರ ಸಿಕ್ಕಿಹಾಕಿಕೊಂಡಿದ್ದಾನೆ.

ಮದ್ಯಪಾನ ಮಾಡಿರುವುದು ಮಾತ್ರವಲ್ಲದೆ ಆತ ಹೆಲ್ಮೆಟ್ ಕೂಡ ಧರಿಸದೆ ವಾಹನ ಚಲಾಯಿಸುತ್ತಿದ್ದ ಈ ಮೂಲಕ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದಾನೆ ಎಂದು ಠಾಣಾಧಿಕಾರಿ ರಮೇಶ್ ಅವರು ಸವಾರನನ್ನು, ಗಾಡಿಯನ್ನು ವಶಕ್ಕೆ ತೆಗೆದುಕೊಂಡಿದ್ದರು. ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಆತನ ಆರೋಪದ ಪಟ್ಟಿ ಸಲ್ಲಿಕೆ ಮಾಡಲಾಗಿದೆ.

ನ್ಯಾಯಾಲಯದ ತೀರ್ಮಾನ ಏನು?

ಮದ್ಯಪಾನ ಮಾಡಿ ಹೆಲ್ಮೆಟ್ ಕೂಡ ಅಂದರೆ ಸಂಚಾರಿ ನಿಯಮವನ್ನ ಉಲ್ಲಂಘಿಸಿದ ಈ ವ್ಯಕ್ತಿಗೆ ವಿಚಾರಣೆ ನಡೆಸಿರುವ ನ್ಯಾಯಾಲಯ 11,000 ದಂಡ ವಿಧಿಸಿದೆ. ಇಷ್ಟು ಮತದ ಹಣವನ್ನು ಪಾವತಿ ಮಾಡಿದರೆ ಮಾತ್ರ ಆತ ತನ್ನ ವಾಹನವನ್ನು ಪೊಲೀಸ್ ಠಾಣೆಯಿಂದ ಹಿಂಪಡೆಬಹುದು. ಒಂದು ವೇಳೆ ದಂಡಪಾವತಿ ಮಾಡದೆ ಇದ್ದಲ್ಲಿ ಶಿಕ್ಷೆಗೂ ಗುರಿಯಾಗ ಬೇಕಾಗಬಹುದು. ಈ ಬಾರಿ ಮೊತ್ತದ ದಂಡ ವಿಧಿಸಿರುವುದರಿಂದ ಇನ್ನಷ್ಟು ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡುವವರಿಗೆ ಪಾಠ ಕಲಿಸಿದಂತೆ ಆಗಬಹುದು.

advertisement

Leave A Reply

Your email address will not be published.