Karnataka Times
Trending Stories, Viral News, Gossips & Everything in Kannada

PM Matru Vandana Yojana: ಗರ್ಭಿಣಿ ಮತ್ತು ಬಾಣಂತಿ ಮಹಿಳೆಯರಿಗೆ ಕೇಂದ್ರ ಸರಕಾರದಿಂದ ಗುಡ್ ನ್ಯೂಸ್

advertisement

ಇಂದು‌ ಮಹೀಳಾ ಪರವಾದ ಯೋಜನೆಗಳು ಹೆಚ್ಚು ಚಾಲ್ತಿಯಲ್ಲಿದ್ದು‌ಅರ್ಥಿಕ ಉತ್ತೇಕನ‌ಕ್ಕಾಗಿ ರಾಜ್ಯ ಮತ್ತು ಕೇಂದ್ರ ಸರಕಾರಗಳು ಹೆಚ್ಚು ಪ್ರೋತ್ಸಾಹ ವನ್ನು ಮಹೀಳೆಯರಿಗಾಗಿ ನೀಡುತ್ತಿದೆ, ಈಗಾಗಲೇ ರಾಜ್ಯದಲ್ಲಿ ಶಕ್ತಿ ಯೋಜನೆ (Shakti Yojana), ಗೃಹಲಕ್ಷ್ಮಿ ಯೋಜನೆ (Gruha Lakshmi Yojana) ಬಹಳಷ್ಟು ಸುದ್ದಿಯಲ್ಲಿದ್ದು ಇದೀಗ ಬಾಣಂತಿ ಮತ್ತು ಗರ್ಭಿಣಿ (Pregnant) ಮಹೀಳೆಯರಿಗೆ ಕೇಂದ್ರ ಸರಕಾರವು ಗುಡ್ ನ್ಯೂಸ್ ನೀಡಿದೆ.

PM Matru Vandana Yojana:

 

 

ಕೇಂದ್ರ ಸರಕಾರವು ಗರ್ಭಿಣಿ (Pregnant) ಮತ್ತು ಬಾಣಂತಿ ಮಹಿಳೆಯರಿಗೆ ಮಾತೃ ವಂದನಾ‌ ಯೋಜನೆ (PM Matru Vandana Yojana) ಯನ್ನು ಜಾರಿಗೆ ತಂದಿದ್ದು ಇದರ ಮೂಲಕ ಬಾಣಂತಿ ಮಹೀಳೆಯರು ಪೌಷ್ಠಿಕ ಆಹಾರ ಪಡೆಯಲು ಸಹಾಯಧನ ನೀಡಲಾಗುತ್ತದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೂಲಕ ಗರ್ಭಿಣಿ ಮತ್ತು ಬಾಣಂತಿ ಮಹಿಳೆಯರು ಈ ಯೋಜನೆ ಮೂಲಕ ಪೌಷ್ಠಿಕ ಆಹಾರ ಮೊತ್ತ ಪಡೆಯಬಹುದಾಗಿದೆ.

ಅರ್ಜಿ‌ ಆಹ್ವಾನ:

ಇದೀಗ ಈ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶ ಇದ್ದು ಈ ಯೋಜನೆಯ ಮೂಲಕ ಅರ್ಥಿಕ ಮೊತ್ತ ದೊರೆಯುತ್ತದೆ, ಪ್ರಸ್ತುತ ಮಾತೃ ವಂದನಾ ಯೋಜನೆ (Matru Vandana Yojana) ಯ ಮೂಲಕ ಎರಡು ಮಕ್ಕಳಿಗೆ ಈ ಯೋಜನೆಯ ಪ್ರಯೋಜನ ದೊರೆಯುತ್ತದೆ. ಮೊದಲನೇ ಮಗು ಹೆಣ್ಣಾಗಿದ್ದರೆ ರೂ .5000 ನೀಡಲಾಗುತ್ತದೆ, ಎರಡನೇ ಮಗುವು ಹೆಣ್ಣು ಆಗಿದ್ದರೆ ಒಂದೇ ಕಂತಿನಲ್ಲಿ ರೂ.6000 ನೀಡಲಾಗುತ್ತದೆ.

advertisement

ಹಣ ಬಿಡುಗಡೆ:

ಮಾತೃ ವಂದನಾ ಯೋಜನೆ (PM Matru Vandana Yojana) ಯು ಮೂರು ಕಂತುಗಳಲ್ಲಿ ಹಣ ಬಿಡುಗಡೆ ಯಾಗುತ್ತದೆ. ಗರ್ಭಿಣಿಯರಿಗೆ ಮೊದಲ ಕಂತಿನಡಿ 1000 ರೂ. ಎರಡನೇ ಕಂತಿನಡಿ 2 ಸಾವಿರ ರೂ. ಬರುತ್ತದೆ. ಮೂರನೇ ಕಂತಿನಲ್ಲಿ ಉಳಿದ 2 ಸಾವಿರ ರೂಪಾಯಿಯನ್ನು ಜಮೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸಿ:

ಈ ಯೋಜನೆಗೆ ಅರ್ಜಿ‌ ಸಲ್ಲಿಕೆ ಮಾಡಲು ಅವಕಾಶ ಇದ್ದು ಹೆಚ್ಚಿನ ಮಾಹಿತಿಗಾಗಿ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಪಡೆಯಬಹುದಾಗಿದೆ. ಅಥವಾ https://pmmvy.wed.gov.in ಲಿಂಕ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಇದೆ. ಪೌಷ್ಠಿಕ ಆಹಾರ ಪಡೆಯುವುದಕ್ಕಾಗಿ ಆಯ್ಕೆಯಾದ ಫಲಾನುವಿಗಳ ಆಧಾರ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ನೇರವಾಗಿ ಡಿಬಿಟಿ ಮೂಲಕ ಹಣ ಹಾಕಲಾಗುತ್ತದೆ.

ಇವರಿಗೆ ಆನ್ವಯಿಸುವುದಿಲ್ಲ:

ಈ ಯೋಜನೆಯು ಕೇಂದ್ರ ಮತ್ತು ರಾಜ್ಯ ಸರ್ಕಾರಿ ಉದ್ಯೋಗ ಮಾಡುವವರಿಗೆ ಈ ಯೋಜನೆ ದಿಗುವುದಿಲ್ಲ., ಅಂದರೆ ಮಹಿಳೆಯರಿಗೆ ಸರ್ಕಾರಿ ಕೆಲಸ ಇದ್ದರೆ ಯೋಜನೆಯ ಫಲ ಇಲ್ಲ.

advertisement

Leave A Reply

Your email address will not be published.