Karnataka Times
Trending Stories, Viral News, Gossips & Everything in Kannada

MG Motor: ಎಂಜಿ ಕಂಪನಿಯ ಈ ಕಾರುಗಳ ಮೇಲೆ 1.5 ಲಕ್ಷದವರೆಗೆ ಭರ್ಜರಿ ರಿಯಾಯಿತಿ, ಖರೀದಿಗೆ ಮುಗಿಬಿದ್ದ ಜನ!

advertisement

ಸಾಮಾನ್ಯವಾಗಿ ವಾಹನಗಳನ್ನು ಖರೀದಿಸಬೇಕೆಂದುಕೊಂಡವರು ಮೊದಲು ನೋಡುವುದೇ ವಾಹನಗಳ ಮೇಲೆ ರಿಯಾಯಿತಿ ಇದೆಯೇ ಎಂದು. ಕೆಲವರು ಕಂಪೆನಿಗಳು ವಾಹನಗಳ ಮೇಲೆ ರಿಯಾಯಿತಿಯನ್ನು ಘೋಷಿಸುವವರೆಗೂ ತಾಳ್ಮೆಯಿಂದ ಕಾಯುತ್ತಾರೆ. ಎಂಜಿ ಮೋಟಾರ್ (MG Motor) ಕಂಪನಿಯೂ, ತನ್ನ ವಿವಿಧ ಮಾದರಿಗಳ ಮೂಲಕ ದೇಶಾದ್ಯಂತ ಭಾರೀ ಜನಪ್ರಿಯತೆಯನ್ನು ಗಳಿಸಿದ್ದು, ಇದೀಗ ಡಿಸೆಂಬರ್ ಫೆಸ್ಟ್‌ (December Fest) ನಲ್ಲಿ ಗಣನೀಯ ರಿಯಾಯಿತಿಗಳನ್ನು ಘೋಷಿಸಿವೆ. ಅಂದಹಾಗೆ, ಕಂಪನಿಯೂ ಕಾಮೆಟ್ EV ಮತ್ತು ZS EV SUV ಸೇರಿದಂತೆ ಇನ್ನಿತ್ತರ ಕಾರುಗಳ ಮೇಲೆ ಡಿಸೆಂಬರ್ 31 ರವರೆಗೆ ರಿಯಾಯಿತಿಗಳನ್ನು ಘೋಷಿಸಿವೆ. ಹಾಗಾದರೆ ಯಾವೆಲ್ಲಾ ವಾಹನಗಳ ಎಷ್ಟೆಲ್ಲಾ ರಿಯಾಯಿತಿಯಿದೆ ಎನ್ನುವುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳಿ.

MG ಕಾಮೆಟ್ EV

ಈ ವರ್ಷದ ಆರಂಭದಲ್ಲಿ ಮಾರುಕಟ್ಟೆಗೆ ಬಂದ ಕಾಮೆಟ್ ಇವಿ (Comet EV) ಯೂ 65,000 ರೂವರೆಗೆ ರಿಯಾಯಿತಿಯೊಂದಿಗೆ ಲಭ್ಯವಿದೆ. ಈ ಕಾರು 17.3kWh ಬ್ಯಾಟರಿಯಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ. ಪ್ರತಿ ಚಾರ್ಜ್‌ಗೆ 230 ಕಿಮೀ ನೀಡುವುದರ ಜೊತೆಗೆ 10.25-ಇಂಚಿನ ಇನ್ಸ್ಟ್ರುಮೆಂಟ್ ಕ್ಲಸ್ಟರ್ (Instrument Cluster), ಸಮಾನ ಗಾತ್ರದ ಇನ್ಫೋಟೈನ್ಮಂಟ್ ಸಿಸ್ಟಮ್ ಮತ್ತು ವಿವಿಧ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಆಕರ್ಷಕ ನೋಟಗಳಿಂದ ಗಮನ ಸೆಳೆಯುತ್ತಿದೆ.

advertisement

ಎಂಜಿ ಹೆಕ್ಟರ್ (MG Hector)

ಭಾರತದಲ್ಲಿ ಜನಪ್ರಿಯ MG ಮಾಡೆಲ್ ಆಗಿರುವ ಈ Hector ಮೇಲೆ ಇದೇ ಡಿಸೆಂಬರ್‌ ಅಂತ್ಯದವರೆಗೆ 1 ಲಕ್ಷದವರೆಗೆ ರಿಯಾಯಿತಿಗಳಿಗೆ ಘೋಷಿಸಿವೆ. ಗ್ರಾಹಕರು 50,000 ರೂ ವರೆಗಿನ ರಿಯಾಯಿತಿಗಳೊಂದಿಗೆ ಮತ್ತು ಹೆಚ್ಚುವರಿಯಾಗಿ 50,000 ರೂ ವಿನಿಮಯ ಬೋನಸ್ ಅನ್ನು ಪಡೆಯಬಹುದು. SUV 1.5- ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಮತ್ತು 2.0- ಲೀಟರ್ ಡೀಸೆಲ್ ರೂಪಾಂತರದೊಂದಿಗೆ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಲಭ್ಯವಿದೆ.

MG ಗ್ಲೋಸ್ಟರ್, ಆಸ್ಟರ್ ಮತ್ತು ZS EV

ಎಂಜಿ ಗ್ಲೋಸ್ಟರ್ (MG Gloster) ಹಾಗೂ ಆಸ್ಟರ್‌ (MG Astor) ಮೇಲೆ 1.50 ಲಕ್ಷದವರೆಗೆ ರಿಯಾಯಿತಿಗಳನ್ನು ನೀಡಲಾಗುತ್ತಿದ್ದು, ಇದರೊಂದಿಗೆ ಹೆಚ್ಚುವರಿಯಾಗಿ 50,000 ರೂನಷ್ಟು ವಿನಿಮಯ ಬೋನಸ್ ಅನ್ನು ನೀಡುತ್ತಿದೆ. ಅದಲ್ಲದೇ MG ಯ ಮತ್ತೊಂದು ಎಲೆಕ್ಟಿಕ್ ಕಾರ್ ZS EV (MG ZS EV) ಮೇಲೆ 50,000 ರೂ ಎಕ್ಸ್ ಚೇಂಜ್ ಬೋನಸ್ ಲಭ್ಯವಿದ್ದು, ಗ್ರಾಹಕರು ಈ ಆಫರ್ ನಲ್ಲಿ 1.50 ಲಕ್ಷ ರೂ ಮೌಲ್ಯದ ಪ್ರಯೋಜನಗಳನ್ನು ಪಡೆಯಬಹುದಾಗಿದೆ.

advertisement

Leave A Reply

Your email address will not be published.