Karnataka Times
Trending Stories, Viral News, Gossips & Everything in Kannada

Old Smartphone: ಹಳೆ ಸ್ಮಾರ್ಟ್ ಫೋನ್ ಮಾರಾಟ ಮಾಡಲು ಈ ಸರಳ ಉಪಾಯ ಅನುಸರಿಸಿ ಅಧಿಕ ಲಾಭ ಪಡೆಯಿರಿ.

advertisement

ಇಂದು ಸ್ಮಾರ್ಟ್ ಫೋನ್ (Smartphone) ಬಳಸುವವರ ಪ್ರಮಾಣ ಅಧಿಕವಾಗುತ್ತಿದೆ ಹಾಗಾಗಿ ಹೊಸ ಹೊಸ ಮಾಡಲ್ ಫೋನ್ ಕೂಡ ಮಾರುಕಟ್ಟೆಯಲ್ಲಿ ರಾರಾಜಿಸುತ್ತಿದೆ. ಮಾರುಕಟ್ಟೆಯಲ್ಲಿ ಅತೀ ಅಗ್ಗದ ದರಕ್ಕೆ ಲಭ್ಯವಾಗುವ ಸ್ಮಾರ್ಟ್ ಫೋನ್ ಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಇದ್ದ ಫೋನ್ ಅನ್ನು ಬದಿಗೆ ಸರಿಸಿ ಹೊಸ ಫೋನ್ (New Smartphone) ಖರೀದಿ ಮಾಡುತ್ತಾರೆ ಆದರೆ ಹಳೆ ಫೋನ್ (Old Smartphone) ಏನು ಮಾಡುವುದು ಎಂದು ತಿಳಿಯದೇ ಒಂದೋ ಬಳಸದೇ ಹಾಗೇ ಬಿಡ್ತಾರೆ ಇಲ್ಲವೇ ಕಡಿಮೆ ಬೆಲೆಗೆ ಮಾರಾಟ ಮಾಡಿ ಬಿಡುತ್ತಾರೆ. ಆದರೆ ನಾವಿಂದು ಹೇಳುವ ಸರಳ ಕ್ರಮ ನೀವು ಅನುಸರಿಸಿದರೆ ನಿಮಗೆ ನಷ್ಟದ ಪ್ರಮೇಯವೇ ಬರಲಾರದು.

ಆನ್ಲೈನ್ ವೇದಿಕೆ:

ನಿಮ್ಮ ಹಳೆ ಮೊಬೈಲ್ (Old Smartphone) ಉತ್ತಮ ಸ್ಥಿತಿಯಲ್ಲಿದ್ದು ಅದರ ಕಂಪೆನಿ ಚೆನ್ನಾಗಿದ್ದರೆ ಅಂಗಡಿ ಅಲೆಯುವ ಪ್ರಮೇಯ ಬರದು ಬದಲಿಗೆ ನೀವು ಅದನ್ನು ಅತ್ಯುತ್ತಮ ಬೆಲೆಗೆ ಸುಲಭವಾಗಿ ಮಾರಾಟ ಮಾಡಬಹುದಾಗಿದೆ. ಅದಕ್ಕಾಗಿ ನೀವು ಆನ್ಲೈನ್ ಮಾರುಕಟ್ಟೆ ಕ್ಷೇತ್ರವಾಗಿ ಬಳಸಿ ಅತ್ಯುತ್ತಮ ಬೆಲೆಗೆ ನಿಮ್ಮ ಹಳೆ ಸ್ಮಾರ್ಟ್ ಫೋನ್ ಅನ್ನು ಮಾರಾಟ ಮಾಡಬಹುದು. ಹಾಗಾಗಿ ನಿಮಗೆ ಫ್ರೆಂಡ್ಲಿ ಆಗಿ ಉಪಯುಕ್ತ ಆಗಲಿರುವ ಆನ್ಲೈನ್ ಫ್ಲ್ಯಾಟ್ ಫಾರ್ಮ್ (Online Platform) ಬಗ್ಗೆ ನಾವಿಂದು ತಿಳಿಸಲಿದ್ದೇವೆ.

 

advertisement

 

ಈ ಮಾರುಕಟ್ಟೆ ಬಳಸಬಹುದು:

  • ಕ್ಯಾಶಿಫೈ (Cashify) ಈ ಒಂದು ವೆಬ್ಸೈಟ್ ನಲ್ಲಿ ಉತ್ತಮ ಬೆಲೆಗೆ ಸ್ಮಾರ್ಟ್ ಫೋನ್ ಅನ್ನು ಮಾರಾಟ ಮಾಡಬಹುದು. ಇದು ಹೆಚ್ಚು ಸುರಕ್ಷಿತ ಮತ್ತು ಸರಳವಾದ ವಿಧಾನವಾಗಿದೆ.
  • ಕ್ಯಾಶಿಫೈ ಅನ್ನೊ ಆನ್ಲೈನ್ ಪ್ಲ್ಯಾಟ್ ಫಾರ್ಮ್ (Online Platform) ಮೂಲಕ ಮೊಬೈಲ್ ಮಾರಾಟ ಮಾಡಬಹುದು. ಇದರಲ್ಲಿ ಉಚಿತ ಪಿಕಪ್ ಸೌಲಭ್ಯ ಸಹ ಇದೆ.
  • ಅಮೇಜಾನ್ (Amazon) ಮತ್ತು ಫ್ಲಿಪ್ ಕಾರ್ಟ್ (Flipkart) ನಲ್ಲಿ ಕೂಡ ನಿಮ್ಮ ಹಳೆ ಫೋನ್ (Old Smartphone) ಅನ್ನು ಬಹಳ ಸುಲಭವಾಗಿ ಸೇಲ್ ಮಾಡಬಹುದು. ನಿಮ್ಮ ಮೊಬೈಲ್ ಸ್ಥಿತಿ ಪರಿಶೀಲಿಸಿ ಬ್ರ್ಯಾಂಡ್, ಮಾಡೆಲ್ ಎಲ್ಲ ಪರಿಗಣಿಸಿ ಸ್ಮಾರ್ಟ್ ಫೋನ್ ಅನ್ನು ಖರೀದಿ ಮಾಡುತ್ತಾರೆ.
  • ಎಲೆಕ್ಟ್ರಾನಿಕ್ ಮತ್ತು ಇತರ ವಸ್ತುಗಳ ಮಾರಾಟದಲ್ಲಿ ಅಗ್ರಗಣ್ಯವಾಗಿರುವ Budli.in ನಲ್ಲಿ ನೀವು ನಿಮ್ಮ ಸೆಕೆಂಡ್ ಹ್ಯಾಂಡ್ (Second Hand) ಸೆಟ್ ಆಗಿ ಮೊಬೈಲ್ ಮಾರಾಟ ಮಾಡಬಹುದಾಗಿದೆ. ಉಚಿತ ಪಿಕಪ್ ಸೇವೆ ಸಹ ಇದರಲ್ಲಿ ಇರಲಿದೆ.
  • OLX ನಲ್ಲಿ ನೀವು ಮಾರಾಟ ಮಾಡಬಹುದು. ಇಂದು ಸೆಕೆಂಡ್ ಹ್ಯಾಂಡ್ ಸೇಲ್ ನಲ್ಲಿ ಒಎಲ್ ಎಕ್ಸ್ ಸೇಲ್ ತುಂಬಾ ಅದ್ಭುತವಾಗಿದ್ದು ನಿಮಗೆ ಉತ್ತಮ ಆಯ್ಕೆಯನ್ನು ನೀಡಲಿದೆ. ಇದರಲ್ಲಿ ಜಾಹಿರಾತಿನ ವಿಧಾನ ಸರಳವಾಗಿದ್ದು ಎಲ್ಲರೂ ಆಕರ್ಷಿಸುವಂತೆ ಇದರಲ್ಲಿ ಪ್ರಮೋಟ್ ಮಾಡಲಾಗುವುದು.
  • ಕ್ವಿಕ್ಕರ್ (Quikr) ಮೂಲ ಸುಲಭ ವಿಧಾನದಲ್ಲಿ ಆಕರ್ಷಕ ಕ್ಯಾಪ್ಶನ್ ಮೂಲಕ ಗ್ರಾಹಕರನ್ನು ಸೆಳೆಯಬಹುದಾಗಿದೆ. ಇದರಲ್ಲಿ ಸುರಕ್ಷಿತ ಪಾವತಿ ಗೇಟ್ ವೇ ಕೂಡ ಇದ್ದು ನಿಮಗೆ ಹಣ ಸುಲಭಕ್ಕೆ ವರ್ಗಾವಣೆ ಮಾಡಲು ಬಹಳ ಸಹಕಾರಿ ಆಗಲಿದೆ. ಈ ಎಲ್ಲ ಆನ್ಲೈನ್ ಮಾರುಕಟ್ಟೆ ಮೂಲಕ ನಿಮ್ಮ ಹಳೆ ಫೋನ್ ಅನ್ನು ಸುಲಭವಾಗಿ ಮಾರಾಟ ಮಾಡಬಹುದಾಗಿದೆ.

advertisement

Leave A Reply

Your email address will not be published.