Karnataka Times
Trending Stories, Viral News, Gossips & Everything in Kannada

Nitin Gadkari: ಡೀಸೆಲ್ ವಾಹನಗಳ ಮೇಲೆ ಟ್ಯಾಕ್ಸ್ ಹೆಚ್ಚಳ, ಸ್ಪಷ್ಟನೆ ನೀಡಿದ ನಿತಿನ್ ಗಡ್ಕರಿ.

advertisement

ಪರಿಸರಕ್ಕೆ ಹೆಚ್ಚು ಮಾರಕ ಆಗಿರುವ ಡೀಸೆಲ್ ಇಂಜಿನ್ ಗಳ ಬಳಕೆಯನ್ನು ಹೇಗೆ ಕಡಿಮೆ ಮಾಡುವುದು ಎಂದು ಯೋಚಿಸಿದಾಗ ಇಂತಹ ವಾಹನಗಳ ಮೇಲೆ ಹೆಚ್ಚುವರಿ ತೆರಿಗೆಯನ್ನು ಹೇರಿದರೆ ಜನರು ಅದನ್ನ ಬಳಸುವುದನ್ನು ಕಮ್ಮಿ ಮಾಡುತ್ತಾರೆ ಎಂಬ ಆಶಯದೊಂದಿಗೆ ಡೀಸೆಲ್ ವಾಹನಗಳ ಮೇಲೆ ಹತ್ತು ಶೇಕಡಾ ಹೆಚ್ಚು ತೆರಿಗೆಯನ್ನು ವಿಧಿಸುವುದಾಗಿ ನಿತಿನ್ ಗಡ್ಕರಿ ಹೇಳಿದ್ದರು. ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮಾನುಫಾಕ್ಚರರ್ಸ್ (Society Of Indian Automobile Manufactures) ನ ವಾರ್ಷಿಕ ಸಮ್ಮೇಳನದಲ್ಲಿ ಮಾತನಾಡುವಾಗ ಗಡ್ಕರಿ ಈ ಪ್ರಸ್ತಾವನೆಯನ್ನು ಮಾಡಿದ್ದರು. ಆದರೆ ವಾಹನ ತಯಾರಕರು ಮತ್ತು ಸಾರ್ವಜನಿಕ ವಲಯದಲ್ಲಿ ಕಂಡುಬಂದ ಭಾರಿ ವಿರೋಧದ ಹಿನ್ನೆಲೆಯಲ್ಲಿ ಇಂತಹ ಯಾವುದೇ ಹೆಚ್ಚುವರಿ ತೆರಿಗೆ ವಿಧಿಸುವ ಯೋಜನೆ ಇಲ್ಲ ಎಂದು ನಿತಿನ್ ಗಡ್ಕರಿ ಸ್ಪಷ್ಟಪಡಿಸಿದ್ದಾರೆ.

ಡೀಸೆಲ್ ಎಮಿಷನ್ಸ್ ಯಾಕೆ ಹೆಚ್ಚು ಅಪಾಯಕಾರಿ ?

ಪೆಟ್ರೋಲ್ ಅಥವಾ ಗ್ಯಾಸ್ ಗೆ ಹೋಲಿಸಿದರೆ ಡೀಸೆಲ್ ವಾಹನಗಳು ಹೆಚ್ಚಿನ ಮಾಲಿನ್ಯವನ್ನು ಉಂಟು ಮಾಡುತ್ತವೆ. ಬಹಳಷ್ಟು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತವೆ. ಕೇವಲ ಇಷ್ಟೆ ಅಲ್ಲದೆ 2012ರ ವರ್ಲ್ಡ್ ಹೆಲ್ತ್ ಆರ್ಗನೈಜೇಷನ್ (World Health Organisation) ಡೀಸೆಲ್ ಎಂಜಿನ ನಿಂದ ಹೊರಬರುವ ಹೊಗೆ ಕಾರ್ಸಿನೋಜನಿಕ್ ಎಂದು ನಿರ್ಧರಿಸಿದೆ, ಅಂದರೆ ಇದರ ಅರ್ಥ ಕ್ಯಾನ್ಸರ್ ಕಾರಕ ಎಂದಾಗಿದೆ.

ಒಂದು ಡೀಸೆಲ್ ವಾಹನ ಹೊರಸುಸುವ ಮಾಲಿನ್ಯಕಾರಕಗಳು 24 ಪೆಟ್ರೋಲ್ ವಾಹನಗಳಿಗೆ ಅಥವಾ 40 ಸಿಎಂಜಿ ಚಾಲಿತ ವಾಹನಗಳಿಗೆ ಸಮಾನ ಎಂದು ವರದಿಗಳು ಹೇಳುತ್ತವೆ. ಇದಕ್ಕೆ ಕಾರಣ ಕಚ್ಚಾ ತೈಲವನ್ನು ಸಂಸ್ಕರಿಸಿ ವಿವಿಧ ಇಂಧನಗಳನ್ನು ಪಡೆಯುವಾಗ ಡೀಸೆಲ್ ಮೊದಲು ಬರುವ ಉಪ ಉತ್ಪನ್ನ ಆಗಿದ್ದು ಹೆಚ್ಚು ಮಾಲಿನ್ಯವನ್ನು ಹೊಂದಿರುತ್ತದೆ. ಡೀಸೆಲ್ ಗಿಂತ ಪೆಟ್ರೋಲ್ ಮತ್ತು ಸಿ.ಎನ್.ಜಿ ಹೆಚ್ಚು ಶುದ್ಧ ಆಗಿರುವ ಇಂಧನಗಳಾಗಿವೆ.

advertisement

ಈ ಎಲ್ಲಾ ಕಾರಣಗಳಿಂದ ಡೀಸೆಲ್ ವಾಹನಗಳ ಬಳಕೆಯನ್ನು ಕಡಿಮೆ ಮಾಡಲು ನಿತಿನ್ ಗಡ್ಕರಿ ತೆರಿಗೆ ಹೆಚ್ಚಳದ ಬಗ್ಗೆ ಮಾತನಾಡಿದ್ದರು. ಆದರೆ ಈಗ ಸಾರ್ವಜನಿಕರಲ್ಲಿ ಉಂಟಾದ ವಿರೋಧದಿಂದ ಸಂಸತ್ತಿನಲ್ಲಿ ಕೇಳಲಾದ ಲಿಖಿತ ಪ್ರಶ್ನೆಗೆ ಉತ್ತರ ನೀಡುವ ಸಮಯದಲ್ಲಿ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ಇಂತಹ ಯಾವುದೇ ಹೆಚ್ಚುವರಿ ತೆರಿಗೆ ವಿಧಿಸುವ ಯೋಜನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಭಾರತ ಜಗತ್ತಿನ ಮೂರನೇ ಅತಿ ದೊಡ್ಡ ವಾಹನ ಮಾರುಕಟ್ಟೆಯಾಗಿದೆ. ಇಲ್ಲಿ ಡೀಸೆಲ್ ಇಂಜಿನ್ (Diesel Engine)ನಿಂದ ಆಗುವ ಮಾಲಿನ್ಯ ಬಹಳಷ್ಟು ಹೆಚ್ಚಾಗಿದೆ. ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಯಲ್ಲಿ ಹೆಚ್ಚಳ ಕಂಡುಬಂದರೂ ಡೀಸೆಲ್ ವಾಹನಗಳ ಮೇಲಿನ ಬೇಡಿಕೆ ಹಾಗೆಯೇ ಇದೆ.

2027 ರಿಂದ ನಗರಗಳಲ್ಲಿ ಬ್ಯಾನ್ ಆಗಲಿವೆಯೇ ಡೀಸೆಲ್ ವಾಹನಗಳು ?

ಸರ್ಕಾರದ ಮುಂದೆ ಇರುವ ಇನ್ನೊಂದು ಪ್ರಸ್ತಾಪದಂತೆ 2027 ರಿಂದ ಒಂದು ಮಿಲಿಯನ್ ಗಿಂತಲೂ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳಲ್ಲಿ ಡೀಸೆಲ್ ಚಾಲಿತ ನಾಲ್ಕು ಚಕ್ರ ವಾಹನಗಳ ಮೇಲೆ ನಿಷೇಧ ಹೇರುವ ಪ್ರಸ್ತಾಪ ಸರ್ಕಾರದ ಮುಂದೆ ಇದೆ. ಇದೇ ಕಾರಣಕ್ಕಾಗಿ ಸರ್ಕಾರ ಹಂತ ಹಂತವಾಗಿ ಡೀಸೆಲ್ ವಾಹನಗಳ ಬಳಕೆಯನ್ನು ಕಡಿಮೆ ಮಾಡಲು ಯೋಜನೆಗಳನ್ನು ರೂಪಿಸುತ್ತಿದೆ.

advertisement

Leave A Reply

Your email address will not be published.