Karnataka Times
Trending Stories, Viral News, Gossips & Everything in Kannada

IT Return: ಐಟಿಆರ್ ರಿಟರ್ನ್ಸ್ ಸಲ್ಲಿಕೆ ಮಾಡದೆ ಇದ್ದರೆ ಎಷ್ಟು ದಂಡ ಪಾವತಿ ಮಾಡಬೇಕಾಗುತ್ತದೆ?

advertisement

ತೆರಿಗೆ ಪಾವತಿ (Tax Return) ದಾರರಿಗೆ ಪ್ರತೀ ವರ್ಷ ತೆರಿಗೆ ಕಡ್ಡಾಯವಾಗಿದ್ದು, ತಪ್ಪಿದಲ್ಲಿ ಶಿಕ್ಷೆ ಕೂಡ ವಿಧಿಸಲಾಗವುದು. 2023ರ ಅಂತಿಮ ಕಾಲಘಟ್ಟದಲ್ಲಿ ನಾವಿಂದು ಇದ್ದೇವೆ. ಹಾಗಿದ್ದರೂ ತೆರಿಗೆ ಕಾರ್ಯಗಳು ಇನ್ನು ಬಾಕಿ ಉಳಿದಿದ್ದು 2022-23ರ ಐಟಿ ರಿಟರ್ನ್ಸ್ ಅರ್ಜಿ ಸಲ್ಲಿಸಲು ಕೊನೆಯ ಅವಕಾಶವಾಗಿದೆ. ತೆರಿಗೆ ದಾರನು ಐಟಿಆರ್ (IT Return) ಸಲ್ಲಿಕೆ ಮಾಡದೇ ಇದ್ದರೆ ದಂಡ ಮತ್ತು ಬಡ್ಡಿ ಎರಡನ್ನು ವಿಧಿಸುವ ಸಾಧ್ಯತೆ ಇದ್ದು ಈ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನಾವಿಂದು ನೀಡಲಿದ್ದೇವೆ.

ನಿಯಮದಲ್ಲಿ ಇರೊದೇನು?

 

 

ತೆರಿಗೆದಾರನು ಸೆಕ್ಷನ್ 234 F ಪ್ರಕಾರ ತೆರಿಗೆದಾರ ತನ್ನ ಐಟಿಆರ್ (IT Return) ಅನ್ನು ಕೊನೆ ದಿನಾಂಕದ ನಂತರ ಸಲ್ಲಿಸಿದರೆ 5 ಸಾವಿರ ದಂಡ ವಿಧಿಸಲಾಗುತ್ತದೆ. ಅದೇ ರೀತಿ ತೆರಿಗೆದಾರರ ಆದಾಯವು 5 ಲಕ್ಷ ರೂಪಾಯಿಗಿಂತ ಮೀರಿರದಿದ್ದರೆ ಅವರಿಗೆ 1000 ರೂ. ವರೆಗೆ ದಂಡದ ಮೊತ್ತ ಇಳಿಕೆಯಾಗಲಿದೆ. ಹಾಗಾಗಿ ಪ್ರತಿಯೊಬ್ಬ ನಾಗರಿಕನು‌ ತೆರಿಗೆ ಪಾವತಿ ಮಾಡುವುದು ಕಡ್ಡಾಯ.

advertisement

ಬಡ್ಡಿ ವಿಧಿಸಬೇಕು:

ಐಟಿ ಆರ್ ಅನ್ನು ತಡವಾಗಿ ಸಲ್ಲಿಸಿದರೆ ಬಡ್ಡಿ ಸಹ ಕಟ್ಟಬೇಕಾಗುತ್ತದೆ. ಆದಾಯ ತೆರಿಗೆ ನಿಯಮದ ಪ್ರಕಾರ ತಡವಾಗಿ IT ರೆಟರ್ನ್ ಸಲ್ಲಿಸುವವರು ಸೆಕ್ಷನ್ 234 A ಅಡಿಯಲ್ಲಿ ಪಾವತಿ ಮಾಡದ ತೆರಿಗೆ ಮೊತ್ತದ ಮೇಲೆ 1% ಬಡ್ಡಿ ಪಾವತಿ ಮಾಡಬೇಕಾಗುವುದು.

ದಂಡ ಕಟ್ಟಬೇಕು:

ಡಿಸೆಂಬರ್ 31ರ ಒಳಗೆ ಐಟಿ ರಿಟರ್ನ್ (IT Return) ಮಾಡದೆ ಇದ್ದರೆ ದಂಡ (Fine) ಮತ್ತು ಬಡ್ಡಿ ಎರಡನ್ನು ಸಹ ವಿಧಿಸಲಾಗುತ್ತದೆ. ಅದು ತೆರಿಗೆದಾರರ ಮೇಲೆ ಆರ್ಥಿಕ ಪರಿಣಾಮ ಬೀರುವ ಸಾಧ್ಯತೆ ಇದೆ. ಅದೇ ರೀತಿ ಅವರು ವಿಳಂಬವಾಗಿ ದಂಡ ಕಟ್ಟಿದ್ದಷ್ಟು ತೆರಿಗೆ ರಿಟರ್ನ್ ಬೆನಿಫಿಟ್ ಪಡೆಯಲು ಸಾಧ್ಯ ವಾಗಲಾರದು.

ITR ಸಲ್ಲಿಸುವ ಅಂತಿಮ ದಿನಾಂಕ ಮುಗಿದರೆ ಹಣಕಾಸು ವರ್ಷಕ್ಕೆ ರಿಟರ್ನ್ ಸಲ್ಲಿಕೆ ಮಾಡಲು ಸಾಧ್ಯವಾಗಲಾರದು. ತುರ್ತು ಕಾರಣದಿಂದ ಐಟಿಆರ್ ಅನ್ನು ಸಲ್ಲಿಸಲು ಸಾಧ್ಯವಾಗದಿದ್ದರೆ ಸೆಕ್ಷನ್ 19 ರ ಅಡಿಯಲ್ಲಿ ವಿನಾಯಿತಿ ಸಹ ಸಿಗಲಿದೆ. ಆಗ ಇಲಾಖೆಗೆ ವಿಳಂಬದ ಕಾರಣಕ್ಕೆ ತಿಳಿಸುವ ಮೂಲಕ ITR ಸಲ್ಲಿಸಲು ಅವಕಾಶ ಕೋರಬಹುದು. 10,000 ದಂಡ, 1% ಬಡ್ಡಿ ದರ ವಿಧಿಸಲಾಗುವುದು. ಹಾಗಾಗಿ ITR ಸಲ್ಲಿಕೆ ಆಗದೇ ಇದ್ದರೆ ವಿವಿಧ ತೊಂದರೆ ಆಗುವ ಸಾಧ್ಯತೆ ಇದೆ. ಹಾಗಾಗಿ ಕೂಡಲೇ ಈ ಬಗ್ಗೆ ಎಚ್ಚೆತ್ತುಕೊಳ್ಳುವುದು ಅತ್ಯಗತ್ಯ.

advertisement

Leave A Reply

Your email address will not be published.