Karnataka Times
Trending Stories, Viral News, Gossips & Everything in Kannada

Gruha Lakshmi Yojana: ಕಾಂಗ್ರೆಸ್ ಸರ್ಕಾರಕ್ಕೆ ಹೊರೆಯಾಯ್ತಾ ಗೃಹಜ್ಯೋತಿ ಯೋಜನೆ? ಸತ್ಯ ಬಿಚ್ಚಿಟ್ಟ ಸಚಿವ ಕೆ.ಜಿ.ಜಾರ್ಜ್‌.

advertisement

ರಾಜ್ಯದಲ್ಲಿ ಸಿದ್ದರಾಮಯ್ಯ (Siddaramaiah) ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ (Congress Government) ವು ಅಧಿಕಾರಕ್ಕೆ ಬಂದು, ಈಗಾಗಲೇ ಹಲವು ಯೋಜನೆಗಳನ್ನು ಜಾರಿಗೆ ಬಂದಿವೆ. ರಾಜ್ಯದ ಜನರು ಈ ಪಂಚ ಗ್ಯಾರಂಟಿ ಯೋಜನೆಗಳ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ. ಆದರೆ ಇತ್ತ ಗೃಹಜ್ಯೋತಿ ಯೋಜನೆ (Gruha Lakshmi Yojana) ಯೂ ಕಾಂಗ್ರೆಸ್ ಸರ್ಕಾರಕ್ಕೆ ಹೊರೆಯಾಗಿದೆ ಎನ್ನುವುದು ಸ್ಪಷ್ಟವಾಗಿದೆ. ಹಾಗಾದ್ರೆ ಆ ಕುರಿತಾದ ಸಂಪೂರ್ಣ ಮಾಹಿತಿಯನ್ನು ತಿಳಿಯಲು ಈ ಲೇಖನವನ್ನು ಓದಿ.

 

 

ಯೋಜನೆಯ ಕುರಿತು ಸಚಿವ K. J. George ಏನು ಹೇಳಿದ್ರು?

 

advertisement

 

ಬೆಳಗಾವಿ ಅಧಿವೇಶನದ ವೇಳೆ ವಿಧಾನಪರಿಷತ್‌ನಲ್ಲಿ ಗೃಹ ಜ್ಯೋತಿ ಯೋಜನೆಗೆ ಸಂಬಂಧ ಪಟ್ಟಂತೆ ಕೇಳಿದ್ದ ಪ್ರಶ್ನೆಗೆ ಸಚಿವ ಕೆ.ಜಿ.ಜಾರ್ಜ್‌ (KJ George) ರವರು ಪ್ರತಿಕ್ರಿಯೆ ನೀಡಿದ್ದು, “ಗೃಹಜ್ಯೋತಿಯ ಅನುಷ್ಠಾನಕ್ಕಾಗಿ 2023-24ನೇ ಸಾಲಿಗೆ ಅಂದಾಜು 13,910 ಕೋಟಿ ರೂ.ಗಳ ಸಹಾಯಧನದ ಅವಶ್ಯಕತೆಯಿದೆ.

ಕಳೆದ ಜುಲೈ 2023ರ ವೇಳೆಗೆ 9 ಸಾವಿರ ಕೋಟಿ ರೂ ಗಳನ್ನ ಹಂಚಿಕೆ ಮಾಡಲಾಗಿದೆ. ಅದಲ್ಲದೇ, ಹೆಚ್ಚಿನ ಮೊತ್ತ ಸರ್ಕಾರದ ಬೊಕ್ಕಸಕ್ಕೆ ಹೊರೆಯಾದರೂ ಸಹ ಸಹಾಯಧನದ ರೂಪದಲ್ಲಿ ವಿದ್ಯುತ್‌ ಕಂಪನಿಗಳಿಗೆ ನೀಡಲಾಗುತ್ತಿದೆ” ಎಂದು ಹೇಳಿದ್ದಾರೆ.

advertisement

Leave A Reply

Your email address will not be published.