Karnataka Times
Trending Stories, Viral News, Gossips & Everything in Kannada

Electric Tiffin: ಜಸ್ಟ್ ಒಂದು ಕ್ಲಿಕ್ ನಲ್ಲಿ ಆಹಾರ ಬಿಸಿ ಮಾಡುವ ಎಲೆಕ್ಟ್ರಿಕ್ ಟಿಫನ್; ಆಫೀಸ್ ಗೆ ಕೊಂಡೊಯ್ಯೋಕೆ ಬೆಸ್ಟ್ ಆಯ್ಕೆ!

advertisement

ನಾವು ತಾಂತ್ರಿಕವಾಗಿ ಸಿಕ್ಕಾಪಟ್ಟೆ ಮುಂದುವರಿದಿದ್ದೇವೆ. ಅದರಲ್ಲೂ ಕೆಲವೊಂದು ವಿಚಾರಗಳಲ್ಲಿ ಊಹೆ ಮಾಡಲು ಸಾಧ್ಯವಾಗದೆ ಇರುವಷ್ಟು ಹೊಸ ವಿಚಾರಗಳನ್ನು ಕೂಡ ಒಪ್ಪಿಕೊಳ್ಳುತ್ತಿದ್ದೇವೆ. ಎಲೆಕ್ಟ್ರಿಕ್ ವಸ್ತುಗಳ ಬಳಕೆ ಎಷ್ಟರ ಮಟ್ಟಿಗೆ ಜಾಸ್ತಿಯಾಗಿದೆ ಎಂದರೆ ಅದು ನಮ್ಮ ಜೀವನದಲ್ಲಿ ಹಾಸು ಹೊಕ್ಕಾಗಿದೆ. ಕೆಲವು ಎಲೆಕ್ಟ್ರಿಕ್ ವಸ್ತುಗಳನ್ನ ನಾವು ಬಳಸದೆ ಇರಲು ಸಾಧ್ಯವೇ ಇಲ್ಲ. ದಿನನಿತ್ಯದ ಜೀವನದಲ್ಲಿ ಅವು ಬೇಕೇ ಬೇಕು. ಈಗ ಇನ್ನೊಂದಿಷ್ಟು ಸ್ಮಾರ್ಟ್ ಎಲೆಕ್ಟ್ರಿಕ್ ವಸ್ತುಗಳು ಕೂಡ ಬಿಡುಗಡೆ ಆಗಿದ್ದು, ಇದನ್ನ ನೀವು ಬಳಸಿಕೊಂಡು ನಿಮ್ಮ ದೈನಂದಿನ ಜೀವನದಲ್ಲಿ ಇನ್ನಷ್ಟು ಆನಂದವನ್ನು ಅನುಭವಿಸಬಹುದು.

Milton Smart Electric Tiffin:

ನೀವು ಆಫೀಸ್ಗೆ ಅಥವಾ ಕೆಲಸಕ್ಕೆ ಹೋಗುವಾಗ ಟಿಫನ್ ಬಾಕ್ಸ್ ತೆಗೆದುಕೊಂಡು ಹೋಗ್ತೀರಾ ಅಲ್ವಾ? ಆದರೆ ಬೆಳಿಗ್ಗೆ ಮಾಡಿರುವ ಟಿಫನ್ ಮಧ್ಯಾಹ್ನ ತಿನ್ನುವಷ್ಟರಲ್ಲಿ ತಣಿದು ಹೋಗಿರುತ್ತದೆ. ಯಾರಿಗಾದರೂ ಬೇಸರವೇ ಅದರಲ್ಲೂ ಈಗ ಚಳಿಗಾಲ ಬೇರೆ. ಮಧ್ಯಾಹ್ನದ ಸಮಯದಲ್ಲಿಯೂ ಬಿಸಿಬಿಸಿಯಾಗಿ ತಿನ್ನುವುದು ಎಷ್ಟು ಚೆನ್ನಾಗಿರುತ್ತೆ ಅಲ್ವಾ? ಇನ್ನು ಮುಂದೆ ಇದು ಕೇವಲ ಯೋಚನೆಯಾಗಿ ಉಳಿಯುವುದಿಲ್ಲ. ನೀವು ಕೂಡ ಈ ಸ್ಮಾರ್ಟ್ ಚಾಯ್ಸ್ ಮಾಡಬಹುದು.

ಹೌದು, ಜನಪ್ರಿಯ ಮೆಲ್ಟನ್ ಕಂಪನಿ ಸ್ಮಾರ್ಟ್ ಎಲೆಕ್ಟ್ರಿಕ್ ಟಿಫನ್ (Electric Tiffin) ಅನ್ನು ಬಿಡುಗಡೆ ಮಾಡಿದೆ. ಸಾಕಷ್ಟು ವೈಶಿಷ್ಟ್ಯತೆಗಳನ್ನು ಹೊಂದಿರುವ ಈ ಸ್ಮಾರ್ಟ್ ಟಿಫನ್ ಕ್ಷಣಮಾತ್ರದಲ್ಲಿ ನಿಮಗೆ ಆಹಾರವನ್ನು ಬಿಸಿ ಮಾಡಿಕೊಡುತ್ತದೆ. ಅತ್ಯಂತ ಕ್ಯೂಟ್ ಆಗಿರುವ ಒಂದು ಎಲೆಕ್ಟ್ರಿಕ್ ಟಿಫನ್ ಬಾಕ್ಸ್ ಇದು ಇದರಲ್ಲಿ ತಲಾ ಮೂರು ಮಿಲಿ ಮೂರು ಪೆಟ್ಟಿಗೆಗಳನ್ನು ಕೊಡಲಾಗಿದೆ ಇದರಲ್ಲಿ ನೀವು ಆಹಾರವನ್ನು ಮನೆಯಿಂದಲೇ ಪ್ಯಾಕ್ ಮಾಡಿ ತೆಗೆದುಕೊಂಡು ಹೋಗಬಹುದು. ಆಹಾರ ಸೇವಿಸುವಾಗ ಕ್ಷಣಮಾತ್ರದಲ್ಲಿ ಬಿಸಿ ಮಾಡಿಕೊಂಡರೆ ಆಯ್ತು.

advertisement

ಆಹಾರ ಬಿಸಿ ಮಾಡುವ ಬೆಸ್ಟ್ ಸಾಧನ ಇದು!

ನೀವು ಇನ್ನು ಮುಂದೆ ಮನೆಯಿಂದ ಟಿಫನ್ ಬಾಕ್ಸ್ ತೆಗೆದುಕೊಂಡು ಹೋಗಿ ಆಫೀಸ್ ನಲ್ಲಿ ಓಪನ್ ನಲ್ಲಿ ಬಿಸಿ ಮಾಡಿಕೊಂಡು ಕಷ್ಟಪಡುವ ಅಗತ್ಯವಲ್ಲ ನಿಮ್ಮ ಬಳಿಯ ಸ್ಮಾರ್ಟ್ ಎಲೆಕ್ಟ್ರಿಕ್ ಟಿಫನ್ ಇದ್ರೆ ಸಾಕು ಕ್ಷಣ ಮಾತ್ರದಲ್ಲಿ ಆಹಾರವನ್ನು ಬಿಸಿ ಮಾಡಿಕೊಳ್ಳಬಹುದು. ಇದರಲ್ಲಿಯೇ ಆಹಾರವನ್ನು ತೆಗೆದುಕೊಂಡು ಹೋಗಿ ಆಫೀಸ್ ನಲ್ಲಿ ಆಹಾರ ಸೇವಿಸುವ ಸಮಯದಲ್ಲಿ ಬಿಸಿ ಮಾಡಿಕೊಳ್ಳಿ. ಯು ಎಸ್ ಬಿ ಕೇಬಲ್ ಬೆಂಬಲದೊಂದಿಗೆ ಚಾರ್ಜಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ.

ಮೊಬೈಲ್ ನಲ್ಲಿ ನಿಯಂತ್ರಣ!

ಇನ್ನೊಂದು ಆಸಕ್ತಿದಾಯಕ ವಿಚಾರ ಅಂದ್ರೆ ಈ ಎಲೆಕ್ಟ್ರಿಕ್ ಟಿಫನ್ ಗೂ ಕೂಡ ಒಂದು ಅಪ್ಲಿಕೇಶನ್ ಇರುತ್ತೆ. ನೀವು ನಿಮ್ಮ ಮೊಬೈಲ್ ನಲ್ಲಿ ವೈಫೈ ಸಹಾಯದಿಂದ ಈ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಿ. ನಂತರ ನಿಮ್ಮ ಧ್ವನಿ ಆದೇಶದ ಅನುಸಾರ ಆಹಾರವನ್ನು ಬಿಸಿ ಮಾಡಿಕೊಳ್ಳಲು ಸಾಧ್ಯವಿದೆ. ಅಲೆಕ್ಸಾ ಹಾಗೂ ಗೂಗಲ್ ವಾಯ್ಸ್ ಅಸಿಸ್ಟೆಂಟ್ಗಳು ಇದಕ್ಕೆ ಸಹಕರಿಸುತ್ತವೆ.

ತನ್ನಿಂದ ತಾನೇ ಬಿಸಿಯಾಗುತ್ತೆ ಫುಡ್!

ಮಿಲ್ಟನ್ ಸ್ಮಾರ್ಟ್ ಎಲೆಕ್ಟ್ರಿಕ್ ಟಿಫನ್ ನಲ್ಲಿ ಜಿಯೋ ಟ್ಯಾಗ್ ವೈಶಿಷ್ಟ್ಯತೆಯನ್ನು ನೀವು ಕಾಣಬಹುದು. ನೀವು ನಿಮ್ಮ ಅಪ್ಲಿಕೇಶನ್ ಮೂಲಕ ತಾಪಮಾನವನ್ನು ಸೆಟ್ ಮಾಡಿದ್ರೆ ಸಾಕು ತಕ್ಷಣಕ್ಕೆ ಆಹಾರ ಬಿಸಿ ಆಗುತ್ತೆ. ಮಿಲ್ಟನ್ ಸ್ಮಾರ್ಟ್ ಎಲೆಕ್ಟ್ರಿಕಲ್ ಟಿಫನ್ ನ ಬೆಲೆ ಕೇವಲ 1,199 ರೂಪಾಯಿಗಳು. ಹಾಗಾದ್ರೆ ಇನ್ಯಾಕೆ ತಡ ಮಧ್ಯಾಹ್ನ ಆಫೀಸ್ನಲ್ಲಿ ಕುಳಿತು ಬಿಸಿಬಿಸಿಯಾಗಿರುವ ಆಹಾರ ಸೇವಿಸಬೇಕು ಅಂದ್ರೆ ಮಿಲ್ಟನ್ ಈ ಎಲೆಕ್ಟ್ರಿಕ್ ಸ್ಮಾರ್ಟ್ ಟಿಫಿನ್ ಇಂದೇ ಖರೀದಿಸಿ

advertisement

Leave A Reply

Your email address will not be published.