Saving Account: ಬ್ಯಾಂಕ್ ಖಾತೆಯಲ್ಲಿ ಎಷ್ಟು ಹಣ ಸೇವಿಂಗ್ ಇಡಬಹುದು, ಹೆಚ್ಚಿಗೆ ಇಟ್ಟಿದ್ರೆ ಏನಾಗುತ್ತೆ?
ಬ್ಯಾಂಕಿನ ಖಾತೆಯಲ್ಲಿ ಉಳಿತಾಯ ಮಾಡಲು ಅನೇಕ ಜನರು ಸಲಹೆ ಸೂಚನೆ ನೀಡುತ್ತಾರೆ. ಅದೇ ರೀತಿ ಬ್ಯಾಂಕುಗಳು ಕೂಡ ಅನೇಕ ವಿಧವಾದ ಉಳಿತಾಯ ಯೋಜನೆ (Savings Scheme) ಬೆಂಬಲಿಸುವ ಯೋಜನೆಯನ್ನು ಪರಿಚಯಿಸುತ್ತಾ ಬಂದಿದೆ. ಅದೇ ರೀತಿ ಜನರು ಬ್ಯಾಂಕಿನ ವಹಿವಾಟಿ (Bank Transactions) ನಲ್ಲಿ ಅತ್ಯಧಿಕ ಮಾಡಿದ್ದ ವಿಚಾರ ಎಂದರೆ ಅದು ಉಳಿತಾಯ ಖಾತೆ ಆದರೆ ಪ್ರತೀ ಬ್ಯಾಂಕಿನಲ್ಲಿ ಕೂಡ ಕೆಲ ನಿರ್ದಿಷ್ಟ ನಿಯಮಗಳು ಇದ್ದು ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಮಿತಿ ಇದೆಯಾ?
ಉಳಿತಾಯ ಖಾತೆ (Saving Account) ಯಲ್ಲಿ ಹಣ ಇಡುವವರಿಗೆ ಕಾಡುವ ಸಾಮಾನ್ಯ ಪ್ರಶ್ನೆ ಎಂದರೆ ಇದಕ್ಕೆ ಎಷ್ಟು ಹಣದ ವರೆಗೆ ಸಂಗ್ರಹ ಮಾಡಬಹುದು. ಆದರೆ ಬ್ಯಾಂಕಿನಲ್ಲಿ ಉಳಿತಾಯ ಖಾತೆ ವಿಭಾಗದಲ್ಲಿ ಎಷ್ಟು ಹಣವನ್ನು ಬೇಕಾದರೂ ಠೇವಣಿ ಮಾಡಬಹುದು. ಅದೇ ರೀತಿ ಉಳಿತಾಯ ಖಾತೆಯನ್ನು ಅಧಿಕವಾಗಿಯೂ ತೆರೆಯಬಹುದು. ಈ ಬಗ್ಗೆ ಆದಾಯ ತೆರಿಗೆ ಇಲಾಖೆಯಿಂದ ಯಾವುದೇ ನಿಬಂಧನೆ ಇಲ್ಲ ಎಂದು ಹೇಳಬಹುದು.
ಬ್ಯಾಂಕ್ ತಿಳಿಸುವ ಕಾರ್ಯ ಮಾಡಲಿದೆ?
ಬ್ಯಾಂಕಿನ ಠೇವಣಿಯಲ್ಲಿ ನೀವು ಎಷ್ಟು ಹಣವನ್ನು ಸಹ ಸಂಗ್ರಹಿಸಬಹುದು. 10 ಲಕ್ಷಕ್ಕಿಂತ ಅಧಿಕ ಮೊತ್ತ ಸಂಗ್ರಹ ಮಾಡಿದರೆ ಈ ಬಗ್ಗೆ ಬ್ಯಾಂಕ್ ನಿಂದ ಆದಾಯ ತೆರಿಗೆ ಇಲಾಖೆ (Income Tax Department) ಗೆ ಮಾಹಿತಿ ಹೋಗಲಿದೆ. ಈ ರೀತಿ ಮಾಹಿತಿಯನ್ನು ಬ್ಯಾಂಕುಗಳು ಆದಾಯ ತೆರಿಗೆ ಇಲಾಖೆಗೆ ವಿಧಿಸುವುದು ಕಡ್ಡಾಯವಾಗಿದ್ದು 1961ರ ಸೆಕ್ಷನ್ 285ಎಬಿಎ ಪ್ರಕಾರ ಬ್ಯಾಂಕುಗಳು ಈ ಮಾಹಿತಿ ನೀಡುವುದು ಕಡ್ಡಾಯ ಆಗಿರುತ್ತದೆ. ಅದರ ಆಧಾರದ ಮೇಲೆ ನಿಮ್ಮ ITR (ರಿಟರ್ನ್) ಮೊತ್ತಕ್ಕೆ ಈ ಮೊತ್ತ ಹೊಂದಾಣಿಕೆ ಆಗದಿದ್ದರೆ ಆಗ ಸಂಬಂಧ ಪಟ್ಟವರಿಗೆ ನೋಟಿಸ್ ಬರಲಿದೆ.
ಹಿರಿಯರಿಗೆ ಇದೆ ವಿಶೇಷ ಸೌಲಭ್ಯ:
ಹಿರಿಯ ನಾಗರಿಕರಿಗೆ ವಿಶೇಷ ಸೌಲಭ್ಯ ಇದೆ. 60ವರ್ಷಕ್ಕಿಂತ ಮೇಲ್ಪಟ್ಟವರು 50 ಸಾವಿರ ರೂಪಾಯಿ ವರೆಗೆ ಉಳಿತಾಯ ಖಾತೆಯಲ್ಲಿ ಹಣ ಸಂಗ್ರಹ ಮಾಡಬಹುದು. ಅದಕ್ಕೆ ಯಾವುದೇ ತೆರಿಗೆ ನಿಯಮ ಅನ್ವಯ ಆಗಲಾರದು. ಉಳಿತಾಯ ಖಾತೆಯಿಂದ ಸಹ ಬಡ್ಡಿ ಹಣ ಸಿಗಲಿದ್ದು ಅವೆಲ್ಲ ಮೊತ್ತ ಐಟಿ ರಿಟರ್ನ್ (IT Return) ಗೆ ಮ್ಯಾಚ್ ಆಗಬೇಕು. ಫಾರ್ಮ್ 15 ಜಿ ಸಲ್ಲಿಸಿ ಬಳಿಕ TDS ಹಣ ವಾಪಾಸು ಪಡೆಯಬಹುದು.
ಅದೇ ರೀತಿ ನಿಮ್ಮ ಉಳಿತಾಯ ಖಾತೆ (Saving Account) ಯಲ್ಲಿ ಹಣ ಸಂಗ್ರಹ ಮಾಡಿದ್ದಕ್ಕೆ ಕೂಡ ಬಡ್ಡಿಯ ಮೇಲೆ ಸಹ ಆದಾಯ ತೆರಿಗೆ ಇಲಾಖೆ ಬಡ್ಡಿ ವಿಧಿಸಲಾಗುವುದು. 10 ಸಾವಿರದ ವರೆಗೆ ತೆರಿಗೆ ರಿಯಾಯಿತಿ ಸೌಲಭ್ಯ ಇದೆ. 10 ಸಾವಿರಕ್ಕಿಂತ ಕಡಿಮೆ ಮೌಲ್ಯದ ಹಣ ಠೇವಣಿ ಇಡುವುದಕ್ಕೆ ಯಾವುದೇ ತೆರಿಗೆ ನಿಯಮ ಇಲ್ಲ. ಬ್ಯಾಂಕ್ ಬಡ್ಡಿಯ ಮೇಲೆ 10% TDS ಕಡಿತಗೊಳಿಸಬಹುದು.