Saving Account: ಈ ಬ್ಯಾಂಕ್ ಖಾತೆಯಲ್ಲಿ ಜೀರೋ ಬ್ಯಾಲೆನ್ಸ್ ಇದ್ರೂ ದಂಡವು ಇಲ್ಲ ಹಾಗೂ ಖಾತೆ ಕ್ಲೋಸ್ ಆಗಲ್ಲ, ಹೊಸ ನಿಯಮ ಜಾರಿಗೆ!
ಬ್ಯಾಂಕ್ ಗಳಲ್ಲಿ ಉಳಿತಾಯ ಖಾತೆ (Saving Account) ಯನ್ನು ಹೊಂದಿರುವುದು ತುಂಬಾನೇ ಒಳ್ಳೆಯದು. ಯಾಕೆಂದರೆ ಯಾವುದೇ ರೀತಿಯ ಹಣಕಾಸಿನ ವ್ಯವಹಾರಕ್ಕೆ ಬ್ಯಾಂಕುಗಳಲ್ಲಿ ನಿಮ್ಮದೇ ಆಗಿರುವ ಒಂದು ಖಾತೆ ಇರುವುದು ಬಹಳ ಮುಖ್ಯವಾಗಿರುತ್ತದೆ ಅದರಲ್ಲಿ ಹಣ ಡಿಪೋಸಿಟ್ (Money Deposit) ಇಡಬಹುದು ಅಥವಾ ಅದರ ಮೂಲಕ ಬ್ಯಾಂಕುಗಳಲ್ಲಿ ಇರುವ ಬೇರೆ ಬೇರೆ ಯೋಜನೆಗಳಲ್ಲಿ ಹೂಡಿಕೆ ಕೂಡ ಮಾಡಬಹುದು. ಸಾಮಾನ್ಯರು ಉಳಿತಾಯ ಖಾತೆಯನ್ನು ಬಳಕೆ ಮಾಡಿದರೆ ವ್ಯಾಪಾರ ವ್ಯವಹಾರ (Business Transaction) ಮಾಡುವವರು ಚಾಲ್ತಿ ಖಾತೆಯನ್ನು ಹೊಂದಿರುತ್ತಾರೆ.
Saving Account ಯಲ್ಲಿ ಮಿನಿಮಮ್ ಬ್ಯಾಲೆನ್ಸ್ ಇರಬೇಕೇ?
ಈ ಹಿಂದೆ ಯಾವುದೇ ಬ್ಯಾಂಕ್ ನಲ್ಲಿ ನೀವು ಉಳಿತಾಯ ಖಾತೆ ಆರಂಭಿಸಿದರು ಕೂಡ ಸುಮಾರು ಐದರಿಂದ ಹತ್ತು ಸಾವಿರ ರೂಪಾಯಿಗಳವರೆಗೆ ಕನಿಷ್ಠ ಬ್ಯಾಲೆನ್ಸ್ (Minimum Balance) ಇರಲೇಬೇಕು ಎನ್ನುವ ನಿಯಮ ಇತ್ತು ಕೆಲವು ಬ್ಯಾಂಕುಗಳಲ್ಲಿ ಈ ಬ್ಯಾಲೆನ್ಸ್ ಮೊತ್ತ 25,000ಗಳವರೆಗೂ ಕೂಡ ಇದೆ. ಆದರೆ ಈಗ ಹೀಗಿಲ್ಲ ನೀವು ಸಾಕಷ್ಟು ಬ್ಯಾಂಕುಗಳಲ್ಲಿ ಉಳಿತಾಯ ಖಾತೆ ಹೊಂದಿದ್ದಾಗ ಶೂನ್ಯ ಬ್ಯಾಲೆನ್ಸ್ (Zero Balance) ನಲ್ಲಿ ಕೂಡ ಉಳಿತಾಯ ಖಾತೆಯನ್ನು ಮುಂದುವರಿಸಲು ಸಾಧ್ಯವಿದೆ.
Bank of Baroda Saving Account:
ಇನ್ನು ಬ್ಯಾಂಕ್ ಆಫ್ ಬರೋಡ (Bank of Baroda) ಇತ್ತೀಚಿನ ದಿನಗಳಲ್ಲಿ ಉಳಿತಾಯ ಖಾತೆ ಹೊಂದಿರುವವರಿಗೆ ಗುಡ್ ನ್ಯೂಸ್ ನೀಡಿದೆ ಕೂಡ ಉಳಿತಾಯ ಖಾತೆಯನ್ನು ಮುಚ್ಚದೆ ಮುಂದುವರಿಸಲಾಗುವುದು ಎಂದು ತಿಳಿಸಿದೆ. ಅಷ್ಟೇ ಅಲ್ಲ ಶೂನ್ಯ ಬ್ಯಾಲೆನ್ಸ್ ಹೊಂದಿದ್ದರೂ ಕೂಡ ಅಂತಹ ಉಳಿತಾಯ ಖಾತೆ (Saving Account) ಗೆ ಬ್ಯಾಂಕ್ ಡೆಬಿಟ್ ಕಾರ್ಡ್ (Debit Card) ಹಾಗೂ ಇತರ ಬೆನಿಫಿಟ್ ಕೂಡ ನೀಡುತ್ತದೆ ಜೊತೆಗೆ ಯಾವುದೇ ರೀತಿಯ ದಂಡವನ್ನು ಕೂಡ ಪಾವತಿಸುವ ಅಗತ್ಯವಿಲ್ಲ.
ಯಾರಿಗೆ Zero Balance Saving Account ಲಭ್ಯವಿದೆ?
ಬ್ಯಾಂಕ್ ಆಫ್ ಬರೋಡ (Bank Of Baroda) ಈ ಶೂನ್ಯ ಬ್ಯಾಲೆನ್ಸ್ ಖಾತೆಯ ಪ್ರಯೋಜನವನ್ನು ವಿದ್ಯಾರ್ಥಿಗಳಿಗೆ ನೀಡುತ್ತಿದೆ 16 ರಿಂದ 25 ವರ್ಷದ ಒಳಗಿನ ಯುವಕ ಯುವತಿಯರು ಖಾತೆ ತೆರೆಯಬಹುದು. ಯುವಕರನ್ನ ಹೆಚ್ಚು ಬ್ಯಾಂಕ್ ವ್ಯವಹಾರಗಳ ಕಡೆಗೆ ಆಕರ್ಷಿಸುವ ಸಲುವಾಗಿ ಬ್ಯಾಂಕ್ ಆಫ್ ಬರೋಡ IIT ಬಾಂಬೆ ವಿಶೇಷ ಬ್ಯಾಂಕಿಂಗ್ ಪಾಲುದಾರಿಕೆಯನ್ನು ಆರಂಭಿಸಿದೆ. ಮೂಡೀಸ್ ಜೊತೆಗೆ ಪಾಲುದಾರಿಕೆ ಆರಂಭಿಸಲಾಗಿದೆ ಎಂದು ಬ್ಯಾಂಕ್ ಮುಖ್ಯಸ್ಥರು ತಿಳಿಸಿದ್ದಾರೆ.
ಈ ಖಾತೆಯ ವಿಶೇಷತೆ:
- ಶೂನ್ಯ ಬ್ಯಾಲೆನ್ಸ್ ಹೊಂದಿರುವ ಉಳಿತಾಯ ಖಾತೆಯನ್ನು 16 ರಿಂದ 25 ವರ್ಷದ ಒಳಗಿನ ವಿದ್ಯಾರ್ಥಿಗಳು ಮಾತ್ರ ತೆರೆಯಬಹುದು
- ಲೈಫ್ ಲಾಂಗ್ ಉಚಿತ ರೂಪೇ ಪ್ಲಾಟಿನಂ ಡೆಬಿಟ್ ಕಾರ್ಡ್ ಪಡೆಯಬಹುದು.
- ಮೂರು ತಿಂಗಳಲ್ಲಿ ಎರಡು ಬಾರಿ ದೇಶಿಯ ವಿಮಾನ ನಿಲ್ದಾಣದಲ್ಲಿ ಲಾಂಜ್ ಬಳಕೆ ಮಾಡಬಹುದು.
- ಎರಡು ಲಕ್ಷದ ವರೆಗೆ ವೈಯಕ್ತಿಕ ಅಪಘಾತ ವಿಮೆ ಪಡೆಯಬಹುದು.
- ಉಚಿತ ಚೆಕ್ ಅನ್ನು ಪಡೆಯಬಹುದು, ಇದಕ್ಕೆ ಯಾವುದೇ ರೀತಿ ಶುಲ್ಕ ಇಲ್ಲ
- ಉಚಿತ ಎಸ್ಎಂಎಸ್, ಇಮೇಲ್ ಪಡೆಯಬಹುದು
- ಡಿಮ್ಯಾಟ್ AMC ಎಲ್ಲಿ ಸಂಪೂರ್ಣ ರಿಯಾಯಿತಿ ನೀಡಲಾಗುವುದು
- ಈ ಖಾತೆಯ ಮೇಲೆ ಶಿಕ್ಷಣ ಸಾಲ ತೆಗೆದುಕೊಂಡರೆ ಪ್ರೊಸಸಿಂಗ್ ಫೀಸ್ ಇಲ್ಲ ಜೊತೆಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯಬಹುದು.
- NEFT, RTGS, UPI, IMPS ಸೇವೆ ಪಡೆಯಬಹುದು.
ಹಾಗಾಗಿ ವಿದ್ಯಾರ್ಥಿಗಳು Bank of Baroda ದಲ್ಲಿ ಈ ಉಳಿತಾಯ ಖಾತೆ ತೆರೆಯುವುದರ ಮೂಲಕ Zero Balance ನಲ್ಲಿಯೂ ಖಾತೆಯನ್ನು ಮುಂದುವರೆಸಿಕೊಂಡು ಹೋಗಬಹುದು. ಜೊತೆಗೆ ಸಾಕಷ್ಟು ಬೆನಿಫಿಟ್ಸ್ ನ್ನು ಕೂಡ ಬ್ಯಾಂಕ್ ನೀಡುತ್ತಿರುವುದರಿಂದ ಹೆಚ್ಚಿನ ಪ್ರಯೋಜನವಾಗಲಿದೆ.