Karnataka Times
Trending Stories, Viral News, Gossips & Everything in Kannada

Covid-19: ಕರೋನ ಸೋಂಕು ತಗಲಿದವರು ಹೀಗೆ ಮಾಡಿದ್ರೆ ಸಾಕು, ಅಪಾಯದಿಂದ ಪಾರಾಗ್ತೀರಿ!

advertisement

ಕೇರಳದಲ್ಲಿ ಇತ್ತೀಚೆಗೆ ಕರೋನ ವೈರಸ್‌ನ (Corona Virus) ಹೊಸ ರೂಪಾಂತರಿಯಾದ COVID Subvariant JN.1 ಪ್ರಕರಣ ವರದಿಯಾಗಿತ್ತು. ಕೋವಿಡ್ -19 ರೂಪಾಂತರ ಜೆಎನ್. 1 ಈ ರಜಾ ಋತುವಿನಲ್ಲಿ ಹಲವು ದೇಶಗಳಲ್ಲಿ ಪ್ರಾರಂಭವಾಗಿದೆ. ಆದರೆ ಭಾರತದಲ್ಲಿ ಆತಂಕ ಪಡಬೇಕಾದ ಅಗತ್ಯವಿಲ್ಲ ಎಂದು ಹೇಳುತ್ತಿದ್ದಾರೆ. ಇನ್ನು ವಿಶ್ವ ಆರೋಗ್ಯ ಸಂಸ್ಥೆ (WHO) JN.1 ಕೋವಿಡ್ ನ ರೂಪಾಂತರ ತಳಿ ಎಂದು ವರ್ಗೀಕರಿಸಿದೆ. ಇದು ಸಾರ್ವಜನಿಕ ಜೀವನಕ್ಕೆ ಹೆಚ್ಚಿನ ಅಪಾಯವನ್ನುಂಟು ಮಾಡುವುದಿಲ್ಲ ಎಂದು ಹೇಳಿದೆ.

WHO ಹೇಳುವುದೇನು?

ಕೋವಿಡ್ -19 (Covid-19) ಪ್ರಕರಣಗಳು ಹೆಚ್ಚುತ್ತಿರುವುದರಲ್ಲಿ ಅಸಾಮಾನ್ಯವಾದುದೇನೂ ಇಲ್ಲ ಮತ್ತು ಯಾವುದೂ ಆತಂಕಕಾರಿಯಲ್ಲ. ಈ ಪ್ರಕರಣಗಳು ಹೆಚ್ಚಾಗಿ ಬಿಎ 2 (BA2) ಉಪ-ವಂಶಾವಳಿಯಾದ ಜೆಎನ್ .1 ರೂಪಾಂತರದಿಂದ ಹರಡುತ್ತಿದೆ . ವಂಶಾವಳಿ ಜೆಎನ್.1 ರೂಪಾಂತರಿ ಮೊದಲು ಲಕ್ಸಂಬರ್ಗ್‌ನಲ್ಲಿ ಕಂಡುಬಂದಿತ್ತು. ಇತ್ತೀಚಿನ ವರದಿಗಳ ಪ್ರಕಾರ ಇದು ಈಗ 38ಕ್ಕೂ ಹೆಚ್ಚು ದೇಶಗಳಲ್ಲಿ ಕಂಡುಬಂದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

United Nations Agency ಪ್ರಕಾರ:

 

advertisement

 

ಯುನೈಟೆಡ್ ನೇಷನ್ಸ್ ಏಜೆನ್ಸಿ (United Nations Agency) ಪ್ರಕಾರ ಡಿಸೆಂಬರ್ 8 ರ ವೇಳೆಗೆ ಯುನೈಟೆಡ್ ಸ್ಟೇಟ್ಸ್ ನಲ್ಲಿ ಸಮಾರು 15% ರಿಂದ 29% ರಷ್ಟು ಪ್ರಕರಣಗಳು ದಾಖಲಾಗಿತ್ತು. ಪ್ರತಿ ಬಾರಿಯೂ ಕೋವಿಡ್‌ನ ಹೊಸ ಅಲೆಯು ಡಿಸೆಂಬರ್ ಅಥವಾ ಚಳಿಗಾಲದಲ್ಲಿ ಬರುತ್ತದೆ. ಈ ಸಮಯದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿರುವುದು ಇದಕ್ಕೆ ಕಾರಣ. ಸಿಡಿಸಿ ಪ್ರಕಾರ, ಸಪ್ಟೆಂಬರ್ ತಿಂಗಳಲ್ಲಿ ಯುಎಸ್ ಅಲ್ಲಿ ಮೊದಲು JN 1 ತಳಿಯನ್ನು ಪತ್ತೆಮಾಡಲಾಗಿತ್ತು. ಇನ್ನು ಕಳೆದ ವಾರ ಕೋವಿಡ್ ಸಬ್ ವೇರಿಯೆಂಟ್ 7 ಸೋಂಕುಗಳನ್ನು ಚೀನಾ ಪತ್ತೆ ಮಾಡಿತ್ತು.

ಭಾರತಕ್ಕೆ ಆತಂಕವಿಲ್ಲ:

ಕೋವಿಡ್ -19 ವ್ಯಾಕ್ಸಿನೇಷನ್‌ ಅನ್ನು ದೇಶದಲ್ಲಿ ವ್ಯಾಪಕವಾಗಿ ಬಳಸಿದ್ದರಿಂದ ಭಾರತವು ಸುರಕ್ಷಿತವಾಗಿದೆ. ಎರಡು ವರ್ಷಗಳ ಹಿಂದಿನ ಪರಿಸ್ಥಿತಿ ಈಗಿನ ಪರಿಸ್ಥಿತಿಗಿಂತ ಭಿನ್ನವಾಗಿತ್ತು. ಇಂದು ನಮ್ಮ ಜನಸಂಖ್ಯೆಯ 90%ಕ್ಕೂ ಹೆಚ್ಚು ಜನರು ಲಸಿಕೆ ಪಡೆದಿದ್ದಾರೆ ಎಂದು ದಾಸ್‌ ಹೇಳಿದ್ದಾರೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಮೂಲಕ ಜೆಎನ್ .1 ದಾಳಿಯಿಂದ ಪಾರಾಗಬಹುದು ಎಂದು ವೈದ್ಯರು ಹೇಳುತ್ತಾರೆ. ಅವರ ಮುಖ್ಯ ಕಾಳಜಿ ಸಾರ್ವಜನಿಕರನ್ನು ಭಯಪಡಿಸುವುದಲ್ಲ. ಆದರೆ ಅವರನ್ನು ಎಚ್ಚರಿಸುವುದು. ವಯಸ್ಸಾದ ದುರ್ಬಲ ಅಥವಾ ಅಪಾಯದಲ್ಲಿರುವವರು ಮಾಸ್ಕ್ ಧರಿಸಬೇಕು ಮತ್ತು ಅನಗತ್ಯವಾಗಿ ಓಡಾಡುವುದನ್ನು ತಪ್ಪಿಸಬೇಕು ಎಂದು ಆರೋಗ್ಯ ಪರಿಣತರು ಸಲಹೆ ನೀಡಿದ್ದಾರೆ.

advertisement

Leave A Reply

Your email address will not be published.