Karnataka Times
Trending Stories, Viral News, Gossips & Everything in Kannada

Subsidy: ಮಹಿಳೆಯರಿಗೆ ಒಲಿದ ಬಂಪರ್ ಸುದ್ದಿ, ಇಂತಹ ಬ್ಯುಸಿನೆಸ್​ಗೆ ಸರ್ಕಾರ ಕೊಡುತ್ತೆ ಸಹಾಯಧನ!

advertisement

ಇತ್ತೀಚಿನ ದಿನಗಳಲ್ಲಿ ಮಹಿಳೆಯರಿಗಾಗಿ ಅನೇಕ ಯೋಜನೆಯನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ಅಭಿವೃದ್ಧಿ ಪಡಿಸುತ್ತಲೇ ಬಂದಿದೆ‌‌. ಮಹಿಳೆಯನ್ನು ಆರ್ಥಿಕವಾಗಿ, ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಸದೃಢವಾಗಿಸುವ ನೆಲೆಯಲ್ಲಿ ಅನೇಕ ಅಭಿವೃದ್ಧಿ ಪರ ಕಾರ್ಯ ಚಟುವಟಿಕೆ ಮಾಡಲಾಗುತ್ತಿದೆ. ಸ್ವಾವಲಂಬಿ ಬದುಕು ರೂಪಿಸುವ ಸಲುವಾಗಿ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ ಪರಿಚಯಿಸುವ ಜೊತೆಗೆನೇ ಅನೇಕ ಬ್ಯಾಂಕುಗಳು ಸರಕಾರದ ಮುಂದಾಳತ್ವದಲ್ಲಿ ಕಡಿಮೆ ಬಡ್ಡಿದರದ ಸಾಲ ಸೌಲಭ್ಯ ನೀಡಲಿದೆ.

ಆರ್ಥಿಕ ನೆರವು:

ಮಹಿಳೆಯರಿಗೆ ಟೈಲರಿಂಗ್ (Tailoring), ಅಂಗಡಿ (Shop), ಕಸೂತಿ (Embroidery), ಬ್ಯೂಟಿ ಪಾರ್ಲರ್ (Beauty Parlour), ಕರಕುಶಲ ವಸ್ತುವಿನ (Handicrafts) ತಯಾರಿಕೆ ಹೀಗೆ ಅನೇಕ ವಿಧದಲ್ಲಿ ನೆರವಾಗಲೆಂದು ಸರಕಾರಿ ಸಹಾಯಧನ ಮತ್ತು ಕಡಿಮೆ ಬಡ್ಡಿದರದ ಸಾಲ (Loan) ಸೌಲಭ್ಯ ಸಹ ನೀಡಲಾಗುತ್ತಿದೆ. ಈ ಮೂಲಕ ಮಹಿಳೆಯೂ ಪುರುಷಳಷ್ಟೇ ಸಬಲಳು ಎಂದು ಸಾಬೀತು ಮಾಡಿ ಆರ್ಥಿಕ ನೆರವು ನೀಡುವ ಮಹತ್ವದ ಉದ್ದೇಶ ಇದರಲ್ಲಿ ಇರುವುದನ್ನು ನಾವು ಕಾಣಬಹುದು‌‌. ಇದೀಗ ಆಂಧ್ರ ಪ್ರದೇಶದಲ್ಲಿ ಇಂತಹದ್ದೇ ಒಂದು ಸಮಾಜಕ್ಕೆ ಮಾದರಿ ಆಗುವ ಕೆಲಸ ಹಮ್ಮಿಕೊಳ್ಳಲಾಗುತ್ತಿದ್ದು ಮುಂದಿನ ದಿನದಲ್ಲಿ ಇದೇ ಮಾದರಿ ಕರ್ನಾಟಕಕ್ಕೂ ಆಗಮಿಸ ಬಹುದು.

ಮಹಿಳಾ ಪರ ಧೋರಣೆ:

ದೇಶಾದ್ಯಂತ ಈಗ ಮುಂದಿನ ಲೋಕಸಭೆ ಚುನಾವಣೆಯ ಸಿದ್ಧತೆ ಈಗಲೇ ಆರಂಭ ಮಾಡಲಾಗಿದೆ ಎಂದು ಹೇಳಬಹುದು. ಹಾಗಾಗಿ ಆಂಧ್ರ ಪ್ರದೇಶದಲ್ಲಿ ಕೂಡ ಮಹಿಳಾ ಪರ ಧೋರಣೆ ಇಟ್ಟುಕೊಂಡು ಅಭಿವೃದ್ಧಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಅಲ್ಲಿನ ಮಹಿಳಾ ಸಂಘಗಳ ಮೂಲಕ ಮಹಿಳೆಯರ ಆರ್ಥಿಕ ಉತ್ತೇಜನ (EconomicEempowerment of Women) ನೀಡಲು ಕೆಲ ಕಾರ್ಯಕ್ರಮ ಹಮ್ಮಿಕೊಂಡಿದೆ‌. ಅದೇ ರೀತಿ ಮಿನಿ ಕೋಳಿ ಶೆಡ್ ಸ್ಥಾಪನೆ ಮಾಡಿ ಅದರಲ್ಲಿ ಕೂಡ ಮಹಿಳಾ ಉದ್ಯಮಿ ಕ್ಷೇತ್ರದ ಬೆಳವಣಿಗೆಗೆ ಪ್ರಯತ್ನಿಸಲಾಗುತ್ತಿದೆ.

advertisement

ಮಹಿಳೆಯರಿಗೆ ಆರ್ಥಿಕ ಬೆಂಬಲ:

ಆಂಧ್ರಪ್ರದೇಶದ ರಾಜ್ಯ ಸರ್ಕಾರವು ಇದೀಗ ಮಹೀಳೆಯರಿಗಾಗಿ ಸಹಾಯಧನ ನೀಡಲು ಮುಂದಾಗಿದೆ.‌ ಇದರಿಂದ ಮಹೀಳೆಯರಿಗೆ ಆರ್ಥಿಕ ಉತ್ತೇಜನ ಸಿಕ್ಕಂತಾಗಿದೆ. ಈ ಸೌಲಭ್ಯ ದೊಂದಿಗೆ ಮಹಿಳಾ ಸಂಘಗಳಿಗೆ ಮಿನಿ ಕೋಳಿ ಶೆಡ್‌ಗಳನ್ನು ಸ್ಥಾಪಿಸಲು‌ ನೆರವು ನೀಡುತ್ತದೆ. ಅದೇ ರೀತಿ ಮಹಿಳೆಯರ ಆರ್ಥಿಕ ಬೆಳವಣಿಗೆಗಾಗಿ ಕೈಗಾರಿಕೆಗಳಿಗೆ ಉತ್ತೇಜನ ನೀಡಲು ಅವಕಾಶ ಕೂಡ ಒದಗಿಸಲಾಗಿದೆ.

Mini Chicken Shed Construction:

ಮಹಿಳಾ ಸಂಘಗಳಿಗೆ ಮಿನಿ ಕೋಳಿ ಶೆಡ್‌ಗಳನ್ನು ಸ್ಥಾಪಿಸಲು ಸಹಾಯ ಮಾಡುದರೊಂದಿಗೆ, ಆಂಧ್ರಪ್ರದೇಶ ರಾಜ್ಯ ಸರ್ಕಾರವು ಮಹಿಳೆಯರನ್ನು‌ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಹೊಸ ಸೌಲಭ್ಯ ವನ್ನು ಪ್ರಾರಂಭಿಸಿದೆ ಮಹಿಳೆಯರಿಗಾಗಿ ಮಿನಿ ಪೌಲ್ಟ್ರಿ ಫಾರ್ಮ್ ನೊಂದಿಗೆ 100 ಮಿನಿ ಕೋಳಿ ಶೆಡ್ ಸ್ಥಾಪಿಸಲು ಹಾಯಧನ ನೀಡಲಾಗುತ್ತದೆ 2022-23ರಲ್ಲಿ ಸುಮಾರು 3000 ಜನರಿಗೆ ಕೋಳಿ ಸಾಕಲು ಅವಕಾಶ ನೀಡಲಾಗಿದ್ದು ಮಹೀಳೆಯರಿಗೆ ಇದರಿಂದ ಸಹಾಯ ಸಿಕ್ಕಿದೆ.

ಮುಂದಿನ ದಿನದಲ್ಲಿ ಇಂತಹ ಅಭಿವೃದ್ಧಿ ಕರ್ನಾಟಕದಲ್ಲಿಯು ಆರಂಭ ವಾಗುವ ಮೂಲಕ‌ ಮಹೀಳೆಯರಿಗೆ ಸಹಾಯಕ ವಾಗಲಿ.

advertisement

Leave A Reply

Your email address will not be published.