Bank Account: 10 ಕೋಟಿಗೂ ಹೆಚ್ಚಿನ ಜನರ ಬ್ಯಾಂಕ್ ಖಾತೆ ನಿಷ್ಕ್ರಿಯಗೊಳಿಸಲು ಮುಂದಾದ ಕೇಂದ್ರ ಸರ್ಕಾರ, ಕಾರಣ ಏನು ಗೊತ್ತಾ?
ಪ್ರಧಾನ ಮಂತ್ರಿ ಜನ್ ಧನ್ ಯೋಜನೆ (Pradhan Mantri Jan Dhan Yojana) ಯ ಅಡಿಯಲ್ಲಿ ನೀವು ಬ್ಯಾಂಕ್ ಖಾತೆ (Bank Account) ಹೊಂದಿದ್ರೆ ಈ ಸುದ್ದಿ ನಿಮಗಾಗಿ. ನಿಮ್ಮ ಖಾತೆ ಇನ್ನು ಮುಂದೆ ನಿಷ್ಕ್ರಿಯಗೊಳ್ಳುವ ಸಾಧ್ಯತೆ ಇದೆ. ಇದರ ಬಗ್ಗೆ ಕೇಂದ್ರ ಸರ್ಕಾರ ಹೊಸ ಅಪ್ಡೇಟ್ ನೀಡಿದೆ.
Pradhan Mantri Jan Dhan Yojana:
ದೇಶದ ಪ್ರತಿಯೊಬ್ಬರಿಗೂ ಅನುಕೂಲವಾಗಲಿ ಎನ್ನುವ ಕಾರಣಕ್ಕೆ ಪ್ರಧಾನಮಂತ್ರಿ ಮೋದಿ (PM Modi) ಅವರು ಜನ ಧನ ಯೋಜನೆಯನ್ನು ಆರಂಭಿಸಿದರು. ಈ ಯೋಜನೆಯಲ್ಲಿ ಬ್ಯಾಂಕ್ ನಲ್ಲಿ ಮಿನಿಮಮ್ ಬ್ಯಾಲೆನ್ಸ್ (Minimum Balance) ಇಡದೇ ಅಂದರೆ ಶೂನ್ಯ ಮೊತ್ತದ ಖಾತೆ ತೆರೆಯಬಹುದಾಗಿದೆ. ಹೀಗಾಗಿ ಈ ಯೋಜನೆಯ ಅಡಿಯಲ್ಲಿ ಸುಮಾರು 51 ಕೋಟಿ ಬ್ಯಾಂಕ್ ಖಾತೆಗಳನ್ನು (Bank Accounts) ತೆರೆಯಲಾಗಿದ್ದು, ಇವುಗಳಲ್ಲಿ ಸುಮಾರು ಐದು ಕೋಟಿ ಬ್ಯಾಂಕ್ ಖಾತೆಗಳು ಮಹಿಳೆಯ ಹೆಸರಿನಲ್ಲಿ ಇವೆ. ಇದೀಗ ಬಂದಿರುವ ಮಾಹಿತಿಯ ಪ್ರಕಾರ 10 ಕೋಟಿಗೂ ಹೆಚ್ಚಿನ ಖಾತೆಗಳು ನಿಷ್ಕ್ರಿಯೆಗೊಳ್ಳಲಿವೆ. ಜನರು NON-Operative ಖಾತೆಗಳಲ್ಲಿ ಸುಮಾರು 12,799 ಕೋಟಿ ರೂಪಾಯಿಗಳನ್ನು ಡಿಪಾಸಿಟ್ ಇಟ್ಟಿದ್ದಾರೆ ಎನ್ನಲಾಗಿದೆ.
ಜನ ಧನ ಕಥೆಯ ಬಗ್ಗೆ ಮಾಹಿತಿ ನೀಡಿದ ಸಚಿವ ಭಾಗವತ್ ಕರಡ್:
ಇತ್ತೀಚಿಗೆ ರಾಜ್ಯಸಭೆಯಲ್ಲಿ ಪ್ರಧಾನ ಮಂತ್ರಿ ಜನಧನ್ ಯೋಜನೆ (Pradhan Mantri Jan Dhan Yojana) ಯ ಬಗ್ಗೆ ಸಚಿವ ಭಾಗವತ್ ಕರಡ್ (Bhagwat Karad) ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಅವರು ಹೇಳುವ ಪ್ರಕಾರ, 103.4 ಮಿಲಿಯನ್ ನಾನ್ ಆಪರೇಟಿವ್ (Non-Operative) ಪಿ ಎಂ ಜೆ ಡಿ ವೈ ಖಾತೆಗಳಲ್ಲಿ 49.3 ಕೋಟಿ ಖಾತೆಗಳು ಮಹಿಳೆಯರ ಹೆಸರಿನಲ್ಲಿಯೇ ಇವೆ. ಒಟ್ಟು ಡಿಪಾಸಿಟ್ ಆಗಿರುವ ಹಣದಲ್ಲಿ ನಾನ್ ಆಪರೇಟಿವ್ ಪಿಎಂಜೆಡಿವೈ (PMJGY) ಖಾತೆಗಳಲ್ಲಿ 6.12% ನಷ್ಟು ಡಿಪಾಸಿಟ್ ಆಗಿದೆ. ನಿಷ್ಕ್ರಿಯಗೊಂಡಿರುವ ಪಿಎಂಜೆಡಿವೈ ಅಕೌಂಟ್ ಗಳು ಬ್ಯಾಂಕಿನಲ್ಲಿ ಒಟ್ಟಾರೆಯಾಗಿ ನಿಷ್ಕ್ರಿಯಗೊಂಡಿರುವ ಅಕೌಂಟ್ ಗೆ ಸಮನಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
Bank Account ನಿಷ್ಕ್ರಿಯ ಹೊಂದಿರುವುದಕ್ಕೆ ಕಾರಣಗಳೇನು?
ಬ್ಯಾಂಕ್ ಖಾತೆ ನಿಷ್ಕ್ರಿಯಹೊಂದಿರುವುದಕ್ಕೆ ಸಾಕಷ್ಟು ಬೇರೆ ಬೇರೆ ಕಾರಣಗಳು ಇವೆ ಎಂದು ಸಚಿವರು ತಿಳಿಸಿದ್ದಾರೆ. ಬ್ಯಾಂಕ್ ಖಾತೆದಾರರೊಂದಿಗೆ ನೇರ ಸಂಬಂಧ ಹೊಂದಿರುವುದಿಲ್ಲ. ಕೆಲವು ತಿಂಗಳುಗಳಿಂದ ಬ್ಯಾಂಕ್ ನಲ್ಲಿ ಯಾವುದೇ ವಹಿವಾಟುಗಳು ಮಾಡದೇ ಇರುವ ಕಾರಣ ಇಂತಹ ಖಾತೆಯನ್ನು ನಿಷ್ಕ್ರಿಯಗೊಳಿಸಲಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿರುವ ಪ್ರಕಾರ ಎರಡು ವರ್ಷಕ್ಕಿಂತ ಹೆಚ್ಚು ಸಮಯ ಜನ ಧನ್ ಬ್ಯಾಂಕು ಖಾತೆಯಲ್ಲಿ ಗ್ರಾಹಕರು ಯಾವುದೇ ರೀತಿಯ ವಹಿವಾಟು ಮಾಡದೆ ಇದ್ದರೆ ಅಂತಹ ಖಾತೆಯನ್ನು ನಿಷ್ಕ್ರಿಯಗೊಳಿಸಲಾಗುತ್ತದೆ.
ಬ್ಯಾಂಕ್ ಖಾತೆಗಳು ಹೆಚ್ಚು ನಿಷ್ಕ್ರಿಯಗೊಳ್ಳದಂತೆ ಬ್ಯಾಂಕುಗಳು ಪ್ರಯತ್ನಿಸುತ್ತಿವೆ. ಸರ್ಕಾರವು ನಿಯಮಿತವಾಗಿ ಮೇಲ್ವಿಚಾರಣೆ ನಡೆಸುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ. ಹಾಗಾಗಿ ಜನಧನ ಖಾತೆಯನ್ನು ಹೊಂದಿದ್ದು ಅದರಲ್ಲಿ ಹಣಕಾಸಿನ ವ್ಯವಹಾರ ಮಾಡುವ ಯಾರ ಖಾತೆಯೂ ಕೂಡ ನಿಷ್ಕ್ರಿಯಗೊಂಡಿಲ್ಲ. ಬದಲಾಗಿ ಹಣಕಾಸು ವ್ಯವಹಾರ ಮಾಡದೆ ಕೇವಲ ಖಾತೆಯನ್ನು ಮಾತ್ರ ತೆರೆದಿರುವವರ ಖಾತೆಯನ್ನು ನಿಷ್ಕ್ರಿಯಗೊಳಿಸಲಾಗಿದೆ.