Karnataka Times
Trending Stories, Viral News, Gossips & Everything in Kannada

PM Jan Dhan Yojana: ಜನ್‌ ಧನ್‌ ಖಾತೆಯನ್ನು ತೆರೆದರೆ ಸಿಗಲಿದೆ 10,000 ರೂಪಾಯಿ, ಹೀಗೆ ಅಪ್ಲೈ ಮಾಡಿ!

advertisement

ಪ್ರಧಾನ ಮಂತ್ರಿ ಜನ್ ಧನ್ ಯೋಜನೆ (PM Jan Dhan Yojana) ಮೂಲಕ ಬಡವರ್ಗದ ಜನತೆಗೆ ಅನೇಕ ರೀತಿಯ ಸೌಲಭ್ಯ ಗಳನ್ನು ನೀಡಿದೆ. ಈ ಯೋಜನೆಯನ್ನು 2014ರ ಆಗಸ್ಟ್‌ 15ರಂದು ಸ್ವಾತಂತ್ರ್ಯ ದಿನದ ಸಂದರ್ಭದಲ್ಲಿ ಪ್ರಧಾನಿ ಮೋದಿ ಈ ಯೋಜನೆಯನ್ನು ಘೋಷನೆ ಮಾಡಿದರು. ಸರ್ಕಾರದ ಮೂಲಕ ಈ ಜನ್ ಧನ್ ಖಾತೆಯಲ್ಲಿ ಖಾತೆದಾರರಿಗೆ ಹಲವು ರೀತಿಯ ಪ್ರಯೋಜನಗಳನ್ನು ನೀಡ್ತಾ ಇದ್ದು ಈ ಖಾತೆ ಇದ್ದರೆ ಸರ್ಕಾರದಿಂದ ನಿಶ್ಚಿತ ಠೇವಣಿ ಸೌಲಭ್ಯವನ್ನು ಸಹ ನೀಡಲಾಗುತ್ತಿದೆ. ಈ ಸೌಲಭ್ಯ ಅಡಿಯಲ್ಲಿ ಖಾತೆಯನ್ನು ತೆರೆಯಲು ಬಯಸುವ ನಾಗರಿಕರಿಗೆ ಉಚಿತವಾಗಿ ಬ್ಯಾಂಕ್ ಖಾತೆಯನ್ನು ತೆರೆಯಲು ಅವಕಾಶ ಸಹ ಇದೆ.

ಇಲ್ಲಿ ಖಾತೆ ತೆರೆಯಲು ಅವಕಾಶ ಇದೆ

ಬ್ಯಾಂಕ್​, ಅಂಚೆ ಕಚೇರಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಶೂನ್ಯ ಬ್ಯಾಲೆನ್ಸ್ (Zero Balance) ​​ನೊಂದಿಗೆ ಖಾತೆ ತೆರೆಯಲು ಅವಕಾಶ ಇದ್ದು ಈ ಖಾತೆದಾರರಿಗೆ ಅಪಘಾತ ವಿಮೆ, ಓವರ್​ ಡ್ರಾಫ್ಟ್​ ಸೇರಿದಂತೆ ಅನೇಕ ಸರಕಾರಿ ಸೌಲಭ್ಯ ‌ಪಡೆಯಲು ಅರ್ಹ ರಾಗಿರುತ್ತಾರೆ.

Image source: Jansatta

ಖಾತೆ ತೆರೆಯಲು ಈ ದಾಖಲೆ ಬೇಕು

advertisement

  • ಆಧಾರ್ ಕಾರ್ಡ್
  • ಪಡಿತರ ಚೀಟಿ
  • ವೋಟರ್ ಐಡಿ
  • ಮೊಬೈಲ್ ನಂಬರ್
  • ಪಾನ್ ಕಾರ್ಡ್
  • ಪೋಟೋ

ಖಾತೆಗೆ ಹಣ ಜಮೆ

ಖಾತೆಯಲ್ಲಿ ಹಣ ಇಲ್ಲದಿದ್ದರೂ ನೀವು 10,000 ರೂಪಾಯಿಗಳವರೆಗಿನ ಓವರ್​ಡ್ರಾಫ್ಟ್​ (Overdraft) ಸೌಲಭ್ಯವನ್ನು ಪಡೆದುಕೊಳ್ಳಲು ಅವಕಾಶ ಇದೆ. ಅದೇ ರೀತಿ ಗ್ರಾಮೀಣ ವರ್ಗದ ಮತ್ತು ಬಡವರಿಗೆ ಇದರಿಂದ ಖಾತೆ ತೆರೆಯುವುದು ಸುಲಭವಾಗುತ್ತದೆ. ಬ್ಯಾಂಕಿಂಗ್ ಸೌಲಭ್ಯಗಳಿಂದ ವಂಚಿತರಾದ ಜನರಿಗೆ ಈ ಸೌಲಭ್ಯಗಳನ್ನು ನೀಡಲಾಗುತ್ತದೆ.

ಈ ಸೌಲಭ್ಯ ಇದೆ

ಜನ್ ಧನ್ ಮೂಲಕ ಜನರು ಬ್ಯಾಂಕಿಂಗ್, ಉಳಿತಾಯ, ಠೇವಣಿ ಖಾತೆ, ಪಿಂಚಣಿ, ಕ್ರೆಡಿಟ್ ವಿಮೆ ಇತ್ಯಾದಿ ವಹಿವಾಟು ಮಾಡಬಹುದಾಗಿದ್ದು ಈ ಖಾತೆದಾರರಲ್ಲಿ RuPay ಡೆಬಿಟ್ ಕಾರ್ಡ್‌ಗಳ ಬಳಕೆ ಅದರ ಜೊತೆಗೆ ಡಿಜಿಟಲ್ ಪಾವತಿಗಳ ಪ್ರೋತ್ಸಾಹ, ಕಿರು ಸಾಲಗಳು, ಡೆಪಾಸಿಟ್‌ (Deposit) ಇತ್ಯಾದಿ ಸೌಲಭ್ಯಗಳನ್ನು ಸಹ ನೀಡಲಾಗುತ್ತದೆ. ಇನ್ನು ಪ್ರಧಾನ ಮಂತ್ರಿ ಜನ ಧನ ಯೋಜನೆಯ ಮೂಲಕ ನೀವು ಜಂಟಿ ಖಾತೆಯನ್ನು ಕೂಡಾ ತೆರೆಯುವ ಅವಕಾಶವಿದ್ದು ಯಾವುದೇ ಬ್ಯಾಂಕ್ ನಲ್ಲಿ‌ ಜಂಟಿ ಖಾತೆಯನ್ನು ತೆರೆಯಲು ಅವಕಾಶ ಸಹ ಇದೆ.

advertisement

Leave A Reply

Your email address will not be published.