Karnataka Times
Trending Stories, Viral News, Gossips & Everything in Kannada

7th Pay Commission: ಕೇಂದ್ರ ಸರ್ಕಾರಿ ನೌಕರರ ವೇತನ ಹೆಚ್ಚಳ ಸುದ್ದಿ, ಮೂಲ ವೇತನದಲ್ಲಿ ಭಾರೀ ಹೆಚ್ಚಳ ನಿರೀಕ್ಷೆ!

advertisement

ಹೊಸ ವರ್ಷದ ಆರಂಭದಲ್ಲಿ ಹೊಸ ಸುದ್ದಿ ಬಂದಿದೆ. ಎಲ್ಲಾ ಸರ್ಕಾರಿ ನೌಕರರು ಇನ್ನಷ್ಟು ಖುಷಿಯಿಂದ ಹೊಸ ವರ್ಷ ಆಚರಿಸುವ ಸುದ್ದಿ ಇದಾಗಿದೆ. ಮಾಧ್ಯಮದ ವರದಿಗಳು ನಿಜ ಎಂದಾದರೆ ಸರ್ಕಾರಿ ನೌಕರರೆಲ್ಲ ಬಹಳ ಖುಷಿ ಪಡುವ ಸಮಯ ಬಹಳ ದೂರವಿಲ್ಲ ನೀವು ಈಗಾಗಲೇ ಈ ಸುದ್ದಿ ಏನೆಂದು ಊಹಿಸಿರಬಹುದು. ನಿಮ್ಮ ಊಹೆ ನಿಜವಾಗಿದೆ. ಸರ್ಕಾರಿ ನೌಕರರ ಬಹು ದಿನಗಳ ಬೇಡಿಕೆ ಮತ್ತು ಯಾವುದೇ ಒಮ್ಮತಕ್ಕೆ ಬರಲಾಗದೇ ಬಾಕಿ ಉಳಿದಿದ್ದ ಫಿಟ್ ಮೆಂಟ್ ನ ಮೇಲೆ ಈಗ ಒಮ್ಮತಕ್ಕೆ ಬರಲಾಗಿದ್ದು ವೇತನ (Salary) ಹೆಚ್ಚಳ ಗ್ಯಾರಂಟಿ ಎನ್ನಲಾಗಿದೆ.

ಮಾಧ್ಯಮಗಳ ವರದಿಗಳ ಪ್ರಕಾರ ಸರ್ಕಾರಿ ನೌಕರರ ವೇತನಗಳು (Govt Employees Salary) ಹೆಚ್ಚಾಗುವ ಎಲ್ಲಾ ನಿರೀಕ್ಷೆಗಳು ಇವೆ. ಇದು ದೇಶದ 50 ಲಕ್ಷ ಉದ್ಯೋಗಿಗಳಿಗೆ ಸಹಾಯ ಆಗಲಿದೆ. ಮೂಲವೇತನದಲ್ಲಿ ಬದಲಾವಣೆಯಾಗುವ ಸುದ್ದಿ ಅಧಿಕಾರಿಗಳ ವಲಯದಲ್ಲಿ ಖಚಿತ ಸುದ್ದಿ ಎಂಬ ಮಾಹಿತಿ ಹರಿದಾಡುತ್ತಿದೆ.

 

 

ರೂ. 26,000 ಗಳಿಗೆ ಏರಿಕೆಯಾಗಲಿದೆ ಮೂಲವೇತನ – ಫಿಟ್ ಮೆಂಟ್ ನ ಬಗ್ಗೆ ಬಾಕಿ ಇದ್ದ ಒಮ್ಮತಕ್ಕೆ ಈಗ ಬರಲಾಗಿದೆ, ಮಾಧ್ಯಮಗಳ ವರದಿ ನಿಜ ಎಂದಾದಲ್ಲಿ ಮೂಲವೇತನ (Basic Salary) ರೂ. 26,000 ಗಳಿಗೆ ಏರಿಕೆಯಾಗಲಿದೆ ಎಂದು ಹೇಳಲಾಗಿದೆ. ಇದಕ್ಕಾಗಿ ಕರಡು ಸಿದ್ಧಪಡಿಸಲಾಗುತ್ತಿದ್ದು ಮುಂಬರುವ ಬಜೆಟ್ ನಲ್ಲಿ ಇದು ಘೋಷಣೆಯಾಗಲಿದೆ ಎನ್ನಲಾಗಿದೆ. ಈ ಹೆಚ್ಚಳ ನಿಜ ಎಂದಾದಲ್ಲಿ ಪ್ರತಿ ಉದ್ಯೋಗಿಯ ವೇತನದಲ್ಲಿ ಸುಮಾರು 8,000 ದಷ್ಟು ಹೆಚ್ಚಳವಾಗಲಿದೆ.

advertisement

ಫಿಟ್ ಮೆಂಟ್ (Fitment) ಬಗ್ಗೆ ಕಳೆದ ಹಲವಾರು ವರ್ಷಗಳ ಚರ್ಚೆಗಳಲ್ಲಿ ಯಾವುದೇ ಒಮ್ಮತಕ್ಕೆ ಬರಲಾಗಿರಲಿಲ್ಲ. ಇದೇ ಕಾರಣದಿಂದ ಮೂಲವೇತನದಲ್ಲಿ ಯಾವುದೇ ಹೆಚ್ಚಳ ಆಗಿರಲಿಲ್ಲ. ಆದರೆ ಈಗ ಫಿಟ್ ಮೆಂಟ್ ನ ಬಗ್ಗೆ ಒಮ್ಮತಕ್ಕೆ ಬರಲಾಗಿದೆ ಎನ್ನಲಾಗಿದೆ.

ಬಜೆಟ್ ನಲ್ಲಿ ಘೋಷಣೆ ಸಾಧ್ಯತೆ:

ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ (Nirmala Sitharaman) ಅವರು ಫೆಬ್ರವರಿ 2024 ರಂದು ಮಧ್ಯಂತರ ಬಜೆಟ್ ಮಂಡಿಸಲಿದ್ದಾರೆ. ಈ ಬಜೆಟ್ ನಲ್ಲಿ ವೇತನ ಆಯೋಗದ ಈ ಬದಲಾವಣೆ ಸೇರಿರಲಿದೆ ಎನ್ನಲಾಗಿದೆ. ಪಿಟ್ಮೆಂಟನ್ನು 2.57% ನಿಂದ 3.68% ಗೆ ಏರಿಸಲಾಗುತ್ತಿದೆ ಎನ್ನಲಾಗಿದೆ.

ಇದರಿಂದಾಗಿ ಮೂಲವೇತನ 18 ಸಾವಿರದಿಂದ ಹೆಚ್ಚಳವಾಗಿ 26 ಸಾವಿರಕ್ಕೆ ನಿಗದಿಯಾಗಲಿದೆ. ಇದರ ಮೂಲಕ ಕೇಂದ್ರ ಸರ್ಕಾರಿ ನೌಕರರ ಸಂಬಳಗಳು (Govt Employees Salaries) ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಲಿವೆ. ಮೂಲಗಳ ಪ್ರಕಾರ ಸಾರ್ವತ್ರಿಕ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇದೆ. ಇದಕ್ಕೂ ಮೊದಲು ಮಂಡನೆ ಆಗಲಿರುವ ಮಧ್ಯಂತರ ಬಜೆಟ್ ನಲ್ಲಿ ಈ ಅಂಶ ಖಂಡಿತವಾಗಿ ಬರಲಿದೆ ಎಂದು ಅಧಿಕಾರಿಗಳು ಹೇಳಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿಗಳು ಹೊರಬೀಳದೆ ಇದ್ದರೂ ವರದಿಗಳು ಬಂದಿರುವ ಪ್ರಕಾರ ಈ ಸುದ್ದಿ ನಿಜವಾಗಲಿದೆ.

advertisement

Leave A Reply

Your email address will not be published.