Karnataka Times
Trending Stories, Viral News, Gossips & Everything in Kannada

Call List: ಮೊಬೈಲ್ ನಲ್ಲಿ ಆರು ತಿಂಗಳ ಹಳೆ ಕಾಲ್ ಲೀಸ್ಟ್ ಪಡೆಯಬೇಕೆ? ಹಾಗಾದರೆ ಈ ಕ್ರಮ ಅನುಸರಿಸಿ!

advertisement

ಸ್ಮಾರ್ಟ್ ಫೋನ್ (Smartphone) ಯುಗದಲ್ಲಿ ಎಲ್ಲ ವ್ಯವಹಾರ ಕೂಡ ಸ್ಮಾರ್ಟ್ ಪರಿಕಲ್ಪನೆಯ ಅಡಿಯಲ್ಲಿ ಬರುತ್ತಿದೆ ಎಂದು ಹೇಳಬಹುದು. ಇಂದು ಶ್ರೀಮಂತರಿಂದ ಸಣ್ಣ ಪುಟ್ಟ ಅಂಗಡಿಯವರೆಗೂ ಕೂಡ ಅನೇಕರು ಸ್ಮಾರ್ಟ್ ಫೋನ್ ಬಳಕೆ ಮಾಡುತ್ತಿರುವುದನ್ನು ನಾವು ಕಾಣಬಹುದು. ಇಂದು ಫೋನ್ ಸಂವಹನ ಮಾಧ್ಯಮವಾಗಿ ಕಾರ್ಯ ನಿರ್ವಹಿಸುತ್ತಿದ್ದು ಜನರಿಗೆ ಬಹಳ ಉಪಯೋಗ ಆಗಿದೆ‌.

ಮಾತನಾಡಲು, ಚಾಟ್ ಮಾಡಲು, ಗೇಮ್ ಆಡಲು, ಮಾಹಿತಿ ಪಡೆಯಲು ಇನ್ನು ಅನೇಕ ರೀತಿಯಲ್ಲಿ ಫೋನ್ ಬಳಕೆ ಪ್ರಚಲಿತದಲ್ಲಿದೆ. ಅದೇ ರೀತಿ ಅನೇಕ ಬಾರಿ ನಮಗೆ ಫೋನ್ ಮಾಡಿದ್ದ ನಂಬರ್ ಅನ್ನು ಸೇವ್ ಮಾಡಬೇಕು ಎಂದು ಅಂದುಕೊಂಡು ಮರೆತು ಬಿಡುವುದು ಇದೆ. ಹಾಗೇಯೆ ಅನೇಕ ಕಾರಣಕ್ಕೆ ನಮ್ಮ ಕಾಲ್ ಲೀಸ್ಟ್ (Call List) ಕೂಡ ಬೇಕಾಗುವುದಾಗಿದ್ದು ನಿರ್ದಿಷ್ಟ ಸಮಯದ ಬಳಿಕ ಕಾಲ್ ಲೀಸ್ಟ್ ಮಾಹಿತಿ ಸಿಕ್ಕಿಲ್ಲ ಅನ್ನೊರಿಗೆ ಈ ಬಗ್ಗೆ ಮಹತ್ವದ ಮಾಹಿತಿ ಇಲ್ಲಿದೆ. ಆರು ತಿಂಗಳ ಕಾಲ್ ಲೀಸ್ಟ್ ಬೇಕಾದಲ್ಲಿ ಕೆಲ ಅಗತ್ಯ ಕೆಲಸ ನೀವು ಮಾಡಬೇಕಾಗುತ್ತದೆ.

ಹಳೆ ಕಾಲ್ ಲೀಸ್ಟ್ ವ್ಯಾಪಾರ ವ್ಯವಹಾರದ ಉದ್ದೇಶಕ್ಕಾಗಿ, ವೈಯಕ್ತಿಕ ಮಾಹಿತಿ ತಿಳಿಯಲು, ಕೆಲ ಪ್ರಮುಖ ಸಂಪರ್ಕದ ಮೇಲೆ ನಿಗಾ ಇಡಲು ಹೀಗೆ ಅನೇಕ ಕಾರಣಕ್ಕೆ ಬಹಳ ಅಗತ್ಯವಾಗಿದ್ದು ಇದನ್ನು ಪಡೆಯುವ ಕ್ರಮದ ಬಗ್ಗೆ ತಿಳಿಯುವ ಸಲುವಾಗಿ ಜಿಯೋ ಮತ್ತು ಏರ್ಟೆಲ್ ಕಂಪೆನಿಯ ಸೇವೆಯಲ್ಲಿ ಈ ಪ್ರಯೋಜನದ ಬಗ್ಗೆ ತಿಳಿಸಲಿದ್ದೇವೆ.

advertisement

ಏರ್ಟೆಲ್ ಸೇವೆ ಹೇಗಿದೆ?

  • ಏರ್ಟೆಲ್ ನಲ್ಲಿ ಎರಡು ಪ್ರಮುಖ ಕ್ರಮ ಅನುಸರಿಸುವ ಮೂಲಕ ಆರು ತಿಂಗಳ ಕಾಲ್ ಲೀಸ್ಟ್ ಪಡೆಯಬಹುದು. ಮೊದಲನೇಯದ್ದಾಗಿ ನೀವು ಮೆಸೇಜ್ ಮಾಡುವ ಮೂಲಕ 121 ಸಂಖ್ಯೆಗ EPREBILL ಎಂದು ಟೈಪ್ ಮಾಡಿ ಕಳುಹಿಸಿ. ಬಳಿಕ ನಿರ್ದಿಷ್ಟ ದಿನಾಂಕದಲ್ಲಿ ಕರೆ ಮಾಡಿದ್ದ ಅವಧಿ ಯಾವ ಮಾಹಿತಿ ಅಗತ್ಯ ಎಂಬುದನ್ನು ಅದರಲ್ಲಿ ತಿಳಿಸಿ ಮೆಸೇಜ್ ಕಳುಹಿಸಬೇಕು ಅದರ ಜೊತೆಗೆ ನಿಮ್ಮ ಇಮೇಲ್ ಐಡಿ ಕೂಡ ನಮೋದಿಸಬೇಕು. ಹೀಗೆ ಮಾಹಿತಿ ಲಭ್ಯವಾಗಲಿದೆ.
  • ಇನ್ನೊಂದು ವಿಧಾನ ಎಂದರೆ ವೆಬ್ಸೈಟ್ ಮೂಲಕ ಏರ್ಟೆಲ್ ಅನ್ನು ಸಂಪರ್ಕ ಮಾಡುವುದು. ಅಂದರೆ ಕಸ್ಟಮರ್ ಕೇರ್ ಸಂಪರ್ಕಿಸುವುದು ಅಥವಾ ಏರ್ಟೆಲ್ ಸ್ಟೋರ್ ಗೆ ವೈಯಕ್ತಿಕವಾಗಿ ಭೇಟಿ ನೀಡುವುದು.ಖಾತೆ ಪರಿಶೀಲನೆಗೆ ಕೆಲ ಅಗತ್ಯ ಗುರುತಿನ ಮಾಹಿತಿ ನೀಡುವ ಜೊತೆಗೆ ಶುಲ್ಕ ಕೂಡ ಕಟ್ಟಬೇಕು.

ಜಿಯೋ ಸೇವೆ ಹೀಗಿರಲಿದೆ

ಜಿಯೋ ಸೇವೆ ಏರ್ಟೆಲ್ ಗಿಂತ ಸ್ವಲ್ಪ ಭಿನ್ನವಾಗಿದ್ದು ಮೈ ಜಿಯೋ ಅಪ್ಲಿಕೇಶನ್ ಸಹಾಯದಿಂದ ನಿಮಗೆ ಹಳೆ ಕಾಲ್ ಲೀಸ್ಟ್ ಮಾಹಿತಿ ಪಡೆಯಬಹುದು. ಅಪ್ಲಿಕೇಶನ್ ನಲ್ಲಿ ಲಾಗಿನ್ ಆಗಿ ಜಿಯೋ (Jio)ಸಂಖ್ಯೆ ನಮೋದಿಸಿ ನನ್ನ ಹೇಳಿಕೆ ವಿಭಾಗದ ಮೇಲೆ ಕ್ಲಿಕ್ ಮಾಡಿ. ಅಪ್ಲಿಕೇಶನ್ ಮೇಲಿನ ಎಡಭಾಗಕ್ಕೆ ಮೂರು ಅಡ್ಡ ರೇಖೆಗಳು ಕಾಣಲಿದ್ದು ಅದರಲ್ಲಿ ನನ್ನ ಹೇಳಿಕೆ ಆಯ್ಕೆ ಮೇಲೆ ಟ್ಯಾಪ್‌ ಮಾಡಬೇಕು. ಯಾವ ದಿನದ ಕರೆ ಮಾಹಿತಿ ಪಡೆಯಬೇಕೆಂಬ ನಿರ್ದಿಷ್ಟ ದಿನಾಂಕ ನಮೋದಿಸಿದರೆ ಬೇಕಾದ ಮಾಹಿತಿ ಕೂಡಲೇ ಲಭ್ಯವಾಗಲಿದೆ.

advertisement

Leave A Reply

Your email address will not be published.