Karnataka Times
Trending Stories, Viral News, Gossips & Everything in Kannada

Vastu Tips: ವಾಸ್ತು ಪ್ರಕಾರ ಮನೆಯಲ್ಲಿ ರಾಧಾಕೃಷ್ಣನ ಫೋಟೋ ಯಾವ ದಿಕ್ಕಿನಲ್ಲಿ ಇಡಬೇಕು?

advertisement

ಮನೆ ಕಟ್ಟುವಾಗ ಅಥವಾ ಮನೆಯನ್ನು ಕಟ್ಟಿದ ಬಳಿಕ ಮನೆಗೆ ಬೇಕಾಗುವ ಸಾಮಗ್ರಿಗಳನ್ನು ಇಡುವಾಗ ವಾಸ್ತುವನ್ನು ಗಮನಿಸುವುದು ಬಹಳ ಮುಖ್ಯವಾಗಿರುತ್ತದೆ. ಮನೆಯು ಅಭಿವೃದ್ಧಿ (Development) ಹೊಂದಬೇಕಾದರೆ ವಾಸ್ತುವಿನ ಪಾಲು ಬಲುದೊಡ್ಡದಿದೆ. ಅದಲ್ಲದೆ ಮನೆಯಲ್ಲಿ ಯಾವುದೇ ವಸ್ತುಗಳನ್ನು ಯಾವುದೇ ಸ್ಥಳದಲ್ಲಿ ಇಡುವಾಗ ಅದರ ಬಗ್ಗೆ ಹೆಚ್ಚಿನ ಗಮನ ಕೊಡಿ. ಈ ಮೂಲಕ ಮನೆಯಲ್ಲಿ ಎಲ್ಲಾ ವಸ್ತುಗಳನ್ನು ವಾಸ್ತುಗೆ ಅನುಗುಣವಾಗಿ ಇಟ್ಟರೆ, ಜೀವನ ಮೇಲೆ ಪರಿಣಾಮ ಬೀರುವುದಿಲ್ಲ. ಅದರಲ್ಲಿಯು ಮನೆಯಲ್ಲಿ ರಾಧಾಕೃಷ್ಣರ ಫೋಟೋ (Radhakrishana Photo) ಗಳನ್ನು ಎಲ್ಲಿಟ್ಟರೆ ಉತ್ತಮ ಎನ್ನುವ ಗೊಂದಲವಿರುತ್ತದೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರವಾಗಿ ರಾಧಾಕೃಷ್ಣರ ಫೋಟೋಗಳನ್ನು ಎಲ್ಲಿಟ್ಟರೆ ಉತ್ತಮ ಎನ್ನುವುದಕ್ಕೆ ಉತ್ತರ ಇಲ್ಲಿದೆ.

advertisement

  • ಮಲಗುವ ಕೋಣೆಯಲ್ಲಿ ದೇವರ ಫೋಟೊವನ್ನು ಹಾಕಬಾರದು. ಆದರೆ ಮಲಗುವ ಕೋಣೆಯಲ್ಲಿ ರಾಧಕೃಷ್ಣರ ಫೋಟೊವನ್ನು ಹಾಕಿದರೆ ಒಳ್ಳೆಯದು ಎನ್ನಲಾಗುತ್ತದೆ. ಹೀಗೆ ಇಡುವುದರಿಂದ ದಾಂಪತ್ಯ ಜೀವನ ಸುಖಕರವಾಗಿರುವುದರ ಜೊತೆಗೆ ದಂಪತಿಗಳ ನಡುವೆ ಪ್ರೀತಿ, ವಿಶ್ವಾಸವು ಸದಾ ಕಾಲ ತುಂಬಿರುತ್ತದೆ.
  • ಗರ್ಭಿಣಿಯರ ಕೋಣೆಯಲ್ಲಿ ಮುದ್ದು ಕೃಷ್ಣನ ಪೋಟೊವನ್ನು ಇಡುವುದು ಉತ್ತಮ. ಈ ಫೋಟೋವನ್ನು ಗರ್ಭಿಣಿ ಮಹಿಳೆಯರು ನೋಡುತ್ತಿದ್ದರೆ ಸದಾ ಸಂತೋಷದಿಂದ ಕೂಡಿರುತ್ತವೆ. ಯಾವುದೇ ನಕಾರಾತ್ಮಕ ಆಲೋಚನೆಗಳು ಬರುವುದಿಲ್ಲ.
  • ಮಲಗುವ ಕೋಣೆಯಲ್ಲಿ ರಾಧಾಕೃಷ್ಣರ ಪೋಟೊವನ್ನು ಈಶಾನ್ಯ ದಿಕ್ಕಿನಲ್ಲಿ ಇಟ್ಟು, ಪೂಜೆ ಮಾಡಿದರೆ ಒಳ್ಳೆಯದಂತೆ.
  • ವಾಸ್ತು ಪ್ರಕಾರ ಮನೆಯಲ್ಲಿ ಬಾಲ ಕೃಷ್ಣ ಪೋಟೊವನ್ನು ಪೂರ್ವ ದಿಕ್ಕಿನಲ್ಲಿ ಹಾಕುವುದು ಉತ್ತಮ ಎನ್ನಲಾಗಿದೆ.

advertisement

Leave A Reply

Your email address will not be published.