Karnataka Times
Trending Stories, Viral News, Gossips & Everything in Kannada

HSRP Number Plate: HSRP ದಂಡ ವಿಧಿಸಲುಕೆಲವೇ ದಿನ ಬಾಕಿ! ಇದರ ಬೆನ್ನಲ್ಲೇ ಹೊಸ ರಿಪೋರ್ಟ್ ಕೊಟ್ಟ ಇಲಾಖೆ

advertisement

ಕರ್ನಾಟಕದ ಪ್ರತಿ ವಾಹನಗಳಿಗೂ HSRP ನಂಬರ್ ಪ್ಲೇಟ್ (HSRP Number Plate) ಅನ್ನು ಅಳವಡಿಸುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ ಹಾಗೂ ಹಲವು ಬಾರಿ ಗಡುವಿನ ದಿನಾಂಕವನ್ನು ಮುಂದುವರಿದರು ಕೂಡ ವಾಹನ ಮಾಲೀಕರು ತಮ್ಮ ಬೇಜವಾಬ್ದಾರಿ ತನದಿಂದಾಗಿ ಡೆಡ್ ಲೈನ್ ಹತ್ತಿರ ಬಂದರೂ ಇಂದಿಗೂ ತಮ್ಮ ಬಳಿ ಇರುವಂತಹ ವಾಹನಕ್ಕೆ HSRP ಅಳವಡಿಕೆ ಮಾಡಿಲ್ಲ, ಅದರಲ್ಲೂ ಕರ್ನಾಟಕದಾದ್ಯಂತ ಇರುವ 2 ಕೋಟಿ ವಾಹನಗಳಲ್ಲಿ ಕೇವಲ 35.5 ಲಕ್ಷ ವಾಹನಗಳಿಗೆ ಮಾತ್ರ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್ (High Security Registration Plate) ಗಳ ಅಳವಡಿಕೆಯಾಗಿದೆ.

ಡೆಡ್ಲೈನ್ ಹತ್ತಿರ ಬಂದರೂ,1 ಕೋಟಿಗೂ ಹೆಚ್ಚಿನ ವಾಹನಗಳಲ್ಲಿ HSRP ಇಲ್ಲ!

ಕರ್ನಾಟಕ ಸರ್ಕಾರವು ಏಪ್ರಿಲ್ 1, 2019 ರಂದು ಪ್ರತಿ ವಾಹನಗಳಿಗೂ HSRP Number Plate ಅನ್ನು ಕಡ್ಡಾಯವಾಗಿ ಅಳವಡಿಸಬೇಕೆಂಬ ಆದೇಶ ಹೊರಡಿಸಿತು ಹಾಗೂ ಆಗಸ್ಟ್ 2023 ರವರೆಗೂ ಗಡುವಿನ ದಿನಾಂಕವನ್ನು ನೀಡಿತ್ತು. ಆ ಅವಧಿಯಲ್ಲಿ ಹೆಚ್ಚಿನ ವಾಹನ ಮಾಲೀಕರು ತಮ್ಮ ಗಾಡಿಗೆ HSRP ಹಾಕಲಾಗದ ಕಾರಣ ನವೆಂಬರ್ 17, 2023ರವರೆಗೂ ಗಡುಗಿನ ದಿನಾಂಕವನ್ನು ವಿಸ್ತರಿಸಲಾಯಿತು ಅನಂತರ ಫೆಬ್ರವರಿ 17 2024. ಇದೀಗ ಮೇ 31, 2024ರ ಡೆಡ್ ಲೈನ್ ಹತ್ತಿರ ಬಂದರೂ ಕೂಡ ಇಂದಿಗೂ 1ಕೋಟಿ 65 ಲಕ್ಷ ವಾಹನಗಳಿಗೆ HSRP ನಂಬರ್ ಪ್ಲೇಟ್ ಗಳನ್ನು ಅಳವಡಿಕೆ ಮಾಡಿಲ್ಲ.

HSRP ಇಲ್ಲದೆ ವಾಹನ ಚಲಾವಣೆ ಮಾಡಿದರೆ, ಶಿಸ್ತು ಬದ್ಧಕ್ರಮ!

 

Image Source: Times of India

 

ಸಾರಿಗೆ ಹೆಚ್ಚುವರಿ ಆಯುಕ್ತರಾದ ಮಲ್ಲಿಕಾರ್ಜುನ (Additional Commissioner of Transport Mallikarjun) ಇತ್ತೀಚಿಗಷ್ಟೇ ಡೆಕನ್ ಹೇರಾಲ್ಡ್ ಜೊತೆಗೆ ನಡೆಸಿದ ಸಂದರ್ಶನದಲ್ಲಿ HSRP ನಂಬರ್ ಪ್ಲೇಟ್ ಅಳವಡಿಕೆ ಮಾಡದ ವಾಹನ ಸವಾರರ ಮೇಲೆ ಶಿಸ್ತು ಬದ್ಧ ಕ್ರಮ (Strict Action) ಕೈ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ. ಹಲವು ಬಾರಿ ಗಡುವಿನ ದಿನಾಂಕವನ್ನು ಮುಂದೂಡುತ್ತ ಬಂದರು ಕೂಡ ವಾಹನ ಸವಾರರು ಇಂದಿಗೂ ತಮ್ಮ ಬಳಿ ಇರುವಂತಹ ವಾಹನಗಳಿಗೆ HSRP Number Plate ಅಳವಡಿಕೆ ಮಾಡದೆ ಇರುವುದರಿಂದ ಮೇ 31ರ ಬಳಿಕ ಸಾರಿಗೆ ಇಲಾಖೆ (Transport Department) ವಾಹನ ಸವಾರರ ಮೇಲೆ ಶಿಸ್ತು ಬದ್ಧ ಕ್ರಮವನ್ನು ಕೈ ತೆಗೆದುಕೊಳ್ಳುವುದಲ್ಲದೆ ದಂಡವನ್ನು ಹಾಕುತ್ತಾರೆ.

₹500-1000 ದಂಡ:

advertisement

HSRP ನಂಬರ್ ಪ್ಲೇಟ್ ಇಲ್ಲದ ವಾಹನ ಸವಾರರು ಮೊದಲ ಬಾರಿಗೆ ಸಾರಿಗೆ ಇಲಾಖೆಯ ಸಿಬ್ಬಂದಿಗಳ ಬಳಿ ಸಿಕ್ಕು ಬಿದ್ದರೆ, 500 ರೂಪಾಯಿ ದಂಡವನ್ನು ಹಾಕಲಾಗುತ್ತದೆ. ಇದಾದ ನಂತರವೂ HSRP ಅಳವಡಿಸದೆ ಹೋದಲ್ಲಿ ಸಾವಿರ ರೂಪಾಯಿ ದಂಡ (Rs 1000 Fine) ಹಾಕುವುದಾಗಿ ಸಾರಿಗೆ ಹೆಚ್ಚುವರಿ ಆಯುಕ್ತ ಮಲ್ಲಿಕಾರ್ಜುನ ಅವರು ತಿಳಿಸಿದ್ದಾರೆ.

ಸಾಮಾನ್ಯ ನಂಬರ್ ಪ್ಲೇಟ್ ಮತ್ತು HSRP ನಡುವಿನ ವ್ಯತ್ಯಾಸ:

 

Image Source: Paytm

 

ಇತರೆ ಸಾಮಾನ್ಯ ನಂಬರ್ ಪ್ಲೇಟ್ ಗಳಿಗೆ ಹೋಲಿಸಿದರೆ HSRP Number Plate ನಲ್ಲಿ ಅತ್ಯಾಕರ್ಷಕ ಫೀಚರ್ಸ್ಗಳನ್ನು ಅಳವಡಿಕೆ ಮಾಡಲಾಗಿದ್ದು, ಇದರಲ್ಲಿ ಕ್ರೋಮಿಯಂ ಅಳವಡಿಕೆಯ ಹೋಲೋಗ್ರಾಮ್ ಜೊತೆಗೆ ಲೇಸರ್ ಬಳಸಿ ಕೆತ್ತಲಾಗಿರುವ 12 ಸಂಖ್ಯೆಯ ಆಲ್ಫಾ ನ್ಯೂಮರಿಕ್ ಗುರುತಿನ ನಂಬರ್ (12 Digit Alphanumeric Identification Number) ಇದೆ. ಇದನ್ನು ವಾಹನ ಪೋರ್ಟಲ್ನಲ್ಲಿ (Vahan Portal) ಪರಿಶೀಲಿಸಿದರೆ ವಾಹನದ ಹಾಗೂ ಅದರ ಮಾಲೀಕರ ಸಂಪೂರ್ಣ ಮಾಹಿತಿಯನ್ನು ತೋರುತ್ತದೆ.

HSRP ನಂಬರ್ ಪ್ಲೇಟ್ಗಳನ್ನು ವಾಹನದ ಮುಂಭಾಗ ಹಾಗೂ ಹಿಂಭಾಗದಲ್ಲಿ ಅಳವಡಿಕೆ ಮಾಡಲಾಗುತ್ತದೆ. ಇದರಿಂದಾಗಿ ಯಾವುದೇ ಅವಘಡಗಳು ಸಂಭವಿಸಿದಾಗ ವಾಹನದ ಕುರಿತು ಸಂಪೂರ್ಣ ಮಾಹಿತಿಯನ್ನು ಕಲೆ ಹಾಕಬಹುದು. ಇನ್ನು ಸಾಮಾನ್ಯ ನಂಬರ್ ಪ್ಲೇಟ್ (Normal Number Plate) ಗಳಂತೆ HSRP ನಂಬರ್ ಪ್ಲೇಟನ್ನು ತಿದ್ದಲಾಗುವುದಿಲ್ಲ ಹಾಗೂ ಅಕ್ರಮ ಚಟುವಟಿಕೆಗಳಲ್ಲಿ ಬಳಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಇದರಿಂದ ವಾಹನದ ಅಪರಾಧ ಚಟುವಟಿಕೆಗಳನ್ನು ತಡೆಗಟ್ಟಬಹುದು.

HSRP ನಂಬರ್ ಪ್ಲೇಟ್ ಪಡೆಯಲು ಈ ಲಿಂಕನ್ನು ಅನುಸರಿಸಿ:

https://transport.karnataka.gov.in/ ಅಥವಾ www.Siam.in ಗೆ ಭೇಟಿ ನೀಡಿ BOOK HSRP ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ ಕೇಳಲಾಗುವಂತಹ ದಾಖಲಾತಿಗಳನ್ನು ಸರಿಯಾಗಿ ನಮೂದಿಸಿದ ಬಳಿಕ ಆನ್ಲೈನ್ ನಲ್ಲಿ ಪೇಮೆಂಟ್ ಮಾಡಿದರೆ, HSRP ನಂಬರ್ ಪ್ಲೇಟ್ ಹಾಕಿಸಿಕೊಳ್ಳಲು ಸ್ಲಾಟ್ ಫಿಕ್ಸ್ ಆಗುತ್ತದೆ.

advertisement

Leave A Reply

Your email address will not be published.